ಹುಚ್ಚಾಸ್ಪತ್ರೆ ಸೇರಿದ ಸೆಲೆಬ್ರಿಟಿ ಹಾಸ್ಯ ಕಲಾವಿದ: ಸಿಗಲಿಲ್ಲ ಸೆಲೆಬ್ರಿಟಿ ಸ್ನೇಹಿತರ ನೆರವು

0 2

ಒಂದು ಹಂತದಲ್ಲಿ ಸ್ಟಾರ್ ಆಗಿ ಮೆರೆದು, ಜನಪ್ರಿಯತೆಯ ಉತ್ತುಂಗದಲ್ಲಿದ್ದ ತೇಲಿ, ಸೆಲೆಬ್ರಿಟಿ ಎನ್ನುವ ಗೌರವವನ್ನು ಪಡೆದುಕೊಂಡು ಅನಂತರ ಎಲ್ಲವನ್ನು ಕಳೆದುಕೊಂಡು ಕಂಗಾಲಾಗಿ ಬೀದಿಗೆ ಬಂದ ಸಿನಿಮಾ ಹಾಗೂ ಕಿರುತೆರೆಯ ಕಲಾವಿದರ ಕಥೆಗಳಿಗೆ ಕಡಿಮೆಯೇನಿಲ್ಲ. ಅಂತಹ ನೋವಿನ ಕಥೆಗಳಿಗೆ ಈಗ ಹೊಸದಾಗಿ ಸೇರ್ಪಡೆ ಆಗಿದ್ದಾರೆ ಕಿರುತೆರೆ ಲೋಕದಲ್ಲಿ ಒಂದು ದಶಕ ಕಾಲ ಸ್ಟಾಂಡ್ ಅಪ್ ಕಮಿಡಿಯನ್ ಆಗಿ, ಕಿರುತೆರೆಯ ಲೋಕದಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದೆ ಹಾಸ್ಯ ಕಲಾವಿದ ಸಿದ್ದಾರ್ಥ್ ಸಾಗರ್. ಇವರು ಟಿವಿ ಕ್ಷೇತ್ರಕ್ಕೆ ಹದಿಹರೆಯದ ವಯಸ್ಸಿನಲ್ಲಿಯೇ ಹಾಸ್ಯ ಕಲಾವಿದನಾಗಿ ಪ್ರವೇಶವನ್ನು ಮಾಡಿದರು. ಹಿಂದಿ ಕಿರುತೆರೆಯ ಲೋಕದ ಜನಪ್ರಿಯ ರಿಯಾಲಿಟಿ ಶೋಗಳ ಭಾಗವಾಗದರು. ಇಂದು ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದಿರುವ ಕಪಿಲ್ ಶರ್ಮ, ಸುದೇಶ್ ಲೆಹ್ರಿ, ಕೃಷ್ಣ ರಂತಹ ಹಾಸ್ಯ ಕಲಾವಿದರ ಜೊತೆಗೆ ತೆರೆಯನ್ನು ಹಂಚಿಕೊಂಡವರು ಸಿದ್ದಾರ್ಥ್ ಸಾಗರ್.

2009ರಿಂದ ಕಿರುತೆರೆಯ ತನ್ನ ಪಯಣವನ್ನು ಪ್ರಾರಂಭಿಸಿದ ಸಿದ್ದಾರ್ಥ್ ಒಂದು ದಶಕದ ಕಾಲ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಜನರಿಗೆ ಮನರಂಜನೆಯನ್ನು ನೀಡಿದ್ದರು. ಆದರೆ ಅವಕಾಶಗಳು ಕಡಿಮೆಯಾದಾಗ ಖಿನ್ನತೆಗೆ ಒಳಗಾದ ಸಿದ್ದಾರ್ಥ್ ಮಾನಸಿಕ ರೋಗಗಳಿಗೆ ತುತ್ತಾದರು. ಅದು ಸಾಲದೆಂಬಂತೆ ಮ ಧ್ಯ ಪಾನ, ಮಾ ದ ಕ ವಸ್ತುಗಳ ಸೇವನೆ ಅವರ ಆರೋಗ್ಯದ ಮೇಲೆ ಇನ್ನಷ್ಟು ಪರಿಣಾಮವನ್ನು ಬೀರಿತು. ಅಲ್ಲದೇ ಸಿದ್ದಾರ್ಥ್ ತಮ್ಮ ತಾಯಿ ತನ್ನನ್ನು ಮನೆಯಲ್ಲಿ ಬಂಧಿಸಿದ್ದಾರೆ ಎಂದೂ, ತನ್ನ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದೂ, ತನಗೆ ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದ್ದಾರೆ ಎಂದೂ ಕೂಡಾ ಆರೋಪವನ್ನು ಮಾಡಿದರು.

ಆಗಸ್ಟ್ 27ರಂದು ತೀರ ಹದಗೆಟ್ಟ ಪರಿಸ್ಥಿತಿಯಲ್ಲಿ ಪೊಲೀಸರಿಗೆ ಸಿದ್ದಾರ್ಥ್ ದೊರೆತಿದ್ದು ಅವರನ್ನು ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ವಿವರಗಳನ್ನು ಕೇಳಿದಾಗ, ಸಿದ್ದಾರ್ಥ ತಮ್ಮ ತಾಯಿಯ ನಂಬರನ್ನು ಕೊಟ್ಟಿದ್ದಾರೆ. ಪೊಲೀಸರು ಆಕೆಗೆ ಕರೆ ಮಾಡಿ ವಿಷಯ ತಿಳಿಸಿದಾಗ ದೆಹಲಿಯಿಂದ ಮುಂಬೈಗೆ ಬಂದ ಅವರ ತಾಯಿ ಸಿದ್ಧಾರ್ಥ್ ಅವರನ್ನು ರಿಹ್ಯಾಬಿಲಿಟೇಷನ್ ಸೆಂಟರ್ ಗೆ ದಾಖಲು ಮಾಡಿದ್ದಾರೆ. ಮಗನನ್ನು ತಾನು ಒಂಟಿಯಾಗಿ ಬಿಟ್ಟು ಹೋಗುತ್ತಿರಲಿಲ್ಲ, ಆದರೆ ದೆಹಲಿಯಲ್ಲಿ ಸಾಕಿರುವ ನಾಯಿಯ ಹದಗೆಟ್ಟ ಆರೋಗ್ಯದ ಕಾರಣದಿಂದ ಒಂದೆರಡು ದಿನ ಅಲ್ಲಿಗೆ ಹೋಗಬೇಕಾಯಿತು. ಆ ಸಂದರ್ಭದಲ್ಲಿ ಸಿದ್ಧಾರ್ಥ್ ಗೆ ಹೀಗಾಗಿದೆ ಎಂದು ಹೇಳಿದ್ದಾರೆ.

ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಸಿದ್ಧಾರ್ಥ್ ಅವರಿಗೆ ನಿಯಮಿತವಾಗಿ ಔಷಧಿಗಳನ್ನು ನೀಡಲಾಗುತ್ತಿತ್ತು. ಆದರೆ ಕೆಲವು ದಿನಗಳಿಂದ ಆತ ಔಷಧಿ ಸೇವನೆಯನ್ನು ನಿಲ್ಲಿಸಿದ್ದಾನೆ ಎಂದು ಹೇಳಿರುವ ಅವರ ತಾಯಿ, ಆತನಿಗೆ ಆತನ ಸ್ನೇಹಿತರಿಂದ ಯಾವುದೇ ರೀತಿಯ ಸಹಾಯ ಕೂಡ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಹಿಂದೊಮ್ಮೆ ಇದೇ ರೀತಿಯಾಗಿ ಘಟನೆಯಲ್ಲಿ ಆತನ ಮೈಮೇಲಿನ ಬಟ್ಟೆಯನ್ನು ಕೂಡ ಬಿಚ್ಚಿಕೊಂಡು ಹೋಗಿದ್ದರು ಎಂದು ಸಿದ್ಧಾರ್ಥ್ ಅವರ ತಾಯಿ ವೇದನೆಯನ್ನು ವ್ಯಕ್ತಪಡಿಸಿದ್ದಾರೆ. ದ ಕಪಿಲ್ ಶೋ, ಕಾಮಿಡಿ ಸರ್ಕಸ್, ಜೀ ಕಾಮಿಡಿ ಶೋ ಮುಂತಾದ ಜನಪ್ರಿಯ ಕಾಮಿಡಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಸಿದ್ದಾರ್ಥ್ ಸಾಗರ್ ಅವರ ಪರಿಸ್ಥಿತಿಯ ಕುರಿತಾಗಿ ಅವರ ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದಾರೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Leave A Reply

Your email address will not be published.