ಹೀರೋಯಿನ್ ಗಳ ಶರೀರ, ಹೀರೋಗಳ ಎದೆಯ ಬಗ್ಗೆ ಸೀನಿಯರ್ ನಟಿ ಸಂಚಲನ ಹೇಳಿಕೆಗಳು

Entertainment Featured-Articles Movies News

ಹಿಂದಿನ ನಟರಿಗೆ ಹೋಲಿಕೆ ಮಾಡಿದರೆ ಇಂದಿನ ನಟರಿಗೆ ಅವಕಾಶಗಳು ಹೆಚ್ಚಾಗಿವೆ. ಇದಕ್ಕೆ ಮುಖ್ಯ ಕಾರಣ ಪ್ರಸ್ತುತ ದಿನಗಳಲ್ಲಿ ಎಲ್ಲವೂ ಡಿಜಿಟಲ್ ಮೀಡಿಯಾ ಯುಗವಾಗಿದೆ. ಆದ್ದರಿಂದಲೇ ಇಂದು ನಟ, ನಟಿಯರು ಈ ಬೆಳ್ಳಿತೆರೆ, ಕಿರುತೆರೆ, ಓಟಿಟಿ ಹೀಗೆ ವಿವಿಧ ವೇದಿಕೆಗಳಲ್ಲಿ ಒಂದಲ್ಲಾ ಒಂದು ಉತ್ತಮ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಮಾತ್ರವೇ ಅಲ್ಲದೇ ಕೆಲವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಗಳನ್ನು ಸಹಾ ಹೊಂದಿದ್ದಾರೆ. ಈಗ ಇದೇ ವಿಚಾರವಾಗಿ ಹಿರಿಯ ನಾಯಕಿ ಕಾಜಲ್ ಆಸಕ್ತಿಕರ ಕಾಮೆಂಟ್ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ನಟಿ ಕಾಜಲ್ ಒಟಿಟಿಯನ್ನು ಹಾಡಿ ಹೊಗಳಿದ್ದಾರೆ. ನಟಿಯು ಮಾತನಾಡುತ್ತಾ ಇಂದು ಒಟಿಟಿಗಳು ದೊಡ್ಡ ಪರದೆಯನ್ನೇ ಆಳುತ್ತಿವೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಟಿಟಿ ವಲಯದಲ್ಲಿ ಅವಕಾಶಗಳನ್ನು ಪಡೆದುಕೊಂಡಿರುವ ನಟಿಯರ ಬಗ್ಗೆ ಮಾತನಾಡುತ್ತಾ, ಈ ವಲಯದಲ್ಲಿ ನಿಜವಾಗಿಯೂ ಪ್ರತಿಭಾವಂತರು ಹೊರಬರುತ್ತಿದ್ದಾರೆ. ಅವರು ತಮ್ಮದೇ ಆದ ಪ್ರತಿಭೆಯಿಂದ ಬೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.‌ ಈ ವೇಳೆ ನಟಿ ಕಾಜಲ್ ನಟಿಯರ ದೇಹ ಆಕೃತಿಯ ಬಗ್ಗೆಯೂ ಬೋಲ್ಡ್ ಆಗಿ ಮಾತನಾಡಿದ್ದಾರೆ.‌

24 ಇಂಚಿನ ಸೊಂಟ, 36 ಇಂಚಿನ ಅಳತೆ ಇಲ್ಲದಿದ್ದರೂ, ಇತ್ತೀಚಿನ ದಿನಗಳಲ್ಲಿ ನಟಿಯರಿಗೆ ಅವಕಾಶಗಳು ಸಿಗುತ್ತಿವೆ.‌ ಇನ್ನು ಹೀರೋ ಆಗಲು 46 ಇಂಚಿನ ಎದೆಯನ್ನು ತೋರಿಸಬೇಕಾಗಿಲ್ಲ ಎಂದು ಕಾಜಲ್ ಪ್ರತಿಕ್ರಿಯೆ ನೀಡಿದ್ದಾರೆ. ನಟಿಯು ನೀಡಿದ ಹೇಳಿಕೆಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತವೆ. ನಟಿ ಕಾಜಲ್ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಜೊತೆಗೆ ಕಾಜಲ್ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದು, ಸುಮಾರು 30 ವರ್ಷಗಳ ಕಾಲದಿಂದ ನಟಿ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾರೆ.

ಮದುವೆಯ ನಂತರವೂ ಸಹಾ ನಟಿ ಕಾಜಲ್ ಶಾರುಖ್ ಜೊತೆ ಸಿನಿಮಾ ಮಾಡಿದ್ದಾರೆ. ಅವರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ನಟಿ ಕಾಜಲ್ ಹಿರಿಯ ನಟಿ ರೇವತಿ ಅಭಿನಯದ ಸಲಾಂ ವೆಂಕಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮುನ್ನ ತಮಿಳು ಸ್ಟಾರ್ ನಟ ಧನುಷ್ ನಾಯಕನಾಗಿದ್ದ ವಿಐಪಿ ಸಿನಿಮಾದಲ್ಲಿ ಧನುಷ್ ಜೊತೆ ಪೈಪೋಟಿಗೆ ಬೀಳುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸ್ಟಾರ್ ಹೀರೋ ಅಜಯ್ ದೇವಗನ್ ಅವರ ಪತ್ನಿ ಆಗಿರುವ ನಟಿ ಕಾಜಲ್ ನಟಿ ಮತ್ತು ನಿರ್ಮಾಪಕಿಯಾಗಿಯೂ ಬ್ಯುಸಿಯಾಗಿದ್ದಾರೆ.

Leave a Reply

Your email address will not be published.