ಹೀರೋಗಳನ್ನಲ್ಲ ವಿಲನ್ ಗಳನ್ನು ವಿವಾಹವಾದ ಬಾಲಿವುಡ್ ನ ಅಂದಗಾತಿಯರು ಇವರು!!

Entertainment Featured-Articles News

ಬಾಲಿವುಡ್ ಸ್ಟಾರ್ ಗಳ ಜೀವನ ಸಹಜವಾಗಿಯೇ ಅನೇಕರಿಗೆ ಆಕರ್ಷಣೆ ಎನಿಸಿದೆ. ಸಾಮಾನ್ಯವಾಗಿ ಸ್ಟಾರ್ ಗಳು ಎನಿಸಿಕೊಂಡವರು ಐಶಾರಾಮೀ ಜೀವನವನ್ನು ನಡೆಸುವುದನ್ನು ನಾವು ನೋಡುತ್ತೇವೆ. ಸಿನಿಮಾ ರಂಗ ಎಂದು ಬಂದಾಗ ಅದು ಬಾಲಿವುಡ್ ಆಗಿರಲಿ ಅಥವಾ ಇನ್ನಾವುದೇ ಭಾಷೆಯ ಸಿನಿಮಾ ಆಗಿರಲಿ, ಆ ಸಿನಿಮಾದಲ್ಲಿ ನಾಯಕನ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಿಲನ್ ಪಾತ್ರ. ವಿಲನ್ ಇಲ್ಲದೇ ಯಾವುದೇ ಸಿನಿಮಾ ಸಹಾ ಸಂಪೂರ್ಣ ಆಗುವುದಿಲ್ಲ. ಸಿನಿಮಾಗಳಲ್ಲಿ ವಿಲನ್ ಪಾತ್ರಗಳ ಮೂಲಕವೇ ಹೆಸರು ಮಾಡಿದ ಅನೇಕ ನಟರನ್ನು ನಾವು ನೋಡಿದ್ದೇವೆ.

ಕೆಲವು ನಟರು ವಿಲನ್ ಪಾತ್ರಗಳ ಮೂಲಕವೇ ಜನರ ಅಭಿಮಾನವನ್ನು ಪಡೆದುಕೊಂಡಿದ್ದಾರೆ. ಕೆಲವೊಮ್ಮೆ ಜನರಿಗೆ ಸಿನಿಮಾಗಳಲ್ಲಿ ನಾಯಕರಿಗಿಂತ ವಿಲನ್ ಗಳೇ ಇಷ್ಟವಾದ ಉದಾಹರಣೆಗಳು ಸಹಾ ಇದೆ. ಇಂತಹ ವಿಲನ್ ಗಳ ಪಾತ್ರಧಾರಿಗಳ ರಿಯಲ್ ಲೈಫ್ ನ ಆಸಕ್ತಿಕರ ವಿಷಯಗಳನ್ನು ಕುರಿತಾಗಿ ನಾವಿಂದು ನಿಮಗೆ ಹೇಳಲು ಹೊರಟಿದ್ದೇವೆ. ಹೌದು ತೆರೆಯ ಮೇಲೆ ವಿಲನ್ ಗಳಾಗಿ ಅಬ್ಬರಿಸುವ ನಟರ ಅಂದವಾದ ಪತ್ನಿಯರು ಅಂದರೆ, ತೆರೆಯ ಮೇಲಿನ ಹೀರೋ ಗಳನ್ನಲ್ಲ, ವಿಲನ್ ಗಳನ್ನು ವಿವಾಹವಾದ ಅಂದಗಾತಿಯರ ಬಗ್ಗೆ ನಾವಿಂದು ತಿಳಿಯೋಣ.

ಗವಾ ಡೆನ್ಜಗೋಫಾ ಮತ್ತು ಡ್ಯಾನಿ ಡೆನ್ಜೋನ್ ಗ್ಪಾ: ಬಾಲಿವುಡ್ ಸಿನಿಮಾಗಳಲ್ಲಿ ವಿಲನ್ ಪಾತ್ರಗಳ ಮೂಲಕ ತನ್ನದೇ ಆದ ವರ್ಚಸ್ಸನ್ನು ಪಡೆದಿರುವ ನಟ ಡ್ಯಾನಿ ಡೆನ್ಜೋನ್ ಗ್ಪಾ. ಡ್ಯಾನಿ ಅವರು ವಿವಾಹವಾಗಿರುವುದು ಸಿಕ್ಕಿಂ ನ ರಾಜಕುಮಾರಿ ಗವಾ ಡೆನ್ಜೋನ್ ಗ್ಪಾ ಅವರನ್ನು. ಈ ಜೋಡಿ ನೋಡಲು ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಇದ್ದು, ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದಿದೆ.

ಪೂಜಾ ಭಾತ್ರಾ ಮತ್ತು ನವಾಬ್ ಶಾ : 90 ರ ದಶಕದ ಅಂದಗಾತಿ ನಟಿಯರಲ್ಲಿ ಒಬ್ಬರು ಪೂಜಾ ಭಾತ್ರಾ. ಈ ನಟಿಯು ಬಾಲಿವುಡ್ ಸಿನಿಮಾಗಳಲ್ಲಿ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಸಹಾ ವಿಲನ್ ಪಾತ್ರದ ಮೂಲಕವೇ ಜನಪ್ರಿಯತೆಯನ್ನು ಪಡೆದುಕೊಂಡ ನಟ ನವಾಬ್ ಶಾ ಅವರನ್ನು. ನವಾಬ್ ಶಾ ಅವರು ಟೈಗರ್ ಜಿಂದಾ ಹೈ, ಡಾನ್ 2 ನಂತಹ ಸೂಪರ್ ಹಿಟ್ ಸಿ‌ನಿಮಾ ಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಪೋನಿ ವರ್ಮಾ ಮತ್ತು ಪ್ರಕಾಶ್ ರೈ : ದಕ್ಷಿಣ ಸಿನಿಮಾ ರಂಗದಲ್ಲಿ ವೈವಿದ್ಯಮಯ ಪಾತ್ರಗಳಿಗೆ ಹೆಸರಾಗಿರುವ ನಟ ಪ್ರಕಾಶ್ ರೈ, ಬಾಲಿವುಡ್ ಸಿನಿಮಾಗಳಲ್ಲೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಈ ನಟ ಡ್ಯಾನ್ಸರ್ ಕಮ್ ಕೊರಿಯೋಗ್ರಫರ್ ಪೋನಿ ವರ್ಮಾ ಅವರನ್ನು ಎರಡನೇ ವಿವಾಹವಾಗಿದ್ದಾರೆ. ಈ ದಂಪತಿ ಸಂತೋಷದ ಜೀವನವನ್ನು ಕಳೆಯುತ್ತಿದ್ದಾರೆ.‌

ಸೋನಾಲಿ ಸೂದ್ ಮತ್ತು ಸೋನು ಸೂದ್ : ಸೋನು ಸೂದ್ ಬಾಲಿವುಡ್ ನಿಂದ ಹಿಡಿದು ದಕ್ಷಿಣದ ಸಿನಿಮಾಗಳವರೆಗೆ ಅಬ್ಬರ ಸೃಷ್ಟಿಸಿರುವ ಸ್ಟಾರ್ ಖಳ ನಟ. ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ವೇಳೆ ಸೋನು ಸೂದ್ ಮೆರೆದ ಜನಪರ ಕಾಳಜಿಯಿಂದ ಅವರ ಜನಪ್ರಿಯತೆ ಇಡೀ ದೇಶದಲ್ಲಿ ದುಪ್ಪಟ್ಟಾಗಿದೆ. ಆನ್ ಸ್ಕ್ರೀನ್ ವಿಲನ್ ಆಗಿ ಅಬ್ಬರಿಸುವ ಈ ನಟನ ಪತ್ನಿ ಸೋನಾಲಿ ಸೂದ್. ಗಂಡನ ಪ್ರತಿಯೊಂದು ಉತ್ತಮ ಕಾರ್ಯಕ್ಕೂ ಸಾಥ್ ನೀಡುವ ಮಹಿಳೆ ಅವರಾಗಿದ್ದಾರೆ.

ರೇಣುಕಾ ಶಹಾಣೆ ಮತ್ತು ಆಶುತೋಷ್ ರಾಣಾ: ನಟ ಆಶುತೋಷ್ ರಾಣಾ ಸಹಾ ಖಡಕ್ ವಿಲನ್ ಪಾತ್ರಗಳ ಮೂಲಕ ಅಬ್ಬರಿಸುವ ನಟ. ಹಿಂದಿಯಲ್ಲಿ ಹೆಸರು ಮಾಡಿರುವ ಅವರು ತೆಲುಗು ಸಿನಿಮಾಗಳಲ್ಲಿ ವಿಲನ್ ಆಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ರಿಯಲ್ ಲೈಫ್ ನಲ್ಲಿ ನಟಿ, ನಿರೂಪಕಿ ರೇಣುಕಾ ಶಹಾಣೆ ಆಶುತೋಷ್ ಅವರ ಪತ್ನಿಯಾಗಿದ್ದಾರೆ. ರೇಣುಕಾ‌ ಶಹಾಣೆ ಸುರಭಿ ಎನ್ನುವ ಕಾರ್ಯಕ್ರಮದ ಮೂಲಕ ಅಪಾರವಾದ ಜನಪ್ರಿಯತೆ ಪಡೆದಿದ್ದರು.

ಶಿವಾಂಗಿ ಕೊಲ್ಹಾಪುರಿ ಮತ್ತು ಶಕ್ತಿ ಕಪೂರ್ : ಬಾಲಿವುಡ್ ನಲ್ಲಿ ಖಳನಾಯಕರ ಹೆಸರು ಬಂದಾಗಲೆಲ್ಲಾ ಅಲ್ಲಿ ಶಕ್ತಿ ಕಪೂರ್ ಹೆಸರು ಇದ್ದೇ ಇರುತ್ತದೆ. ವಿಲನ್ ಮಾತ್ರವೇ ಅಲ್ಲದೇ ಒಬ್ಬ ಹಾಸ್ಯ ಕಲಾವಿದನಾಗಿಯೂ ಅವರು ತಮ್ಮ ಹೆಸರನ್ನು ಮಾಡಿದ್ದಾರೆ. ಇಷ್ಟೊಂದು ಜನಪ್ರಿಯತೆ ಪಡೆದಿರುವ ಈ ನಟನ ಪತ್ನಿ ಶಿವಾಂಗಿ ಕೊಲ್ಹಾಪುರಿ. ಇವರದ್ದು ಲವ್ ಮ್ಯಾರೇಜ್. ಇಬ್ಬರು ಮನೆಯವ ಒಪ್ಪಿಗೆ ಸಿಗದಾಗ ಮನೆ ಬಿಟ್ಟು ಹೋಗಿ ವಿವಾಹವಾದರು.

Leave a Reply

Your email address will not be published.