ಹಿರೋಯಿನ್ ಗಳಿಗಿಂತ ಫೇಮಸ್ ಈ ನಿರೂಪಕಿ: ಮಾತಿನ ಮಲ್ಲಿ ಸುಮ ಕನಕಾಲ ಸಂಭಾವನೆ ಎಷ್ಟು ಗೊತ್ತಾ?

Entertainment Featured-Articles Movies News

ಸ್ಯಾಂಡಲ್ವುಡ್ ನಲ್ಲಿ ಹಾಗೂ ಕಿರುತೆರೆಯಲ್ಲಿ ನಿರೂಪಣೆ ಎನ್ನುವ ವಿಚಾರ ಬಂದಾಗ ಅಲ್ಲಿ ತಟ್ಟನೆ ಕೇಳಿ ಬರುವ ಹೆಸರು ಅನುಶ್ರೀ ಅವರ ಹೆಸರು. ಕನ್ನಡದಲ್ಲಿ ನಿರರ್ಗಳವಾಗಿ ನಿರೂಪಣೆ ಮಾಡುವ ಅನುಶ್ರೀ ಅವರು ಒಬ್ಬರು ಸಿನಿಮಾ ನಟಿಯಷ್ಟೇ ಜನಪ್ರಿಯತೆಯನ್ನು ಪಡೆದಿದ್ದಾರೆ ಎನ್ನುವುದು ವಾಸ್ತವ ವಿಷಯ. ಇದೇ ರೀತಿಯಲ್ಲಿ ತೆಲುಗು ಸಿ‌ನಿಮಾ ರಂಗ ಮತ್ತು ಕಿರುತೆರೆಯ ವಿಚಾರ ಬಂದಾಗ ಅಲ್ಲಿ ಸ್ಟಾರ್ ನಿರೂಪಕಿಯಾಗಿ, ಸಿನಿಮಾ ನಟಿಯರಿಗಿಂತ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ನಿರೂಪಕಿ ಒಬ್ಬರಿದ್ದಾರೆ, ಅವರೇ ನಿರೂಪಕಿ ಸುಮಾ ಕನಕಾಲ ಅವರು.

ಸುಮ ನಿರೂಪಕಿಯಾಗಿರುವ ಶೋ ಮತ್ತು ಕಾರ್ಯಕ್ರಮಗಳು ದೊಡ್ಡ ಯಶಸ್ಸನ್ನು ಪಡೆಯುತ್ತವೆ‌. ಮೂಲತಃ ಕೇರಳದವರಾದ ಸುಮ ಮಲೆಯಾಳಿ ಆದರೂ ಅವರು ತೆಲುಗು ಮಾತನಾಡುವ ಪರಿಯನ್ನು ನೋಡಿದಾಗ ತೆಲುಗಿನವರೂ ಕೂಡಾ ಅಚ್ಚರಿ ಪಡುತ್ತಾರೆ. ಸೆನ್ಸ್ ಆಫ್ ಹ್ಯೂಮರ್ ನಲ್ಲಿ ಸುಮ ಅವರಿಗೆ ಸರಿ ಸಾಟಿ ಇನ್ನೊಬ್ಬರಿಲ್ಲ. ಟಾಲಿವುಡ್ ನ ಬಹುತೇಕ ಎಲ್ಲಾ ಸಿನಿಮಾಗಳ ಪ್ರಿ ರಿಲೀಸ್, ಆಡಿಯೋ ರಿಲೀಸ್ ಇತ್ಯಾದಿ ಇತ್ಯಾದಿ ಕಾರ್ಯಕ್ರಮಗಳಿಗೆ ಸುಮ ಅವರನ್ನೇ ನಿರೂಪಕಿಯಾಗಿ ಮೊದಲ ಆದ್ಯತೆ ನೀಡುತ್ತಾರೆ ಮೇಕರ್ಸ್.

ಸುಮ ಅವರ ನಿರೂಪಣೆ ಇದ್ದರೆ ಸಿನಿಮಾ ಕಾರ್ಯಕ್ರಮಗಳಲ್ಲಿ ನಿರೂಪಣೆಯ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ನಂಬಿಕೆಯಾಗಿದೆ. ಸುಮ ಅವರು 1996 ರಲ್ಲಿ ನಟಿಯಾಗಿ ತೆಲುಗು ಸಿ‌ನಿಮಾ ರಂಗಕ್ಕೆ ಕಾಲಿಟ್ಟರು. ಆದರೆ ಹೆಸರು ಪಡೆದಿದ್ದು ಮಾತ್ರ ನಿರೂಪಕಿಯಾಗಿ. ಇತ್ತೀಚಿಗೆ ಜಯಮ್ಮ ಪಂಚಾಯಿತಿ ಸಿನಿಮಾ ಮೂಲಕ ಸುಮ ಅವರು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಸುಮ ಅವರ ಪತಿ ರಾಜೀವ್ ಕನಕಾಲ ತೆಲುಗು ಸಿ‌ನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡಿರುವ ನಟನಾಗಿದ್ದಾರೆ.

ನಿರೂಪಕಿ ಸುಮಾ ಸ್ಟಾರ್ ನಿರೂಪಕಿಯಾಗಿ ಹೆಸರು ಪಡೆದಿದ್ದು, ಸಿನಿಮಾ ಮಂದಿಯ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇನ್ನು ನಿರೂಪಕಿಯಾಗಿ ಬಹು ಬೇಡಿಕೆಯನ್ನು ಪಡೆದಿರುವ ಸುಮಾ ಅವರು ಯಾವುದೇ ಶೋ ಅಥವಾ ಸಿನಿಮಾ ಕಾರ್ಯಕ್ರಮಗಳ ನಿರೂಪಣೆ ಮಾಡಲು ಸುಮಾರು ಮೂರುರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಕಿರುತೆರೆಯಲ್ಲಿ ಶೋ ಗಳಿಗೆ ಸುಮ ಅವರು ಒಂದು ಎಪಿಸೋಡ್ ಗೆ ಮೂರರಿಂದ ನಾಲ್ಕು ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

Leave a Reply

Your email address will not be published.