ಹಿರಿಯ ನಟಿಯ ಬಗ್ಗೆ ಕಾಳಜಿ ಮೆರೆದ ಕನ್ನಡದ ಮೇರು ನಟಿಯರು: ಹರಿದು ಬಂತು ನೆಟ್ಟಿಗರ ಮೆಚ್ಚುಗೆ

Written by Soma Shekar

Published on:

---Join Our Channel---

ಕನ್ನಡ ಚಿತ್ರರಂಗ ಕಂಡಂತಹ ಅಪ್ರತಿಮ ನಟಿಯರಲ್ಲಿ ಒಬ್ಬರು ಹಿರಿಯ ನಟಿ ಲೀಲಾವತಿಯವರು. ಅಂದಿನ ಸಿನಿಮಾಗಳಲ್ಲಿ ತಮ್ಮ ಅಂದ ಮತ್ತು ಅದ್ಭುತ ನಟನೆಯ ಮೂಲಕ ಸಿನಿ ರಸಿಕರ ಮನಸ್ಸನ್ನು ಗೆದ್ದಿದ್ದ ನಟಿ ಲೀಲಾವತಿ ಅವರು ಕನ್ನಡ ಚಿತ್ರರಂಗದಲ್ಲಿ ತನಗಾಗಿ ಒಂದು ಪ್ರತ್ಯೇಕವಾದ ಸ್ಥಾನವನ್ನು ಪಡೆದಿರುವ ಕಲಾವಿದೆ ಎನ್ನುವುದು ಎಲ್ಲರೂ ಒಪ್ಪುವಂತಹ ವಿಷಯವಾಗಿದೆ. ಅದ್ಭುತವಾದಂತಹ ಅದೆಷ್ಟೋ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದಾರೆ ಈ ಹಿರಿಯ ನಟಿ. ಹಿರಿಯ ನಟಿ ಲೀಲಾವತಿ ಅವರು ಇದೀಗ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ಮೇರು ನಟರ ಜೊತೆಯಲ್ಲಿ ತೆರೆಯನ್ನು ಹಂಚಿಕೊಂಡಿದ್ದು ನಟಿ ಲೀಲಾವತಿ ಅವರಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆ ಏನಿಲ್ಲ. ತಮ್ಮ ಪುತ್ರ ವಿನೋದ್ ರಾಜ್ ಅವರ ಜೊತೆಗೆ ಸಿನಿಮಾರಂಗದಿಂದ ದೂರವಾಗಿ, ಕೃಷಿಯ ಕಡೆ ಗಮನ ನೀಡಿ ,‌ಕೆಲವು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ ನಟಿ ಲೀಲಾವತಿಯವರು.

ಈ ಹಿರಿಯ ನಟಿಯನ್ನು ಕನ್ನಡ ಚಿತ್ರರಂಗದ ಸ್ಟಾರ್ ನಟಿಯರು ಇತ್ತೀಚಿಗೆ ಭೇಟಿ ಮಾಡಿದ್ದು, ಲೀಲಾವತಿ ಅವರ ಉಭಯ ಕುಶಲೋಪರಿ ವಿಚಾರಿಸಿ, ಅವರೊಂದಿಗೆ ಸಂತೋಷದಿಂದ ಭೋಜನವನ್ನು ಸವಿದಿದ್ದಾರೆ. ಅಲ್ಲದೇ, ಮತ್ತೊಂದು ಸ್ಮರಣೀಯ ದಿನ ಎಂದು ಬರೆದುಕೊಂಡು ಹಿರಿಯ ನಟಿ ಲೀಲಾವತಿ ಅವರೊಡನೆ ಕಳೆದ ಕೆಲವು ಅವಿಸ್ಮರಣೀಯ ಕ್ಷಣಗಳ ಸುಂದರವಾದ ವಿಡಿಯೋವನ್ನು ನಟಿ ಶೃತಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಕನ್ನಡ ಸಿನಿಮಾ ನಟಿಯರಾದ ಸುಧಾರಾಣಿ, ಶೃತಿ ಮತ್ತು ಮಾಳವಿಕಾ ಅವಿನಾಶ್ ರವರು ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯದ ಕುರಿತಾಗಿ ವಿಚಾರಿಸಿ ಒಂದಷ್ಟು ಸಮಯವನ್ನು ಅವರೊಡನೆ ಕಳೆದು ಬಂದಿದ್ದರು. ಅದಾದ ನಂತರ ಇದೀಗ ಮತ್ತೊಮ್ಮೆ ಕನ್ನಡ ಚಿತ್ರರಂಗದ ಹಿರಿಯ ನಟಿಯರೊಟ್ಟಿಗೆ ನಟಿ ಶೃತಿ ಅವರು ಲೀಲಾವತಿ ಅವರ ಮನೆಗೆ ಮತ್ತೊಮ್ಮೆ ಭೇಟಿ ನೀಡಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್, ಹೇಮಚೌದರಿ ಮತ್ತು ಶೃತಿ ಮೂರು ಜನರು ಒಟ್ಟಾಗಿ ಹಿರಿಯ ನಟಿಯ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಸಣ್ಣದೊಂದು ಪಾರ್ಟಿಯನ್ನು ಮಾಡಿಕೊಂಡು, ಮಧುರ ಕ್ಷಣಗಳನ್ನು ಆನಂದಿಸಿದ್ದಾರೆ. ಈ ವೇಳೆ ಹೇಮಚೌದರಿ ಯವರು ನಟಿ ಲೀಲಾವತಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

ನಟಿ ಶೃತಿ ಅವರು ಲೀಲಾವತಿಯವರ ಮನೆಯಲ್ಲಿ ಬಿರಿಯಾನಿ ಅಡುಗೆಯನ್ನು ಮಾಡಿ ಎಲ್ಲರಿಗೂ ಊಟ ಬಡಿಸಿದ್ದಾರೆ. ಇದಾದ ನಂತರ ಲೀಲಾವತಿ ಅವರು ಒಂದು ಹಾಡನ್ನು ಹಾಡಿದ್ದಾರೆ. ಎಲ್ಲರೂ ಒಟ್ಟಾಗಿ ಸೆಲ್ಫಿ ಅನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಶೃತಿ ಅವರು ಹಂಚಿಕೊಂಡ ಈ ಸುಂದರ ವಿಡಿಯೋವನ್ನು ನೋಡಿ ಬಹಳಷ್ಟು ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Leave a Comment