ಹಿರಿಯ ಅಧಿಕಾರಿಯಾದ ಮಗನಿಗೆ ತಾಯಿಯಿಂದ ಸೆಲ್ಯೂಟ್: ಅದ್ಭುತ ಘಟನೆಗೆ ನೆಟ್ಟಿಗರ ಅಪಾರ ಮೆಚ್ಚುಗೆ
ತಾಯಿಗೆ ತನ್ನ ಮಕ್ಕಳು ತಮ್ಮ ಜೀವನದಲ್ಲಿ ತನಗಿಂತ ಮುಂದೆ ಹೋದಾಗ, ಯಶಸ್ಸಿನ ಹಾದಿಯಲ್ಲಿ ತನ್ನನ್ನು ದಾಟಿ ತನ್ನ ಮಕ್ಕಳು ಮುಂದೆ ಹೋದರೆ ಆ ತಾಯಿಗೆ ಆಗುವ ಖುಷಿಗೆ ಬೆಲೆ ಕಟ್ಟುವುದು ಅಸಾಧ್ಯ. ಆ ಆನಂದಕ್ಕೆ ಪಾರವೇ ಇರುವುದಿಲ್ಲ ಎಂದು ಹೇಳಬಹುದು. ಅಂತಹ ಸಂದರ್ಭದಲ್ಲಿ ಆ ತಾಯಿಯ ಹೆಮ್ಮೆಯಿಂದ ಬೀಗುತ್ತಾಳೆ, ತಾನೇ ಗೆದ್ದೆ ಎನ್ನುವಷ್ಟು ಸಂಭ್ರಮವನ್ನು ಪಡುತ್ತಾಳೆ. ಈಗ ಅಂತುಹುದೇ ಒಂದು ಅದ್ಭುತವಾದ ಘಳಿಗೆಯ ಅಂದರೆ ಎಎಸ್ಐ ಆಗಿರುವ ತಾಯಿ ಹಾಗೂ ಡಿ ವೈ ಎಸ್ ಪಿ ಆಗಿರುವ ಮಗನ ಕಥೆಯು ಮುನ್ನಲೆಗೆ ಬಂದಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಈ ಪೋಲಿಸ್ ಅಧಿಕಾರಿಗಳಾದ ತಾಯಿ ಮಗನ ಫೋಟೋಗಳು ವೈರಲ್ ಆಗುವ ಮೂಲಕ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಬಹಳಷ್ಟು ಜನರು ಅದ್ಭುತವಾದ ಫೋಟೋ ಹಾಗೂ ಅದ್ಭುತ ದೃಶ್ಯ ಎಂದು ಹಾಡಿ ಹೊಗಳುತ್ತಿದ್ದಾರೆ.
ಈ ನೈಜ ಘಟನೆಯು ತಾಯಿ ಮಗ ಒಬ್ಬರಿಗೆ ಮತ್ತೊಬ್ಬರು ಸೆಲ್ಯೂಟ್ ಮಾಡುತ್ತಿದ್ದು , ಈ ದೃಶ್ಯ ಒಬ್ಬ ತಾಯಿ ತನ್ನ ಮಗುವನ್ನು ಬೆಳೆಸಲು ಎಷ್ಟೆಲ್ಲಾ ತ್ಯಾಗವನ್ನು ಮಾಡುತ್ತಾರೆ. ಆತ ಒಬ್ಬ ಉತ್ತಮ ಪ್ರಜೆಯಾಗಿ, ಒಂದು ಉತ್ತಮ ಸ್ಥಾನವನ್ನು ಪಡೆಯಲಿ ಎಂದು ಎಷ್ಟೆಲ್ಲಾ ತ್ಯಾಗ ಮಾಡುತ್ತಾಳೆ. ಆಕೆಯ ಮಗ ಜನರ ಎದುರು ಮಾದರಿಯಾದಾಗ ಆ ತಾಯಿಗೆ ಆಗುವ ಸಂತೋಷ ಎಲ್ಲದಕ್ಕೂ ಮಿಗಿಲು ಎಂದು ತೋರಿಸುತ್ತಿದೆ. ಗುಜರಾತಿನ ಲೋಕಸೇವಾ ಆಯೋಗದ ಅಧ್ಯಕ್ಷರಾಗಿರುವ ದಿನೇಶ್ ದಾಸ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಇಂತಹ ಒಂದು ಅಪರೂಪದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಅವರು ತಮ್ಮ ಟ್ವೀಟ್ ನಲ್ಲಿ, ಎಎಸ್ಐ ತಾಯಿಗೆ ಇದಕ್ಕಿಂತ ಸಂತೋಷದಾಯಕ ಕ್ಷಣ ಬೇರೇನಿದೆ?? ಆ ತಾಯಿಯ ಡಿ ವೈ ಎಸ್ ಪಿ ಮಗನು ತಾಯಿಯು ನೀಡಿದ ವರ್ಷಗಳ ಮಮತೆ ಹಾಗೂ ಪ್ರೀತಿಗೆ ಇಂದು ಸೆಲ್ಯೂಟ್ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ವೈರಲ್ ಆಗಿರುವ ಈ ಫೋಟೋದಲ್ಲಿ ಇರುವುದು ಡಿ ವೈ ಎಸ್ ಪಿ ವಿಶಾಲ್ ರಬಾರಿ ಅವರು ಎನ್ನಲಾಗಿದೆ. ಅವರ ತಾಯಿ ಎ ಎಸ್ ಪಿ ಕೂಡಾ ಆಗಿರುವ ಮದುಬೇನ್ ರಬಾರಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಮ್ಮ ಹಿರಿಯ ಅಧಿಕಾರಿಯಾದ ಮಗನಿಗೆ ಸೆಲ್ಯೂಟ್ ಮಾಡಿದ್ದಾರೆ. ಆಗ ಮಗ ಕೂಡಾ ತಾಯಿಗೆ ಸೆಲ್ಯೂಟ್ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ದಿನ ಜುನಾಗಡ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಮ್ಮ ಮಗ ಎದುರಾದಾಗ ಈ ಘಟನೆ ನಡೆದಿದೆ.