ಹಿರಿಯರ ತಪಸ್ಸು, ಸತ್ಕಾರ್ಯ, ಸತ್ಕರ್ಮಗಳು ಮುಂದಿನ ಪೀಳಿಗೆಯನ್ನು ಕಾಯುತ್ತೆ: ಶಂಕರ್ ಅಶ್ವಥ್

0 3

ಕನ್ನಡ ಚಿತ್ರರಂಗದ ಹಿರಿಯ ನಟ ಶಂಕರ್ ಅಶ್ವಥ್ ಅವರು ಸಿನಿಮಾಗಳ ಜೊತೆಗೆ ತಮ್ಮದೇ ಆದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡವರು. ಸಿನಿಮಾದಲ್ಲಿ ಅವಕಾಶಗಳು ಸಿಗುತ್ತಿಲ್ಲ ಎಂದು ಕೈಚೆಲ್ಲಿ ಕೂರುವವರ ಮಧ್ಯೆ ಶಂಕರ ಅಶ್ವಥ್ ಅವರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡು ಬಹಳಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ. ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಾ ಕೂರುವ ಬದಲಾಗಿ ಶ್ರಮವಹಿಸಿ ಕಾಯಕವನ್ನು ಮಾಡುವ ಕಡೆಗೆ ಮೊದಲ ಆದ್ಯತೆಯನ್ನು ನೀಡುವ ವ್ಯಕ್ತಿ ಅವರಾಗಿದ್ದಾರೆ. ಅವರ ಈ ಸರಳ, ಸ್ವಾಭಿಮಾನದ ಬದುಕನ್ನು ಕಂಡೇ ಜನರು ಅವರನ್ನು ಅಭಿಮಾನಿಸುತ್ತಾರೆ.

ಶಂಕರ ಅಶ್ವಥ್ ಅವರು ಕನ್ನಡ ಚಿತ್ರರಂಗ ಕಂಡಂತಹ ಅಪ್ರತಿಮ ನಟ, ಹಿರಿಯ ಕಲಾವಿದ ದಿವಂಗತ ಅಶ್ವಥ್ ಅವರ ಮಗ ಎನ್ನುವುದು ಇಡೀ ನಾಡಿಗೆ ತಿಳಿದಿರುವ ವಿಷಯವೇ ಆಗಿದ. ಶಂಕರ್ ಅಶ್ವಥ್ ಅವರ ವ್ಯಕ್ತಿತ್ವದ ಪರಿಚಯ ಹೆಚ್ಚು ಇಲ್ಲದವರು ಈ ಬಾರಿ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಅವರ ಕುರಿತಾಗಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಬಿಗ್ ಬಾಸ್ ಸೀಸನ್ ಎಂಟರಲ್ಲಿ ಅವರು ಒಬ್ಬ ಸ್ಪರ್ಧಿಯಾಗಿ, ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು.

ಶಂಕರ ಅಶ್ವಥ್ ಅವರು ಬಿಗ್ ಬಾಸ್ ಮನೆಗೆ ಬರುವ‌ ಮೊದಲಿನಿಂದಲೂ ಹಾಗೂ ಅದರ ನಂತರವೂ ಸಹಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಜೀವನದ ಅನುಭವಗಳು, ಎದುರಿಸಿದ ಸವಾಲುಗಳು, ತಂದೆಯವರು ನುಡಿದ ಅರ್ಥಪೂರ್ಣ ಮಾತುಗಳು, ನೀಡಿ ಮಾರ್ಗದರ್ಶನ ಹೀಗೆ ಹತ್ತು ಹಲವು ಅತ್ಯುತ್ತಮ ವಿಚಾರಗಳನ್ನು ಅಭಿಮಾನಿಗಳು ಹಾಗೂ ನೆಟ್ಟಿಗರ ಜೊತೆಗೆ ಹಂಚಿಕೊಳ್ಳುತ್ತಾರೆ. ತಮ್ಮ ಚಿಕ್ಕ ಸಂತೋಷವನ್ನು ಸಹ ಎಲ್ಲರೊಟ್ಟಿಗೆ ಹಂಚಿಕೊಳ್ಳುವ ಸರಳ ಜೀವಿ ಶಂಕರ್ ಅಶ್ವಥ್ ಅವರು.

ಇತ್ತೀಚೆಗೆ ತಂಕರ್ ಅಶ್ವಥ್ ಅವರ ಮಗ ಹಾಗೂ ಸೊಸೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ನೆರವೇರಿಸಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಶಂಕರ್ ಅಶ್ವಥ್ ಅವರು ಕೆಲವು ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡು ಮಗ ಹಾಗೂ ಸೊಸೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಿರಿಯರು ಮಾಡಿದ ತಪಸ್ಸುಣ ಸತ್ಕಾರ್ಯ, ಸತ್ಕರ್ಮಗಳು ಮುಂದಿನ ಪೀಳಿಗೆಯನ್ನು ಕಾಯುತ್ತವೆ ಎಂದಿದ್ದಾರೆ.

ಅವರು ತಮ್ಮ ಪೋಸ್ಟ್ ನಲ್ಲಿ, “ನಮ್ಮ ಹಿರಿಯರು ಮಾಡಿದ ತಪಸ್ಸು ಸತ್ಕಾರ್ಯ ಸತ್ಕರ್ಮ ಅವರ ಆಶೀರ್ವಾದ ನಮ್ಮನ್ನಲ್ಲದೇ ನಮ್ಮ ಮುಂದಿನ ಪೀಳಿಗೆಯನ್ನು ಕಾಯುತ್ತೆ ಇದು ಸತ್ಯ” ನನ್ನ ಮಗ ಸ್ಕಂದ ಹಾಗೂ ಸೊಸೆಯಾಗಿ ಬಂದು ಮಗಳಾದ ಸ್ಪೂರ್ತಿ ಇಂದು ರಾಮಮಂದಿರದ ಆವರಣದಲ್ಲಿ ಸತ್ಯನಾರಾಯಣ ಪೂಜೆ ಮಾಡಿದ ಸಂದರ್ಭ. ಈ ಮಕ್ಕಳ ಮೇಲೆ ತಮ್ಮೆಲ್ಲರ ಆಶೀರ್ವಾದ ಸದಾಕಾಲವಿರಲಿ

ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸತ್ಯನಾರಾಯಣಸ್ವಾಮಿಯನ್ನು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡು ಎಲ್ಲರಿಗೂ ಶುಭವನ್ನು ಕೋರಿದ್ದಾರೆ. ಶಂಕರ್ ಅಶ್ವಥ್ ಅವರು ಹಂಚಿಕೊಂಡ ಈ ಫೋಟೋಗಳು ಹಾಗೂ ತಿಳಿಸಿದ ವಿಚಾರಕ್ಕೆ ಅವರ ಅಭಿಮಾನಿಗಳು ಅವರಿಗೂ ಶುಭ ಹಾರೈಸಿದ್ದಾರೆ. ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಎಂದು ನೆಟ್ಟಿಗರು ಶುಭವನ್ನು ಕೋರಿದ್ದಾರೆ.

Leave A Reply

Your email address will not be published.