ಹಿಮಾಚಲದಲ್ಲಿ ಭೂಕುಸಿತ: ಆಕೆ ಸಾವಿಗೂ ಮುನ್ನ ಹಂಚಿಕೊಂಡಿದ್ದ ಫೋಟೋ ಕಂಡು ಭಾವುಕರಾದ ನೆಟ್ಟಿಗರು

Entertainment Featured-Articles News
41 Views

ಹಿಮಾಚಲ ಪ್ರದೇಶದ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು, ಅದರ ರಮಣೀಯತೆಯನ್ನು ಆಸ್ವಾದಿಸಲು ಅಲ್ಲಿಗೆ ಪ್ರವಾಸಕ್ಕಾಗಿ ತೆರಳಿದ್ದ ಪ್ರವಾಸಿಗರಿಗೆ ಭಾನುವಾರದ ದಿನ ನಿಜಕ್ಕೂ ಸಾವಿನ ದರ್ಶನವಾಗುವ ಪರಿಸ್ಥಿತಿ ಎದುರಾಯಿತು. ಇಲ್ಲಿನ ಕಿನ್ನೌರ್ ಜಿಲ್ಲೆಯಲ್ಲಿ ನಡೆದಂತದ ಭೂ ಕುಸಿತದ ಪರಿಣಾಮ ಒಂಬತ್ತು ಜನರು ಸಾವಿಗೀಡಾಗಿದ್ದು, ಮೂರು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿದವರಲ್ಲಿ ಡಾ.ದೀಪಾ ಶರ್ಮಾ ಎನ್ನುವ 34 ವರ್ಷ ವಯಸ್ಸಿನ ಮಹಿಳೆಯೊಬ್ಬರು ಹಿಮಾಚಲ ಪ್ರದೇಶದ ಪ್ರವಾಸದ ಫೋಟೋ ಗಳನ್ನು ಒಂದರ ನಂತರ ಮತ್ತೊಂದು ಎನ್ನುವಂತೆ ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳುತ್ತಿದ್ದರು. ತಾನು ಸಾಯುವ ಸ್ವಲ್ಪ ಸಮಯದ ಮೊದಲು ಸಹಾ ಆಕೆ ಒಂದು ಫೋಟೋ ಟ್ವೀಟ್ ಮಾಡುವ ಮೂಲಕ ತನ್ನ ಪ್ರವಾಸದ ಸಂಭ್ರಮವನ್ನು ಹಂಚಿಕೊಂಡಿದ್ದರು.

ಟ್ವಿಟರ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದ ದೀಪಾ ಅವರು ಅದರ ಜೊತೆಗೆ, ಭಾರತದ ಅಂತಿಮ ಪಾಯಿಂಟ್ ನಲ್ಲಿ ನಾನೀಗ ನಿಂತಿದ್ದೇನೆ. ಇಲ್ಲಿಂದ ಮುಂದೆ ಹೋಗಲು ನಾಗರಿಕರಿಗೆ ಅನುಮತಿಯನ್ನು ನೀಡಲಾಗುವುದಿಲ್ಲ. ಈ ಜಾಗದಿಂದ ಸುಮಾರು 80 ಕಿಮೀ ದೂರದಲ್ಲಿ ಟಿಬೆಟ್ ನ ಗಡಿಯಿದ್ದು, ಚೀನಾ ಆ ಭಾಗವನ್ನು ಕಾನೂನು ಬಾಹಿರವಾಗಿ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ” ಎಂದು ಬರೆದುಕೊಂಡಿದ್ದಾರೆ. ಆದರೆ ಇದೇ ತನ್ನ ಕೊನೆಯ ಫೋಟೋ ಆಗಲಿದೆ ಎಂದು ಆ ಕ್ಷಣದಲ್ಲಿ ದೀಪಾ ಊಹೆ ಕೂಡಾ ಮಾಡಿರಲಿಲ್ಲ. ವಿಧಿ ಯನ್ನು ಬಲ್ಲವರು ಯಾರು? ಎನ್ನುವುದು ಬಹುಶಃ ಇದಕ್ಕಾಗಿಯೇ ಇರಬಹುದು.

ಈ ಪೋಸ್ಟ್ ಮಾಡಿದ ಕೆಲವೇ ಸಮಯದ ನಂತರ ದೀಪಾ ಅವರು ಪ್ರಯಾಣ ಮಾಡುತ್ತಿದ್ದ ಟೆಂಪೋ ಟ್ರಾವೆಲರ್ ಭೂ ಕುಸಿತದ ಅ ಪಾ ಯ ಉಂಟಾದ ಕಡೆ ಸಿಲುಕಿದೆ. ಇದರಲ್ಲಿ ನಾಲ್ಕು ಜನ ಮಹಿಳೆಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಇವರೆಲ್ಲರೂ ಜೈಪುರ ದವರು ಎನ್ನಲಾಗಿದೆ. ದೀಪಾ ಅವರು ಸಹಾ ಜೈಪುರದವರೇ ಆಗಿದ್ದು, ಆಕೆ ಒಬ್ಬ ಡೈಟೀಷಿಯನ್ ಆಗಿ ವೃತ್ತಿಯನ್ನು ಮಾಡುತ್ತಿದ್ದರು. ಹಿಮಾಚಲ ಪ್ರದೇಶದ ಸೌಂದರ್ಯ ಸವಿಯಲು ಮೊದಲ ಬಾರಿಗೆ ಒಬ್ಬರೇ ಪ್ರವಾಸಕ್ಕೆ ಬಂದಿದ್ದರು. ಆದರೆ ಇದೇ ಅವರ ಜೀವನದ ಕೊನೆಯ ಪ್ರವಾಸವಾಗಲಿದೆ ಎಂದು ಅವರಿಗೆ ತಿಳಿದಿರಲಿಲ್ಲ.

ದೀಪಾ ಅವರ ಸಾ ವಿ ನ ನಂತರ ಅವರ ಕೊನೆಯ ಪೋಸ್ಟ್ ನೋಡಿ ಅನೇಕರು ಭಾವುಕರಾಗಿದ್ದಾರೆ. ಬೇಸರದಿಂದ ಕಾಮೆಂಟ್ ಮಾಡಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ. ಒಬ್ಬರು ಟ್ವೀಟ್ ಮಾಡಿ, “ನಾನು ನಿಮ್ಮನ್ನು ಸೂಪರ್ ಎನರ್ಜಿಟಿಕ್, ಮೋಜಿನ ಪ್ರೀತಿಯ ಮತ್ತು ಸುಂದರ ವ್ಯಕ್ತಿಯಾಗಿ ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನಿಮ್ಮ ಆತ್ಮವು ಶಾಂತಿಯಿಂದ ವಿಶ್ರಾಂತಿ ಪಡೆಯಲಿ.”‘ ಎಂದು ದೀಪಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಅವರು ಸಹಾ ಟ್ವೀಟ್ ಮಾಡಿ ಈ ಘಟನೆಯ ಬಗ್ಗೆ ಖೇ ದವನ್ನು ವ್ಯಕ್ತಪಡಿಸಿದ್ದಾರೆ.

ದೀಪಾ ಹಿಂದೊಮ್ಮೆ ಬಾಲಿವುಡ್‌ ಸ್ಟಾರ್ ನಟ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ಪ್ರತಿಷ್ಠಿತ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಸಹಾ ಭಾಗವಹಿಸಿದ್ದರು ಎನ್ನುವುದು ವಿಶೇಷ. ಡಾ. ದೀಪಾ ಶರ್ಮಾ ಅವರ ಈ ಅನಿರೀಕ್ಷಿತ ನಿಧನ ಅವರ ಆಪ್ತರಿಗೆ ತೀವ್ರವಾದ ನೋವನ್ನು ಉಂಟು ಮಾಡಿದೆ. ಬಹಳಷ್ಟು ಜನರು ಟ್ವೀಟ್ ಗಳನ್ನು ಮಾಡುವ ಮೂಲಕ ದೀಪಾ ಅವರನ್ನು ಹಾಗೂ ಅವರ ಜೊತೆಗಿನ ಸ್ಮರಣೆಗಳನ್ನು ಹಂಚಿಕೊಂಡು ಅಂತಿಮ ನಮನ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *