ಹಿಟ್ಲರ್ ಕಲ್ಯಾಣ ಸೀರಿಯಲ್ ನ ಲೀಲಾ ಖ್ಯಾತಿಯ ನವ ನಟಿ ಮಲೈಕಾ ಪಡೀತಾರೆ ಒಳ್ಳೆ ಸಂಭಾವನೆ
ಕಿರುತೆರೆ ಎಂದರೆ ಇಲ್ಲಿ ಸೀರಿಯಲ್ ಗಳದ್ದೇ ದರ್ಬಾರು, ಅವುಗಳದ್ದೇ ಕಾರು ಬಾರು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಮತ್ತೊಂದು ಎನ್ನುವ ಹಾಗೆ ಧಾರಾವಾಹಿಗಳು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾ ಪೈಪೋಟಿಗೆ ಬಿದ್ದಂತೆ ಅದ್ದೂರಿಯಾಗಿ ಮೂಡಿ ಬರುವ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ಒಂದು ಸಿನಿಮಾ ನೋಡುವ ಅನುಭೂತಿಯನ್ನು ಮೂಡಿಸಲು ಸೀರಿಯಲ್ ಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಈಗಾಗಲೇ ಅದ್ಭುತವಾಗಿ ಮೂಡಿ ಬರುತ್ತಾ ಜನರ ಮನ್ನಣೆಯನ್ನು ಹಲವು ಧಾರಾವಾಹಿಗಳು ಯಶಸ್ಸಿನ ನಾಗಾಲೋಟವನ್ನು ಮಾಡುವಾಗಲೇ, ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಕೆಲವೇ ದಿನಗಳ ಹಿಂದೆ ಒಂದು ಹೊಸ ಸೀರಿಯಲ್ ಎಂಟ್ರಿ ನೀಡಿ ಎಲ್ಲರ ಗಮನವನ್ನು ಸೆಳೆದು, ಕೆಲವೇ ದಿನಗಳಲ್ಲಿ ಸಖತ್ ಸದ್ದು ಮಾಡಿದೆ. ಹೌದು ಈ ಹೊಸ ಧಾರಾವಾಹಿ ಹಾಗೂ ಪಾತ್ರಗಳು ಕುರಿತಾಗಿ ಪ್ರೇಕ್ಷಕರು ಈಗಾಗಲೇ ಬಹಳ ಮೆಚ್ಚುಗೆಯನ್ನು ಸಹಾ ಸೂಚಿಸುತ್ತಿದ್ದಾರೆ.
ಯಾವುದು ಈ ಹೊಸ ಸೀರಿಯಲ್ ಅನ್ನೋದಕ್ಕೆ ಈಗಾಗಲೇ ಅನೇಕರಿಗೆ ಉತ್ತರ ಗೊತ್ತಾಗಿರಬೇಕು. ಹೌದು ನಿಮ್ಮ ಊಹೆ ಸರಿಯಾಗೇ ಇದೆ. ಜನರ ಮನ ಗೆದ್ದ ಈ ಹೊಸ ಸೀರಿಯಲ್ ಹಿಟ್ಲರ್ ಕಲ್ಯಾಣ. ನಟ ದಿಲೀಪ್ ರಾಜ್ ಅಭಿರಾಮ್ ಜಯರಾಮ್ ಎನ್ನುವ ಖಡಕ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಮಲೈಕ ಟಿ ವಸುಪಾಲ್ ಎನ್ನುವ ನಟ ಯುವ ನಟಿ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ. ಯಾರು ಈ ನಟಿ ಎಂದರೆ ಹಿಟ್ಲರ್ ಕಲ್ಯಾಣದಲ್ಲಿ ಗಡಸುಗಿತ್ತಿ, ಬಿಂದಾಸ್ ಹುಡುಗಿ ಲೀಲಾ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿಯೇ ಮಲೈಕಾ. ಈ ಯುವ ನಟಿಗೆ ಇದು ಮೊದಲನೇ ಸೀರಿಯಲ್.
ಮಲೈಕಾ ಅವರನ್ನು ಆಡಿಷನ್ ಮೂಲಕ ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಸಂದರ್ಶನವೊಂದರಲ್ಲಿ ಮಲೈಕಾ ಆಡಿಷನ್ ನೀಡಿ ಬಂದ ಮೇಲೆ ಒಂದು ದಿನ ವಾಹಿನಿಯ ಕಡೆಯಿಂದ ನಾನು ಆಯ್ಕೆಯಾದ ಬಗ್ಗೆ ಕರೆ ಬಂದಾಗ, ಅಚ್ಚರಿ ಜೊತೆಗೆ ಕನಸು ನನಸಾದಂತೆ ನನಗೆ ಅನಿಸಿತು, ಲೀಲಾ ಪಾತ್ರದಲ್ಲಿ ನಟಿಸಲು ತುಂಬಾ ಉತ್ಸುಕಳಾಗಿದ್ದೆ ಎಂದು ತಮ್ಮ ಸಂತೋಷವನ್ನು ಮಲೈಕಾ ಹಂಚಿಕೊಂಡಿದ್ದರು. ದಿಲೀಪ್ ರಾಜ್ ಅವರ ನಿರ್ಮಾಣದ ಈ ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಲೀಲಾ ಪಾತ್ರ ಈಗಾಗಲೇ ಮನೆ ಮನೆ ಮಾತಾಗಿದೆ. ಬಹಳ ಚಟುವಟಿಕೆಯಿಂದ, ಪಟಪಟನೆ ಮಾತನಾಡುವ ಲೀಲಾ ಪ್ರೇಕ್ಷಕರ ಮನಸ್ಸು ಗೆದ್ದಾಗಿದೆ.
ಇನ್ನು ಹಿಟ್ಲರ್ ಕಲ್ಯಾಣ ಸೀರಿಯಲ್ ನ ಲೀಲಾ ಪಾತ್ರಕ್ಕೆ ಮಲೈಕಾ ಅವರಿಗೆ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಕೂಡಾ ಸಹಜವಾಗಿಯೇ ಮೂಡುತ್ತದೆ. ಹಾಗಾದರೆ ಅದಕ್ಕೂ ಉತ್ತರ ತಿಳಿಯೋಣ ಬನ್ನಿ. ಲೀಲಾ ಪಾತ್ರಧಾರಿ ಮಲೈಕಾ ಅವರಿಗೆ ಇದು ಮೊದಲನೇ ಸೀರಿಯಲ್ ಹಾಗೂ ಕಿರುತೆರೆಗೆ ಇದೇ ಸೀರಿಯಲ್ ಅವರಿಗೆ ಎಂಟ್ರಿ ಮಾಡಿಸಿದ್ದು, ಮಲೈಕಾ ಅವರಿಗೆ ಪ್ರಸ್ತುತ ಎಪಿಸೋಡ್ ಒಂದಕ್ಕೆ 12 ಸಾವಿರ ರೂ. ಗಳ ಸಂಭಾವನೆ ನೀಡಲಾಗುತ್ತದೆ ಎನ್ನುವ ಸುದ್ದಿಯಿದೆ. ಇದು ಮುಂದೆ ಸೀರಿಯಲ್ ನ ಜನಪ್ರಿಯತೆಯು ಹೆಚ್ಚುತ್ತಾ ಹೋದ ಹಾಗೆ ಹೆಚ್ಚಿದರೂ ಇಲ್ಲಿ ಆಶ್ಚರ್ಯ ಖಂಡಿತ ಇಲ್ಲ.