ಹಿಜಬ್ ವಿಚಾರದಲ್ಲಿ ಸಿಖ್ ಸಮುದಾಯವನ್ನು ಕೆಣಕಿದ ನಟಿ: ನಟಿಗೆ ಖಡಕ್ ಉತ್ತರ ನೀಡಿ ಸಿಖ್ ನಾಯಕ

Entertainment Featured-Articles News

ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯಾಗುತ್ತಿರುವುದು ಹಿಜಬ್ ವಿಚಾರ. ಕರ್ನಾಟಕದಲ್ಲಿ ಆರಂಭವಾದ ಈ ಹಿಜಬ್ ವಿ ವಾ ದವು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಾ ಸುದ್ದಿಯಾಗಿದೆ. ಈ ವಿಚಾರವಾಗಿ ರಾಜಕೀಯ ನಾಯಕರು ಹಾಗೂ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹಾ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅದರಲ್ಲೂ ಸಹಾ ಪರ ವಿ ರೋ ಮಾತುಗಳು ಸಹಾ ಕೇಳಿ ಬಂದಿವೆ. ಇದರಲ್ಲಿ ಬಾಲಿವುಡ್ ನಟಿ ಹೇಮಾ ಮಾಲಿನಿ, ಕಂಗನಾ ರಣಾವತ್ ಮತ್ತು ಸೋನಂ ಕಪೂರ್, ಶಬಾನಾ ಆಜ್ಮಿ, ರಿಚಾ ಚಡ್ಡಾ ಅವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾ‌ ಮೂಲಕ ಹಂಚಿಕೊಂಡಿದ್ದರು.

ಹೀಗೆ ಹಿಜಬ್ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸೋನಂ ಕಪೂರ್ ಪ್ರತಿಕ್ರಿಯೆ ನೀಡುವಾಗ ಸಿಖ್ ಸಮುದಾಯದ ಉದಾಹರಣೆ ನೀಡುತ್ತಾ, ಸಿಖ್ಖರ ಧಾರ್ಮಿಕ ಭಾವನೆಗಳನ್ನು ಕೆಣಕುವ ಕೆಲಸವನ್ನು ಮಾಡಿದ್ದರು. ಸೋನಂ ಕಪೂರ್ ಎರಡು ಫೋಟೋಗಳನ್ನು ಕೊಲೇಜ್ ಮಾಡಿ, ಪೇಟ ಧರಿಸಿದ ಸಿಖ್ ವ್ಯಕ್ತಿ, ಹಿಜಬ್ ಧರಿಸಿದ ಮುಸ್ಲಿಂ ಮಹಿಳೆ ಫೋಟೋ ಶೇರ್ ಮಾಡಿ, ಸಿಖ್ ಯುವಕರಿಗೆ ಪೇಟ ಧರಿಸುವ ಹಕ್ಕಿರುವಾಗ, ಮುಸ್ಲಿಂ ಮಹಿಳೆಯರಿಗೆ ಹಿಜಬ್ ಕೆ ಏಕಿಲ್ಲ? ಎಂದು ಪ್ರಶ್ನೆ ಮಾಡಿದ್ದರು.

ಸೋನಂ ಕಪೂರ್ ಅವರು ಹಂಚಿಕೊಂಡ ಅಭಿಪ್ರಾಯ ಹಾಗೂ ಶೇರ್ ಮಾಡಿದ ಫೋಟೋ ನೋಡಿ ಸಿಖ್ ಸಮುದಾಯ ಸಹಜವಾಗಿಯೇ ಅಸಮಾಧಾನಗೊಂಡಿದೆ. ಬಿಜೆಪಿ ನಾಯಕ ಮನ್ ಜಿಂದರ್ ಸಿಂಗ್ ಸೋನಂ ಕಪೂರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಟಿ ಸೋನಂ ಕಪೂರ್ ಅವರು ಬಹಳ ದೊಡ್ಡ ವಿ ವಾ ದಿತ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.‌ ಇಂತಹ ಪೋಸ್ಟ್ ಹಾಕಿ ಎರಡು ಧರ್ಮಗಳ ನಡುವೆ ಅಸಮಾಧಾನ ಹುಟ್ಟು ಹಾಕುವ, ಜಗಳ ಮಾಡಿಸುವ ಕೆಲಸವನ್ನು ಮಾಡಿದ್ದಾರೆ.

ಈ ರೀತಿ ಎರಡು ಧರ್ಮಗಳ ನಡುವೆ ಸಂ ಘ ರ್ಷ ವನ್ನು ಸೃಷ್ಟಿಸುವುದು ತಪ್ಪು. ನೀವು ಯಾವುದನ್ನು ಹೋಲಿಕೆ ಮಾಡಿರುವಿರೋ ಅದು ಸಿಖ್ ಸಮುದಾಯಕ್ಕೆ ಬಹಳ ಪ್ರಮುಖವಾಗಿದೆ. ಗುರು ಗೋವಿಂದ್ ಜೀ ಅವರು ನಮಗೆ ಇದನ್ನು ಮಾರ್ಗದರ್ಶನ ನೀಡಿದ್ದಾರೆ. ಪಗಡಿ ( ಪೇಟ ) ನಮ್ಮ‌ ಆಭರಣವಲ್ಲ, ಅದು ನಮ್ಮ ದೇಹ ಮತ್ತು ಜೀವನದ ಒಂದು ಭಾಗವಾಗಿದೆ. ನೀವು ಹಿಜಬ್ ಅನ್ನು ಪೇಟದೊಂದಿಗೆ ಹೋಲಿಕೆ ಮಾಡುವುದು ತಪ್ಪು. ಎಲ್ಲಾ ಧರ್ಮಗಳಿಗೂ ಅವುಗಳದ್ದೇ ಆದ ಮಾನ್ಯತೆಗಳು ಇವೆ.

ಧರ್ಮಗಳ ಮಾನ್ಯತೆಯನ್ನು ಉಳಿಸಿಕೊಳ್ಳಬೇಕು. ಆದರೆ ಸೋನಂ ಕಪೂರ್ ಉದ್ದೇಶಪೂರ್ವಕವಾಗಿ ಇಂತಹ ಒಂದು ಕಿ ಡಿ ಗೇ ಡಿತನ ಮಾಡುವುದು ಸರಿಯಲ್ಲ. ಉದ್ದೇಶಪೂರ್ವಕವಾಗಿ ಹೀಗೆ ಜನರನ್ನು ಪ್ರಚೋದಿಸುವುದು ಸಹಾ ತಪ್ಪು. ಇದನ್ನು ನಾನು ಖಂ ಡಿ ಸುತ್ತೇನೆ. ಸೋನಂ ಕಪೂರ್ ಅವರೇ ನೀವೊಬ್ಬ ಕಲಾವಿದರು, ಆ ಕೆಲಸವನ್ನು ಸರಿಯಾಗಿ ಮಾಡಿ ಎನ್ನುವ ಮಾತುಗಳನ್ನು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *