ಹಿಜಬ್-ಕೇಸರಿ ಸಂಘರ್ಷ: ಮೌನ ಮುರಿದ ನಟಿ ರಮ್ಯ ವೀಡಿಯೋ ಶೇರ್ ಮಾಡಿ ಹೇಳಿದ್ದೇನು?

Written by Soma Shekar

Published on:

---Join Our Channel---

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದಲೂ ಸಹಾ ಹಿಜಬ್ ಹಾಗೂ ಕೇಸರಿ ಶಾಲೂ ನಡುವಿನ ಸಂ ಘ ರ್ಷ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅಲ್ಲದೇ ಈ ವಿಷಯ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಾ ಸುದ್ದಿಯಾಗಿದೆ‌. ರಾಜ್ಯದಲ್ಲಿ ಈ ವಿಚಾರವಾಗಿ ನಡೆಯುತ್ತಿರುವ ಸಂ ಘ ರ್ಷ ದ ನಡುವೆಯೇ ಹೈಕೋರ್ಟ್ ನಲ್ಲಿ ಸಹಾ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ರಾಜ್ಯದಲ್ಲಿ ಮೂರು ದಿನಗಳ ಕಾಲ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನು ಈ ವಿಷಯದ ಬಗ್ಗೆ ನಟಿ ರಮ್ಯ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ನಟಿ ರಮ್ಯ ಅವರು ಸಿನಿಮಾ ಹಾಗೂ ರಾಜಕೀಯ ಎರಡರಿಂದಲೂ ಸಹಾ ದೂರವೇ ಉಳಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ರಮ್ಯ ಅವರು ಸಕ್ರಿಯವಾಗಿದ್ದಾರೆ. ಅಲ್ಲದೇ ದೇಶದಲ್ಲಿ ನಡೆಯುವ ಕೆಲವು ಬೆಳವಣಿಗೆಗಳ ವಿಚಾರವಾಗಿ ಹಾಗೂ ಹೊಸ ಸಿನಿಮಾಗಳ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ರಮ್ಯ ಅವರು ಹಿಜಬ್ ಮತ್ತು ಕೇಸರಿ ವಿಚಾರದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಈಗ ಈ ವಿಚಾರವಾಗಿ ವೀಡಿಯೋ ಒಂದನ್ನು ನಟಿ ರಮ್ಯ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.‌ ವೀಡಿಯೋ ಹಂಚಿಕೊಂಡ ರಮ್ಯ ಅವರು, “ಭಾರತದ ಯುವಕರು ಈ ರೀತಿ ಇಬ್ಭಾಗವಾಗುತ್ತಿರುವುದನ್ನು ನೋಡುತ್ತಿದ್ದರೆ ತುಂಬಾ ಬೇಸರವಾಗುತ್ತಿದೆ” ಎಂದು ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಹಿಜಬ್ ವಿ ವಾ ದ ಇನ್ನೂ ಯಾವ ಮಟ್ಟಕ್ಕೆ ಹೋಗಲಿದೆ ಎನ್ನುವುದು ಸದ್ಯ ರಾಜ್ಯದಲ್ಲಿ ಎಲ್ಲರು ಗಮನ ವಹಿಸಿರುವ ವಿಷಯವಾಗಿದೆ. ಕೋರ್ಟ್ ತೀರ್ಮಾನದ ಕಡೆಗೆ ಎಲ್ಲರ ಗಮನ ನೆಟ್ಟಿದೆ.

Leave a Comment