HomeEntertainmentಹಿಂದೆಂದೂ ಮಾಡಿರದಂತ ಪಾತ್ರದ ಮೂಲಕ ಮತ್ತೆ ಬಾಲಿವುಡ್ ಗೆ ಶ್ರದ್ಧಾ ಶ್ರೀನಾಥ್ ಎಂಟ್ರಿ: ಫ್ಯಾನ್ಸ್ ಆದ್ರು...

ಹಿಂದೆಂದೂ ಮಾಡಿರದಂತ ಪಾತ್ರದ ಮೂಲಕ ಮತ್ತೆ ಬಾಲಿವುಡ್ ಗೆ ಶ್ರದ್ಧಾ ಶ್ರೀನಾಥ್ ಎಂಟ್ರಿ: ಫ್ಯಾನ್ಸ್ ಆದ್ರು ಥ್ರಿಲ್ !

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಶ್ರದ್ಧಾ ಶ್ರೀನಾಥ್ ತಾನೊಬ್ಬ ಪ್ರತಿಭಾವಂತ ನಟಿ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಬಹು ದಿನಗಳ ನಂತರ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ನಟಿಸಲು ನಟಿಯು ಗ್ರೀನ್ ಸಿಗ್ನಲ್ ನೀಡುವ ಮೂಲಕ ಈಗ ಸುದ್ದಿಯಾಗಿದ್ದಾರೆ. ನಟಿ ಶ್ರದ್ಧಾ ಶ್ರೀನಾಥ್ ಈಗಾಗಲೇ ಬಾಲಿವುಡ್ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ದಕ್ಷಿಣದ ನಾಲ್ಕೂ ಭಾಷೆಗಳಲ್ಲಿ ಸಹಾ ನಟಿಸಿ, ಹಿಂದಿ ಸಿನಿಮಾಕ್ಕೆ ಕೂಡಾ ಪಾದಾರ್ಪಣೆ ಮಾಡುವ ಮೂಲಕ ಪಂಚ ಭಾಷಾ ತಾರೆಯಾಗಿ ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಕನ್ನಡದಲ್ಲಿ ಯೂ ಟರ್ನ್ , ಆಪರೇಷನ್ ಅಲಮೇಲಮ್ಮ ಸಿನಿಮಾಗಳ ಮೂಲಕ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದ ನಟಿಯು, ಅನಂತರ ಪರ ಭಾಷಾ ಸಿನಿಮಾಗಳಲ್ಲೂ ಅವಕಾಶ ಪಡೆಯುವ ಮೂಲಕ ಬಹು ಭಾಷಾ ನಟಿಯಾಗಿ ಹೆಸರನ್ನು ಮಾಡಿದ್ದಾರೆ. ಅವರು ಈ ಹಿಂದೆ ಬಾಲಿವುಡ್ ನ ಮಿಲನ್ ಟಾಕೀಸ್ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. ಈಗ ಮತ್ತೊಮ್ಮೆ ಬಾಲಿವುಡ್ ಅಂಗಳದ ಕಡೆಗೆ ಮುಖ ಮಾಡಿರುವ ಶ್ರದ್ಧಾ ಶ್ರೀನಾಥ್ ಅವರು ಲೆಟರ್ ಟು ಮಿಸ್ಟರ್ ಖನ್ನಾ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಮಿಲಿಂದ್ ದೈಮಡೆ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಬಾಲಿವುಡ್ ನ ಹಿರಿಯ ನಟಿ, ರಿಷಿ ಕಪೂರ್ ಅವರ ಪತ್ನಿ ನೀತೂ ಕಪೂರ್ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಇವರೊಂದಿಗೆ ಸನ್ನಿ ಕೌಶಲ್ ಮತ್ತು ಶ್ರದ್ಧಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ಕ್ಲಿಕ್ ಮಾಡಿದಂತಹ ಫೋಟೋ ಈಗ ನಟಿಯ ಅಭಿಮಾನಿಗಳ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ. ತಾಯಿ ಮಗನ ನಡುವಿನ ಬಾಂಧವ್ಯವನ್ನು ಕುರಿತಾದ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾದಲ್ಲಿ ನೀತೂ ಕಪೂರ್ ಮತ್ತು ಶ್ರದ್ಧಾ ಅವರ ಪಾತ್ರಗಳಿಗೆ ವಿಶೇಣವಾದ ಪ್ರಾಧಾನ್ಯತೆಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

ನಟಿ ಶ್ರದ್ಧಾ ಶ್ರೀನಾಥ್ ಅವರು ಸಹಾ ತಾನು ಹಿಂದೆಂದೂ ನಟಿಸದಂತಹ ಒಂದು ವಿಶೇಷವಾದ ಪಾತ್ರದಲ್ಲಿ ಈ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ನಟಿಯು ತಮ್ಮ ಪಾತ್ರದ ಬಗ್ಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಶೀಘ್ರದಲ್ಲಿಯೇ ಚಿತ್ರತಂಡವು ಸಿನಿಮಾದ ಕುರಿತಾಗಿ ಹೊಸ ಅಪ್ಡೇಟ್ ಗಳನ್ನು ಹಾಗೂ ಇನ್ನಷ್ಟು ಮಾಹಿತಿಗಳನ್ನು ನೀಡುವುದಾಗಿ ಮಾದ್ಯಮಗಳಿಗೆ ತಿಳಿಸಿದೆ. ಶ್ರದ್ಧಾ ಶ್ರೀನಾಥ್ ಅವರ ಅಭಿಮಾನಿಗಳು ನಟಿಯು ಮತ್ತೊಮ್ಮೆ ಬಾಲಿವುಡ್ ಗೆ ಎಂಟ್ರಿ ನೀಡಿರುವ ವಿಚಾರ ತಿಳಿದು ಖುಷಿಯಾಗಿದ್ದಾರೆ.

- Advertisment -