ಹಿಂದೂ ದೇವರ ಅಪಹಾಸ್ಯ: ಅಜಯ್ ದೇವಗನ್ ಸಿನಿಮಾ ನಿಷೇಧಕ್ಕೆ ಹೆಚ್ಚುತ್ತಿದೆ ಒತ್ತಾಯ

Written by Soma Shekar

Published on:

---Join Our Channel---

ಸಿನಿಮಾಗಳಲ್ಲಿ ಹಿಂದೂ ದೇವರುಗಳ ಬಗ್ಗೆ ಅಪಹಾಸ್ಯ ಮಾಡುವುದು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವಂತಹ ಸನ್ನಿವೇಶಗಳ ಬಗ್ಗೆ ಇತ್ತೀಷಿನ ದಿನಗಳಲ್ಲಿ ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳಿಗೆ ಕಾರಣವಾಗುತ್ತಿದೆ. ಜನರು ಕೆಲವು ಸಿನಿಮಾಗಳ ಮೇಲೆ ತಮ್ಮ ಸಿಟ್ಟು, ಅಸಮಾಧಾನವನ್ನು ಹೊರ ಹಾಕುವ ಘಟನೆಗಳು ಸಹಾ ನಡೆಯುತ್ತಿವೆ‌.‌ ಈಗ ಅಂತಹುದೇ ಮತ್ತೊಂದು ಘಟನೆ ವರದಿಯಾಗಿದ್ದು, ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ಹೊಸ ಸಿನಿಮಾ ಥ್ಯಾಂಕ್ ಗಾಡ್ ಅನ್ನು ನಿಷೇಧಿಸಬೇಕೆಂದು ಹಿಂದೂ ಜಾಗೃತಿ ಸಮಿತಿ ಒತ್ತಾಯವೊಂದನ್ನು ಹೇರಿದೆ. ಸಿನಿಮಾದಲ್ಲಿ ಕೆಲವು ಸನ್ನಿವೇಶಗಳ ಕುರಿತಾಗಿ ಆಕ್ಷೇಪವು ಕೇಳಿ ಬಂದಿದೆ.

ಈ ಸಿನಿಮಾದಲ್ಲಿ ಹಿಂದೂ ದೇವರನ್ನು ಅಪಹಾಸ್ಯ ಮಾಡಲಾಗಿದೆ. ಇಂತಹ ಸಿನಿಮಾಗಳನ್ನು ಸೆನ್ಸಾರ್ ಮಂಡಳಿ ಬಿಡುಗಡೆ ಮಾಡಲು ಹೇಗೆ ಅನುಮತಿಯನ್ನು ನೀಡುತ್ತಿದೆ. ಟ್ರೈಲರ್ ಗೂ ಸಹಾ ಸರ್ಟಿಫಿಕೇಟ್ ನೀಡಲಾಗುತ್ತದೆ. ಸಿನಿಮಾದಲ್ಲಿನ ದೃಶ್ಯವನ್ನು ನೋಡುವಾಗ ಸೆನ್ಸಾರ್ ಮಂಡಳಿ ನಿದ್ದೆ ಮಾಡುತ್ತಿತ್ತೇ? ಎಂದು ಪ್ರಶ್ನೆ ಮಾಡಿದೆ ಹಿಂದೂ ಜಾಗೃತಿ ಸಮಿತಿ. ಮೃ ತ್ಯ ವಿನ ನಂತರ ಜನರ ಪಾಪ, ಪುಣ್ಯ ಗಳನ್ನು ಲೆಕ್ಕ ಹಾಕುವ ಚಿತ್ರಗುಪ್ತ ಮತ್ತು ಮೃ ತ್ಯು ದೇವತೆಯಾದಂತಹ ಯಮ ಧರ್ಮರಾಯನನ್ನು ಈ ಸಿನಿಮಾದಲ್ಲಿ ಆಧುನಿಕ ರೂಪದಲ್ಲಿ ತೋರಿಸಲಾಗಿದೆ. ಆದರೆ ಅವರನ್ನು ನಿಪ್ಪ್ರಯೋಜಕ ಎನ್ನುವ ಹಾಗೆ ಹಾಸ್ಯದ ಮಾತುಗಳನ್ನು ಆಡುವ ಮೂಲಕ ಬಿಂಬಿಸಲಾಗಿದೆ ಎನ್ನುವುದು ಆ ರೋ ಪ ವಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವರುಗಳಾದ ಚಿತ್ರ ಗುಪ್ತ ಮತ್ತು ಯಮ ಧರ್ಮರಾಯನನ್ನು ಅಪಹಾಸ್ಯ ಮಾಡುವುದನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಹಿಂದೂ ಜಾಗೃತಿ ಸಮಿತಿಯ ಸದಸ್ಯರು ಸಿಟ್ಟನ್ನು ಹೊರ ಹಾಕಿದ್ದಾರೆ. ನಿನ್ನೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ಉಂಟು ಮಾಡಿದ್ದಾರೆ ಎನ್ನುವ ಕಾರಣಕ್ಕೆ ನಟ ಅಜಯ್ ದೇವಗನ್ ಸೇರಿದಂತೆ ಮೂವರ ಮೇಲೆ ದೂರು ದಾಖಲಾಗಿದೆ. ಹಿಮಾಂಶು ಶ್ರೀ ವಾಸ್ತವ್ ಎನ್ನುವವರು ಸಿನಿಮಾ ಟ್ರೈಲರ್ ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಅಂಶವಿದೆ ಎಂದು ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮೋನಿಕಾ ಮಿಶ್ರಾ ಅವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಚಿತ್ರಗುಪ್ತ ದೇವರನ್ನು ಪೂಜಿಸುವ ಕಾಯಸ್ಥ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತೆ ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಸನ್ನಿವೇಶಗಳಿವೆ ಎನ್ನುತ್ತಾ ನಟ ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರ ಮತ್ತು ಇಂದ್ರ ಕುಮಾರ್ ಮೇಲೆ ದೂರನ್ನು ನೀಡಲಾಗಿದೆ. ಹಿಮಾಂಶು ಅವರು ಹೇಳಿಕೆಯನ್ನು ದಾಖಲಿಸಲು ಕೋರ್ಡ್ ಸೆಪ್ಟೆಂಬರ್‌ 18 ರ ದಿನಾಂಕವನ್ನು ನಿಗಧಿ ಮಾಡಿದೆ. ಸಿನಿಮಾ ಟ್ರೈಲರ್ ಬಿಡುಗಡೆಯಾದ ನಂತರ ಪ್ರೇಕ್ಷಕರ ಗಮನವನ್ನು ಸೆಳೆದಿದೆ, ಪ್ರೇಕ್ಷಕರಿಗೆ ಸಿನಿಮಾ ಕುರಿತಾಗಿ ಕುತೂಹಲವನ್ನು ಸಹಾ ಮೂಡಿಸಿದೆ. ಅಕ್ಟೋಬರ್‌ 25 ಕ್ಕೆ ಥ್ಯಾಂಕ್ ಗಾಡ್ ತೆರೆಗೆ ಬರಲು ಸಜ್ಜಾಗಿದೆ.

Leave a Comment