ಹಿಂದಿ ರಾಷ್ಟ್ರ ಭಾಷೆ: ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯೆ ಕೊಟ್ರಾ ಯೋಗರಾಜ್ ಭಟ್ ??

Entertainment Featured-Articles News

ಹಿಂದಿ ರಾಷ್ಟ್ರ ಭಾಷೆ ಎನ್ನುವ ವಿಚಾರವಾಗಿ ಕಳೆದೆರಡು ದಿನಗಳಿಂದಲೂ ಸಹಾ ದಕ್ಷಿಣ ಭಾರತದ ಸಿನಿಮಾ ಕಲಾವಿದರು ಮತ್ತು ಬಾಲಿವುಡ್ ನಡುವೆ ಒಂದು ಶೀತಲ ಸಮರ ಆರಂಭವಾಗಿದೆ. ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಹಿಂದಿಯ‌ನ್ನು ತಾನು ರಾಷ್ಟ್ರ ಭಾಷೆಯನ್ನಾಗಿ ಒಪ್ಪುವುದಿಲ್ಲ ಎನ್ನುವ ಮಾತನ್ನು ಸ್ಪಷ್ವವಾಗಿ ಹೇಳಿದ್ದರು. ಅವರ ಈ ಹೇಳಿಕೆ ಸುದ್ದಿಯಾಗುತ್ತಲೇ, ಬಾಲಿವುಡ್ ನ ಸ್ಟಾರ್ ನಟ ಅಜಯ್ ದೇವಗನ್ ಒಂದು ಟ್ವೀಟ್ ಮಾಡಿದರು. ಈ ಟ್ವೀಟ್ ಒಂದು ದೊಡ್ಡ ವಿ ವಾ ದವನ್ನೇ ಹುಟ್ಟು ಹಾಕಿ, ಸಿಕ್ಕಾಪಟ್ಟೆ ಚರ್ಚೆಗೆ ಸಹಾ ಕಾರಣವಾಯಿತು, ಅಜಯ್ ದೇವಗನ್ ಅವರ ಮಾತಿಗೆ ಅಸಮಾಧಾನ ದೊಡ್ಡ ಸಂಖ್ಯೆಯಲ್ಲಿ ಹರಿದು ಬಂತು..

ಅಜಯ್ ದೇವಗನ್ ಅವರು, ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದ ಮೇಲೆ ನಿಮ್ಮ ಸಿ‌ನಿಮಾಗಳನ್ನೇಕೆ ಡಬ್ ಮಾಡಿ ಬಿಡುಗಡೆ ಮಾಡುವಿರಿ? ಎನ್ನುವ ಪ್ರಶ್ನೆ ಹಾಕಿದ್ದರು. ಕೂಡಲೇ ದಕ್ಷಿಣದ ಅನೇಕ ಕಲಾವಿದರು ಈ ಹೇಳಿಕೆಯ ವಿ ರು ದ್ಧ ದನಿ ಎತ್ತಿದರು. ಆಗ ಅಜಯ್ ದೇವಗನ್ ಅವರು ಅನುವಾದದ ಕೊರತೆಯಿಂದ ಪ್ರಮಾದ ಆಯಿತು ಎನ್ನುವ ಸ್ಪಷ್ಟ‌ನೆಯೊಂದನ್ನು ನೀಡಿದರು. ಏನೇ ಆದರೂ ಅಜಯ್ ದೇವಗನ್ ಅವರು ಮಾತಿನ ಭರದಲ್ಲಿ ಮಾಡಿದ ಹೇಳಿಕೆಗೆ ಅನೇಕರು ತಕ್ಕ ಪ್ರತ್ಯುತ್ತರವನ್ನೇ ನೀಡಿದರು.

ಹಲವು ಸಿನಿ ಕಲಾವಿದರು ಮಾತ್ರವೇ ಅಲ್ಲದೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಹಾ ಸುದೀಪ್ ಅವರು ಮಾತಿಗೆ ಬೆಂಬಲ ವ್ಯಕ್ತಪಡಿಸಿದರು. ಈ ಎಲ್ಲಾ ವಿಚಾರಗಳೆಲ್ಲಾ ಬೆನ್ನಲ್ಲೇ ಇದೇ ವಿಚಾರವಾಗಿ ಕನ್ನಡದ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರನ್ನು ಮಾದ್ಯಮಗಳು ಕೇಳಿದಾಗ ಅವರು ನೀಡಿರುವ ಉತ್ತರ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ಇದರ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಹೌದು, ಯೋಗರಾಜ್ ಭಟ್ ಅವರು, ನನ್ನ ಬಗ್ಗೆ ಕೇಳಿದರೇನೇ ನನಗೆ ನೆಟ್ಟಗೆ ಉತ್ತರ ಕೊಡಲು ಆಗುವುದಿಲ್ಲ, ಇನ್ನು ರಾಷ್ಟ್ರದ ಸಮಸ್ಯೆ ಬಗ್ಗೆ ನಾನೇನು ಹೇಳಲಿ?? ಎನ್ನುತ್ತಾ, ನಾನು ಕನ್ನಡದ ಪಂಡಿತನೂ ಹೌದು, ಹಿಂದಿ ಪಂಡಿತನೂ ಹೌದು ಎನ್ನುತ್ತಾ‌ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದು, ಇದನ್ನು ಕಂಡು ನೆಟ್ಟಿಗರು ಭಾಷಾ ವಿಚಾರದಲ್ಲಿ ಏಕೆ ಇಂತಹ ಹಿಂದೇಟು?? ಇವರಿಗೆ ಈ ವಿಚಾರದಲ್ಲಿ ಸ್ಪಷ್ಟತೆ ಏಕಿಲ್ಲ ? ಎನ್ನುವ ಪ್ರಶ್ನೆಗಳನ್ನು ಮಾಡಿದ್ದಾರೆ.

Leave a Reply

Your email address will not be published.