ಹಿಂದಿ ನಾಗಿಣಿ ಸೀರಿಯಲ್ ಪ್ರೋಮೊದ ಮಹಾ ಎಡವಟ್ಟು: ನಿರ್ಮಾಪಕಿ ಏಕ್ತಾ ಕಪೂರ್ ಭರ್ಜರಿ ಟ್ರೋಲ್!!

Entertainment Featured-Articles News Viral Video
67 Views

ಟಿವಿ ಯಿಂದ ಹಿಡಿದು ಬಾಲಿವುಡ್ ಸಿನಿಮಾಗಳವರೆಗೆ ತನ್ನದೇ ಆದ ಹೆಸರನ್ನು ಮಾಡಿರುವ ನಿರ್ಮಾಪಕಿ ಏಕ್ತಾ ಕಪೂರ್ ಕಿರುತೆರೆಯಲ್ಲಿ ನಾಗಿನ್ ( ನಾಗಿಣಿ ) ಧಾರಾವಾಹಿಗಳ ಸೀಸನ್ ಗಳಿಗೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈಗಾಗಲೇ ಹಿಂದಿಯಲ್ಲಿ ನಾಗಿಣಿ ಆರು ಸೀಸನ್ ಗಳು ಮುಗಿದಿವೆ. ಆದರೆ ಐದನೇ ಸೀಸನ್ ನಿರೀಕ್ಷಿತ ಮಟ್ಟದ ಯಶಸ್ಸು ಪಡೆಯುವಲ್ಲಿ ವಿಫಲವಾದವು. ಈಗ ಏಕ್ತಾ ಕಪೂರ್ ನಿರ್ಮಾಣದ ನಾಗಿನ್ 6 ಮೂಲಕ ಭರ್ಜರಿ ಹಾಗೂ ಅದ್ದೂರಿಯಾಗಿ ಕಿರುತೆರೆಗೆ ಮತ್ತೊಮ್ಮೆ ನಾಗಿಣಿಯ ಎಂಟ್ರಿಗೆ ವೇದಿಕೆ ಸಜ್ಜಾಗಿದೆ.

ನಾಗಿನ್ 6 ರ ಪ್ರೊಮೋ ಕೂಡಾ ಬಿಡುಗಡೆ ಆಗಿದೆ. ಪ್ರತಿ ಬಾರಿ ನಾಗಿನ್ ಬಂದಾಗ ಅದರ ಪ್ರೋಮೋ ದಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿ ಕುತೂಹಲವನ್ನು ಕೆರಳಿಸುತ್ತಿತ್ತು. ಆದರೆ ಈ ಬಾರಿ ಇದು ಉಲ್ಟಾ ಆಗಿದೆ. ಪ್ರೋಮೋ ದಲ್ಲಿ ಆದ ಒಂದು ದೊಡ್ಡ ತಪ್ಪಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ನಾಗಿನ್ ಸೀಸನ್ 6 ರ ಪ್ರೋಮೋವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಧಾರಾವಾಹಿ ಆರಂಭಕ್ಕೆ ಮೊದಲೇ ನೆಟ್ಟಿಗರ ಅಪಹಾಸ್ಯಕ್ಕೆ ಗುರಿಯಾಗಿದೆ.

ಹಾಗಾದ್ರೆ ಪ್ರೋಮೋ ದಲ್ಲಿ ಅಂತ ತಪ್ಪಾದ್ರೂ ಏನಾಯ್ತು ಅಂತ ತಿಳಿಯೋಣ ಬನ್ನಿ. ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವನ್ನು ಕೊರೊನಾ ಮಹಾ ಮಾರಿ ಹಿಡಿದು ಪೀಡಿಸಿದೆ. ಇದರಿಂದಾಗಿ ಇಡೀ ವಿಶ್ವವೇ ಕೆಲವು ದಿನಗಳ ಕಾಲ ಲಾಕ್ ಆಗಿತ್ತು. ಅನಂತರ ನಿಧಾನವಾಗಿ ಜಗತ್ತು ಅದರಿಂದ ಹೊರ ಬರುವ ಪ್ರಯತ್ನವನ್ನು ಮಾಡುತ್ತಿದೆಯಾದರೂ ಅದು ಇನ್ನೂ ಸಹಾ ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಆದರೆ ನಿರ್ಮಾಪಕಿ ಏಕ್ತಾ ಕಪೂರ್ ಅವರ ಬರಹಗಾರರು ಸೀರಿಯಲ್ ಪ್ರೋಮೋದಲ್ಲಿ ಕೊರನಾವನ್ನೇ ಅ ಪ ಹಾಸ್ಯ ಮಾಡಿದ್ದಾರೆ.

ಹೌದು ಪ್ರೋಮೋ ದಲ್ಲಿ ಜಗತ್ತನ್ನು ಕಾಡಿದ ಕೊರೊನಾ ವೈರಸ್ ಅನ್ನು ವಿಜ್ಞಾನವಾಗಲೀ, ವೈದ್ಯಕೀಯ ಕ್ಷೇತ್ರವಾಗಲೀ ಅಲ್ಲ ಬದಲಿಗೆ ನಾಗಿಣಿ ವೈರಸನ್ನು ನಾಶ ಮಾಡುತ್ತಿರುವ ಹಾಗೆ ತೋರಿಸಲಾಗಿದೆ. ಇದನ್ನು ನೋಡಿದ ನೆಟ್ಟಿಗರು ನಾಗಿಣಿ ಮತ್ತು ಕೋವಿಡ್ ಬಂಧ ಇಂತಹ ಭ ಯಾ ನ ಕ ಕಾನ್ಸೆಪ್ಟ್ ಗೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾಗಿಣಿ ಸೀಸನ್ ಆರು ನೋಡಿ ವೈದ್ಯರು ಹಾಗೂ ವಿಜ್ಞಾನಿಗಳು ಕೋವಿಡ್ ಅಂತ್ಯ ಮಾಡ್ತಾರಾ?? ಎಂದು ಪ್ರಶ್ನೆ ಮಾಡಿದ್ದಾರೆ.

ನೆಟ್ಟಿಗರು ಹಿಗ್ಗಾ ಮುಗ್ಗಾ ಸೀರಿಯಲ್ ಅನ್ನು ಟ್ರೋಲ್ ಮಾಡಿದ್ದಾರೆ. ಕೊರೊನಾ ವಿ ರು ದ್ಧ ನಾಗಿಣಿ ಹೋರಾಟ ಅನ್ನೋದು ಜನರಿಗೆ ಇಷ್ಟ ವಾಗಿಲ್ಲ. ಕೆಲವರು ಏಕ್ತಾ ಕಪೂರ್ ಸ್ವಲ್ಪ ಆದ್ರೂ ನಾಚಿಕೆ ಪಡಿ ಎಂದರೆ, ಇನ್ನೂ ಕೆಲವರು ಇದೊಂದು ಕೆಟ್ಟ ನಿರ್ಮಾಣ ಸಂಸ್ಥೆ ಎಂದು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ನಿಮ್ಮ ಆಲೋಚನೆಗೆ ಕೋಟಿ ಕೋಟಿ ಪ್ರಣಾಮಗಳು ಎಂದಿದ್ದಾರೆ.

Leave a Reply

Your email address will not be published. Required fields are marked *