ಹಿಂದಿ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಕನ್ನಡ ಬಿಗ್ ಬಾಸ್ ಸ್ಪರ್ಧಿಯ ಡಾನ್ಸ್ ಅಬ್ಬರಕ್ಕೆ ಸೀಟಿ ಹೊಡೆದ ಮಾಧುರಿ ದೀಕ್ಷಿತ್

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕನ್ನಡ ಬಿಗ್ ಬಾಸ್ ಎಂಟನೇ ಸೀಸನ್ ಕಳೆದ ಭಾನುವಾರವಷ್ಟೇ ಮುಗಿದಿದೆ. ಪ್ರತಿ ಹೊಸ ಸೀಸನ್ ಬಂದಾಗಲೂ ಮನೆಗೆ ಪ್ರವೇಶಿಸುವ ಸ್ಪರ್ಧಿಗಳು ಬಿಗ್ ಬಾಸ್ ನ ಮೂಲಕ ದೊಡ್ಡಮಟ್ಟದ ಜನಪ್ರಿಯತೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇನ್ನು ಕೆಲವು ಸ್ಪರ್ಧಿಗಳು ಒಂದಷ್ಟು ಚರ್ಚೆಗಳಿಗೆ ಕಾರಣವಾಗುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಹೊರ ಜಗತ್ತಿನಲ್ಲಿ ಬಹಳಷ್ಟು ಅವಕಾಶಗಳು ಅವರನ್ನು ಅರಸಿ ಬರುತ್ತವೆ. ಶೋ ಮುಗಿದ ಮೇಲೆ ಬಹುತೇಕ ಎಲ್ಲರೂ ಬ್ಯುಸಿಯಾಗಿ ಬಿಡುತ್ತಾರೆ. ಕಳೆದ ಬಾರಿ ಅಂದರೆ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶಿಸಿದ್ದವರು ಸೂಪರ್ ಡ್ಯಾನ್ಸರ್ ಕಿಶನ್ ಬೆಳಗಲಿ. ಬಿಗ್ ಬಾಸ್ ಶೋ ಮೂಲಕ ಕಿಶನ್ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡರು.

ಮೂಲತಃ ಕರ್ನಾಟಕದವರೇ ಆದ ಕಿಶನ್ ರವರು ಬಿಗ್ ಬಾಸ್ ಗೆ ಬರುವ ಮೊದಲು, ಭಾರತದ ಕಿರುತೆರೆಯ ಲೋಕದ ಅತಿ ದೊಡ್ಡ ಡಾನ್ಸ್ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಡಾನ್ಸ್ ದಿವಾನೇ ಎನ್ನುವ ಹೆಸರಿನ, ಮಾಧುರಿ ದೀಕ್ಷಿತ್, ತುಷಾರ್ ರಂತಹ ದಿಗ್ಗಜ ಡಾನ್ಸರ್ ಗಳು ಜಡ್ಜ್ ಗಳಾಗಿರುವ ಡಾನ್ಸ್ ದೀವಾನೆಯ ಮೊದಲನೇ ಸೀಸನ್ ನಲ್ಲಿ ಕಿಶನ್ ಸ್ಪರ್ಧಿಯಾಗಿ ಭಾಗವಹಿಸಿದ್ದು ಮಾತ್ರವೇ ಅಲ್ಲದೇ ಅವರು ಶೋ ನಲ್ಲಿ ಸೆಕೆಂಡ್ ಜನರೇಶನ್ ಸ್ಪರ್ಧಿಗಳ ವಿಭಾಗದಲ್ಲಿ ಗೆಲುವನ್ನು ತನ್ನದಾಗಿಸಿಕೊಂಡವರು. ಅಲ್ಲದೇ ಕೆಲವು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಕೂಡಾ ಕಿಶನ್ ಕಾಣಿಸಿಕೊಂಡಿದ್ದಾರೆ. ಆದಾದ ನಂತರ ಕನ್ನಡ ಬಿಗ್ ಬಾಸ್ ಸೀಸನ್ ಏಳರಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿಶನ್ ನಾಡಿನ ಮನೆ ಮನೆಮಾತಾದರು.

ಇದೀಗ ಕಿಶನ್ ಎರಡು ವರ್ಷಗಳ ನಂತರ ಮತ್ತೊಮ್ಮೆ ಡಾನ್ಸ್ ದಿವಾನೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ವಾರಗಳಿಂದಲೂ ಸಹ ಡಾನ್ಸ್ ದಿವಾನೆ ಸೀಸನ್ ಮೂರರ ಸ್ಪರ್ಧಿಗಳ ಜೊತೆ ಜೋಡಿಗಳ ರೂಪದಲ್ಲಿ ಈ ಹಿಂದಿನ ಎರಡು ಸೀಸನ್ ಗಳ ಸ್ಪರ್ಧಿಗಳನ್ನು ಕರೆತರಲಾಗಿದೆ. ಅದರಲ್ಲಿ ಕಿಶನ್ ಅವರು ಕೂಡಾ ಒಬ್ಬರಾಗಿ, ಡಾನ್ಸ್ ದೀವಾನೆಗೆ ಮರಳಿದ್ದಾರೆ. ಡಾನ್ಸ್ ದೀವಾನೆ ಸೀಸನ್ ಮೂರರಲ್ಲಿ ತನ್ನ ಡಾನ್ಸ್ ಗಳ ಮೂಲಕವೇ ಬಹಳಷ್ಟು ಸದ್ದು ಮಾಡುತ್ತಿರುವ ಅರುಂಧತಿ ಹೆಸರಿನ ಡಾನ್ಸರ್ ಜೊತೆಗೆ ಕಿಶನ್ ಜೋಡಿಯಾಗಿ ಅದ್ಭುತವಾದ ಡ್ಯಾನ್ಸ್ ಪರ್ಫಾಮೆನ್ಸ್ ನೀಡುತ್ತಾ ಶೋನ‌ ಮೂವರು ಜಡ್ಜ್ ಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ.

ಮೊದಲನೇ ಸೀಸನ್ ವಿನ್ನರ್ ಆಗಿರುವ ಕಿಶನ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಡಾನ್ಸ್ ದೀವಾನೆ ಶೋ ನಿರೂಪಕಿ ಭಾರತಿ ಸಿಂಗ್ ಜೊತೆ ಮಾಡಿದಂತಹ ಫನ್ನಿ ವಿಡಿಯೋ ಗಳನ್ನು ಶೇರ್ ಮಾಡಿಕೊಳ್ಳುವುದನ್ನು ಗಮನಿಸಬಹುದಾಗಿದೆ. ಇನ್ನು ಶೋನಲ್ಲಿ ಮಾಧುರಿ ದೀಕ್ಷಿತ್ ಅವರು ಒಂದು ಸಲ ಕಿಶನ್ ಅವರನ್ನು ಪ್ರಸ್ತುತ ಏನು ಮಾಡುತ್ತಿದ್ದೀರಿ ಎಂದು ಕೇಳಿದಾಗ ಕಿಶನ್ ತಾನು ದಕ್ಷಿಣದಲ್ಲಿ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. ಒಟ್ಟಾರೆ ಕಿಶನ್ ಡಾನ್ಸ್ ದೀವಾನೆ ಯಲ್ಲಿ ಮತ್ತೊಮ್ಮೆ ಕಾಣಿಸಿಕೊಂಡು ಡಾನ್ಸ್ ಮೂಲಕ ಜಡ್ಜ್ ಗಳ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

Leave a Comment