ಹಿಂದಿ ಟಾಕ್ ಶೋ ನಲ್ಲಿ ಕನ್ನಡ ನಿರ್ಲಕ್ಷಿಸಿ ತೆಲುಗಿಗೆ ಮಣೆ ಹಾಕಿದ ನಟಿ ರಶ್ಮಿಕಾ ಮಂದಣ್ಣ

Entertainment Featured-Articles News
84 Views

ದಕ್ಷಿಣದ ನಟಿಯರಲ್ಲಿ ಅತಿ ಹೆಚ್ಚು ಟ್ರೋಲಾಗುವ ನಟಿ ಯಾರು ಎನ್ನುವ ವಿಷಯಕ್ಕೆ ಬಂದರೆ ಅದು ನಟಿ ರಶ್ಮಿಕಾ ಮಂದಣ್ಣ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ರಶ್ಮಿಕಾ ತೆಲುಗಿನಲ್ಲಿ ಸ್ಟಾರ್ ನಟಿಯ ಪಟ್ಟವನ್ನು ಪಡೆದುಕೊಂಡಿದ್ದಾರೆ. ಕನ್ನಡದ ಮೂಲಕ ಸಿನಿರಂಗಕ್ಕೆ ಎಂಟ್ರಿ ನೀಡಿದ ರಶ್ಮಿಕಾ ತೆಲುಗು, ತಮಿಳಿನ ನಂತರ ಇದೀಗ ಬಾಲಿವುಡ್ ನಲ್ಲಿ ಸಹಾ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಕನ್ನಡ ಭಾಷೆಯ ವಿಚಾರದಲ್ಲಿ ಈಗಾಗಲೇ ನಟಿ ರಶ್ಮಿಕಾ ಅವರು ಹಲವು ಬಾರಿ ಟೀಕೆಗಳಿಗೆ ಗುರಿಯಾಗಿದ್ದಾರೆ. ತನಗೆ ಕನ್ನಡ ಬರೋದಿಲ್ಲ ಎಂದು ಹೇಳುವ ಮೂಲಕವೂ ದೊಡ್ಡ ಸುದ್ದಿಯಾಗಿದ್ದವರು ರಶ್ಮಿಕಾ ಮಂದಣ್ಣ. ಸದಾ ಒಂದಲ್ಲಾ ಒಂದು ವಿಷಯವಾಗಿ ಸುದ್ದಿಯಾಗುವ ರಶ್ಮಿಕಾ ಇತ್ತೀಚಿಗೆ ಹಿಂದಿಯ ಟಾಕ್ ಶೋ ಒಂದರಲ್ಲಿ ಕನ್ನಡದ ಬದಲಾಗಿ ತೆಲುಗನ್ನು ಆಯ್ಕೆ ಮಾಡಿಕೊಂಡ ಘಟನೆ ನಡೆದಿದೆ.

ಹೌದು ನಟಿ ರಶ್ಮಿಕಾ ಅವರು ಇತ್ತೀಚಿಗೆ ಸೋಷಿಯಲ್ ಮೀಡಿಯಾ ಸ್ಟಾರ್ಸ್ ವಿತ್ ಜನೆಸ್ ಎನ್ನುವ ಟಾಕ್ ಶೋ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕಿಯು ಹಲವು ಪ್ರಶ್ನೆಗಳನ್ನು ಕೇಳಿದ್ದು, ರಶ್ಮಿಕಾ ಬಹಳಷ್ಟು ತಮ್ಮ ವೈಯಕ್ತಿಕ ಹಾಗೂ ಚಿತ್ರ ಜಗತ್ತಿನ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ಅಂತ್ಯದಲ್ಲಿ ಶೋ ನಿರೂಪಕಿಯು ರಶ್ಮಿಕಾ ಅವರಿಗೆ ಅವರ ಜೊತೆ ಶೋ ನಲ್ಲಿ ಭಾಗವಹಿಸಿದ್ದ ಹಾಸ್ಯ ಕಲಾವಿದ ಜಾಕಿರ್ ಖಾನ್ ಗೆ ಮೇ ತೋ ಪಿಗಲ್ ಗಯಾ ಎನ್ನುವ ಹಿಂದಿಯ ಸಾಲನ್ನು ಕನ್ನಡದಲ್ಲಿ ಹೇಳಿ ಕೊಡುವಂತೆ ಕೇಳಿದ್ದಾರೆ.

ಆದರೆ ಆಗ ನಟಿ ರಶ್ಮಿಕಾ ಕನ್ನಡದಲ್ಲಿ ಹೇಳಿಕೊಡಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ನಂತರ ನಿರೂಪಕಿಯು ನಿಮಗೆ ಯಾವ ಭಾಷೆ ಅನುಕೂಲಕರವಾಗಿದೆಯೇ ಅದರಲ್ಲೇ ಹೇಳಿ ಕೊಡಿ ಎಂದಾಗ ರಶ್ಮಿಕಾ ತೆಲುಗಿನಲ್ಲಿ ನೇನು ಕರಿಗಿಪೋಯಾನು ಎಂದು ಜಾಕಿರ್ ಖಾನ್ ಅವರಿಗೆ ಹೇಳಿ ಕೊಟ್ಟಾಗ, ಅವರು ಅದರಂತೆ ಹೇಳಿದ್ದಾರೆ. ರಶ್ಮಿಕಾ ಅವರು ಹೀಗೆ ಕನ್ನಡದ ಬದಲಿಗೆ ತೆಲುಗು ಭಾಷೆಗೆ ನೀಡಿದ ಆದ್ಯತೆ ಸಹಜವಾಗಿಯೇ ಅನೇಕರಿಗೆ ಅಸಮಾಧನಾವನ್ನು ಮೂಡಿಸಿದೆ. ಮತ್ತೆ ಈ ವಿಷಯದಲ್ಲಿ ಟ್ರೋಲಾದರೂ ಆಶ್ಚರ್ಯ ಪಡುವಂತಿಲ್ಲ ಎನ್ನಬಹುದಾಗಿದೆ.

Leave a Reply

Your email address will not be published. Required fields are marked *