ಹಿಂದಿ ಆಯ್ತು, ಈಗ ದಕ್ಷಿಣಕ್ಕೆ ಕಾಲಿಟ್ಟ ಓಟಿಟಿ ಬಿಗ್ ಬಾಸ್: ಯಾವ ಭಾಷೇಲಿ ಮೊದಲು ಬರ್ತಿದೆ??

Written by Soma Shekar

Published on:

---Join Our Channel---

ಕಿರುತೆರೆಯ ಲೋಕದಲ್ಲಿ ಹಲವು ರಿಯಾಲಿಟಿ ಶೋ ಗಳು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅಲ್ಲದೇ ಹೊಸ ಹೊಸ ಕಾನ್ಸೆಪ್ಟ್ ಗಳೊಂದಿಗೆ ಹೊಸ ಹೊಸ ರಿಯಾಲಿಟಿ ಶೋ ಗಳು ಕಿರುತೆರೆಗೆ ಎಂಟ್ರಿ ನೀಡುತ್ತಲೇ ಇರುತ್ತವೆ. ಆದರೆ ಈ ಎಲ್ಲಾ ರಿಯಾಲಿಟಿ ಶೋ ಗಳ ನಡುವೆಯೇ ಒಂದು ರಿಯಾಲಿಟಿ ಶೋ ಮಾತ್ರ ತನ್ನದೇ ಆದ ಛಾಪನ್ನು ಮೂಡಿಸಿದೆ, ಹೌದು ಬಿಗ್ ಬಾಸ್ ರಿಯಾಲಿಟಿ ಶೋ ಗೆ ಕಿರುತೆರೆಯಲ್ಲಿ ಇರುವ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಪ್ರತಿ ಬಾರಿಯೂ ಹೊಸ ಸೀಸನ್ ಯಾವಾಗ ಎಂದು ಕಾಯುವ ಬಿಗ್ ಬಾಸ್ ನ ಅಭಿಮಾನಿಗಳ ದೊಡ್ಡ ಬಳಗವೇ ಇದೆ.

ಬಿಗ್ ಬಾಸ್ ಶೋ ಪ್ರಸಾರವಾಗುವ ಎಲ್ಲಾ ಭಾಷೆಗಳಲ್ಲೂ ಸಹಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದೆ. ಕನ್ನಡದಲ್ಲಿ ಈಗಾಗಲೇ ಯಶಸ್ವಿ ಎಂಟು ಸೀಸನ್ ಮುಗಿದಿದೆ. ಹಿಂದಿಯಲ್ಲಾದರೆ ಬರೋಬ್ಬರಿ ಹದಿನೈದು ಸೀಸನ್ ಗಳನ್ನು ಮುಗಿಸಿದೆ ಬಿಗ್ ಬಾಸ್. ನೆರೆಯ ತೆಲುಗು ರಾಜ್ಯಗಳಲ್ಲಿ ಬಿಗ್ ಬಾಸ್ ಯಶಸ್ವಿ ಐದು ಸೀಸನ್ ಗಳನ್ನು ಪೂರ್ತಿ ಮಾಡಿದೆ. ಇನ್ನು ಹಿಂದಿಯಲ್ಲಾದರೆ ಈ ಬಾರಿ ಟಿವಿ ಯಲ್ಲಿ 15 ನೇ ಸೀಸನ್ ಆರಂಭವಾಗುವ ಮೊದಲೇ ಮೊಟ್ಟ ಮೊದಲ ಬಾರಿಗೆ ಓಟಿಟಿಯಲ್ಲಿ ಬಿಗ್ ಬಾಸ್ ಗೆ ಎಂಟ್ರಿ ನೀಡಲಾಗಿತ್ತು.

ಹಿಂದಿಯಲ್ಲಿ ಇದೇ ಮೊದಲ ಬಾರಿಗೆ ಓಟಿಟಿಯಲ್ಲಿ ಅರವತ್ತು ದಿನಗಳ ಬಿಗ್ ಬಾಸ್ ನಡೆದಿತ್ತು. ಅಲ್ಲದೇ ಓಟಿಟಿಯಲ್ಲಿ ನಡೆದ ಬಿಗ್ ಬಾಸ್ ಗೆ ಸೆನ್ಸಾರ್ ಇಲ್ಲದ ಕಾರಣ ಸ್ವಲ್ಪ ಹೆಚ್ಚಾಗಿಯೇ ಸದ್ದು ಮಾಡಿತ್ತು. ಓಟಿಟಿ ಬಿಗ್ ಬಾಸ್ ನಲ್ಲಿ ನಡೆದ ಕೆಲವು ಘಟನೆಗಳು, ವಾಕ್ಸಮರ ದೊಡ್ಡ ಸಂಚಲನ ಹುಟ್ಟು ಹಾಕಿದ್ದುಂಟು. ಈಗ ಅದರ ಜನಪ್ರಿಯತೆಯ ಬೆನ್ನಲ್ಲೇ ತೆಲುಗಿನಲ್ಲಿ ಸಹಾ ಓಟಿಟಿಯಲ್ಲಿ ಬಿಗ್ ಬಾಸ್ ಆರಂಭಿಸಲು ಎಲ್ಲಾ ಸಿದ್ಧತೆಗಳು ನಡೆದಿದೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ಅಲ್ಲದೇ ಈಗಾಗಲೇ ಸ್ಪರ್ಧಿಗಳ ಹೆಸರುಗಳ ಪಟ್ಟಿ ಸಹಾ ಹರಿದಾಡಿದೆ.

ಸದ್ಯದ ಸುದ್ದಿಯ ಪ್ರಕಾರ ತೆಲುಗಿನಲ್ಲಿ ಇದೇ ಫೆಬ್ರವರಿ 27 ರಿಂದ ಓಟಿಟಿಯಲ್ಲಿ ಬಿಗ್ ಬಾಸ್ ಆರಂಭವಾಗಲಿದೆ ಎನ್ನಲಾಗಿದ್ದು, ದಕ್ಷಿಣದಲ್ಲಿ ಓಟಿಟಿಯಲ್ಲಿ ಬಿಗ್ ಬಾಸ್ ಮೊದಲ ಬಾರಿಗೆ ತೆಲುಗಿನಲ್ಲಿ ಪ್ರಸಾರವಾಗಲಿದೆ ಎನ್ನುವ ಸುದ್ದಿ ಈಗ ಗಮನ ಸೆಳೆದಿದೆ. ಈ ಸುದ್ದಿ ನಿಜವೇ ಆದಲ್ಲಿ ದಕ್ಷಿಣದಲ್ಲಿ ಮೊದಲ ಓಟಿಟಿ ಬಿಗ್ ಬಾಸ್ ಇದಾಗಲಿದೆ. ಇನ್ನು ಇಂತಹ ಬಿಗ್ ಬಾಸ್ ಕನ್ನಡದಲ್ಲಿ ಬಂದರೂ ಆಶ್ಚರ್ಯ ಪಡಬೇಕಿಲ್ಲ.

Leave a Comment