ಹಾಸ್ಯ ನಟನ ಭೀಭತ್ಸ ರೂಪ ಕಂಡು ಅಭಿಮಾನಿಗಳು ಶಾಕ್: ಈ ರೂಪ ನೀಡುತ್ತಾ ಬ್ರೇಕ್??

Written by Soma Shekar

Published on:

---Join Our Channel---

ತೆಲುಗಿನ ಸಿನಿಮಾ ಪುಷ್ಪ ಈಗಾಗಲೇ ಬಹಳಷ್ಟು ವಿಷಯಗಳಿಂದಾಗಿ ಸದ್ದು ಮಾಡಿದೆ. ಪುಷ್ಪ ಸಿನಿಮಾದ ಮೊದಲ ಭಾಗ ಡಿಸೆಂಬರ್ 17 ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಸಿನಿಮಾದ ಹಾಡುಗಳು, ಪಾತ್ರ ವರ್ಗ, ನಾಯಕ ಅಲ್ಲು ಅರ್ಜುನ್ ಮಾಸ್ ಲುಕ್, ನಾಯಕಿ ರಶ್ಮಿಕಾ ವಿಭಿನ್ನ ಲುಕ್, ರಕ್ತ ಚಂದನ ಕಳ್ಳ ಸಾಗಾಣಿಕೆಯ ಕಥೆ, ಕನ್ನಡ ನಟ ಡಾಲಿ ಧನಂಜಯ್ ಅವರ ಪ್ರಮುಖ ಪಾತ್ರ ಹೀಗೆ ಸಾಕಷ್ಟು ವಿಶೇಷತೆಗಳಿಂದಲೇ ಸಿನಿಮಾ ಜನರನ್ನು ಆಕರ್ಷಿಸಿದೆ. ನಿರ್ದೇಶಕ ಸುಕುಮಾರ್ ಸಿನಿಮಾ ಬಗ್ಗೆ ಸಾಕಷ್ಟು ಶ್ರಮ ವಹಿಸಿ ಪಾತ್ರಗಳ ಆಯ್ಕೆ ಮಾಡಿದ್ದಾರೆ.

ತೆಲುಗು ಸಿನಿಮಾ ರಂಗದಲ್ಲಿ ಹಾಸ್ಯ ಕಲಾವಿದರ ದೊಡ್ಡ ದಂಡೇ ಇದೆ. ಅಂತಹ ಹಾಸ್ಯ ಕಲಾವಿದರಲ್ಲಿ ದೊಡ್ಡ ಹೆಸರನ್ನು ಮಾಡಿದ ನಟ ಸುನೀಲ್. ರಾಜಮೌಳಿ ನಿರ್ದೇಶನದ ಮರ್ಯಾದ ರಾಮನ್ನ ಸಿನಿಮಾ ಮೂಲಕ ಸುನೀಲ್ ನಾಯಕ ನಟ ಕೂಡಾ ಆದರು. ಆದರೆ ಮುಂದೆ ಅವರು ನಾಯಕ ನಟನಾಗಿ ನಟಿಸಿದ ಸಿನಿಮಾಗಳು ಅಷ್ಟೇನೂ ಯಶಸ್ಸು ಕಾಣಲಿಲ್ಲವಾದ ಕಾರಣ ಮತ್ತೆ ಅವರು ಹಾಸ್ಯ ಕಲಾವಿದನ ಪಾತ್ರಗಳಿಗೆ ಹಿಂದಿರುಗಿದ್ದಾರೆ. ಆದರೆ ಈಗ ಪುಷ್ಪ ಸಿನಿಮಾ ಮೂಲಕ ಅಭಿಮಾನಿಗಳಿಗೆ ಸುನೀಲ್ ಶಾಕ್ ನೀಡಿದ್ದಾರೆ.

ಹೌದು ಸುನೀಲ್ ಅವರ ಪಾತ್ರದ ಫಸ್ಟ್ ಲುಕ್ ಅನ್ನು ಪುಷ್ಪ ಚಿತ್ರ ತಂಡ ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಸುನೀಲ್ ಅವರು ಈ ಸಿನಿಮಾದಲ್ಲಿ ಮಂಗಳಂ ಶ್ರೀನು ಎನ್ನುವ ಸಿನಿಮಾದ ಪ್ರಮುಖ ಖಳ ನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುನೀಲ್ ಖಡಕ್ ವಿಲನ್ ರೂಪದಲ್ಲಿರುವ ಪೋಸ್ಟರ್ ನೋಡಿ ಸಿನಿ ಪ್ರೇಕ್ಷಕರು ಸ್ಟನ್ ಆಗಿದ್ದಾರೆ. ಸುನೀಲ್ ಪಾತ್ರದ ಬಗ್ಗೆ ಥ್ರಿಲ್ ಆಗಿದ್ದಾರೆ. ಈ ಸಿನಿಮಾದಲ್ಲಿ ಸುನೀಲ್ ಡಾಲಿ ಧನಂಜಯ್ ಅವರ ಪಾತ್ರ ಜಾಲಿ ರೆಡ್ಡಿಗೆ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತೆಲುಗಿನಲ್ಲಿ ನಾಯಕನಾಗಿ ಮುಂದುವರೆಯುವುದು ಕಷ್ಟ ಎನ್ನುವುದನ್ನು ಅರಿತುಕೊಂಡಿರುವ ಸುನೀಲ್ ಇದೀಗ ಹಾಸ್ಯ ನಟನ ಜೊತೆಗೆ ಖಡಕ್ ವಿಲನ್ ಪಾತ್ರದ ಮೂಲಕ ಜನರನ್ನು ರಂಜಿಸಲು ಸಜ್ಜಾಗಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನೆಗಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿರುವ ಸುನೀಲ್ ಅವರಿಗೆ ಪುಷ್ಪ ಸಿನಿಮಾ ವಿಲನ್ ಆಗಿ ಬ್ರೇಕ್ ನೀಡಲಿದೆಯಾ?? ಕಾದು ನೋಡಬೇಕಿದೆ.

Leave a Comment