ಹಾಸ್ಯ ನಟನ ಆರೋಗ್ಯ ಕಾಳಜಿಗಾಗಿ ಸಲ್ಮಾನ್ ಖಾನ್ ಮಾಡಿದ ಕೆಲಸ ಕಂಡು ಹಾಡಿ ಹೊಗಳಿದ ನೆಟ್ಟಿಗರು

0 2

ಬಾಲಿವುಡ್ ನ ಹಾಸ್ಯನಟ, ಸ್ಟಾಂಡ್ ಅಪ್ ಕಮಿಡಿಯನ್ ಆಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಸುನೀಲ್ ಗ್ರೋವರ್. ಕಿರುತೆರೆಯಲ್ಲಿ ಹಾಸ್ಯ ಶೋ ಮೂಲಕ ದೊಡ್ಡ ಹೆಸರನ್ನು ಮಾಡಿರುವ ಕಪಿಲ್ ಶರ್ಮಾ ಶೋ ನಲ್ಲಿ ಗುತ್ತಿ ಎನ್ನುವ ಪಾತ್ರದ ಮೂಲಕ ಸುನೀಲ್ ಗ್ರೋವರ್ ಜನರನ್ನು ನಕ್ಕು ನಗಿಸುತ್ತಿದ್ದರು‌. ವೈವಿದ್ಯಮಯ ಗೆಟಪ್ ಗಳಲ್ಲಿ ಜನರನ್ನು ನಗಿಸುವ ಸುನೀಲ್ ಗ್ರೋವರ್ ಅವರು ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದು ಗುತ್ತಿಯ ಗೆಟಪ್ ನಲ್ಲಿ, ಜನ ಇಂದಿಗೂ ಗುತ್ತಿ ಹೆಸರು ಕೇಳಿದರೆ ನಗುವಷ್ಟು ಜಾದೂ ಮಾಡಿದ ಹಾಸ್ಯನಟ ಸುನೀಲ್ ಗ್ರೋವರ್.

ಸುನೀಲ್ ಗ್ರೋವರ್ ಅವರು ಇತ್ತೀಚೆಗಷ್ಟೇ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಅವರು ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಇನ್ನೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಈ ನಟನ ಬಗ್ಗೆ ಇದೀಗ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ. ಸುನೀಲ್ ಗ್ರೋವರ್ ಅವರಿಗೆ ಎದೆ ನೋವು ಕಾಣಿಸಿಕೊಂಡು ಅವರಿಗೆ ಮುಂಬೈನ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆಯ ನಂತರ ಹೃದಯ ಸಂಬಂಧಿ ಕಾಯಿಲೆ ಇದೆಯೆಂದು ಶಸ್ತ್ರಚಿಕಿತ್ಸೆ ಅಗತ್ಯವೆಂದು ವೈದ್ಯರು ತಿಳಿಸಿದ್ದರು.

ಅಲ್ಲದೇ ಸುನೀಲ್ ಗ್ರೋವರ್ ಅವರಿಗೆ ಕೊರೊನಾ ಪಾಸಿಟಿವ್ ಸಹಾ ಆಗಿ ಅವರ ಆರೋಗ್ಯ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದ ಕಾರಣ, ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದು ವೈದ್ಯರು ಸಲಹೆ ನೀಡಿದ್ದರು. ವಿಷಯ ತಿಳಿದ ಸಲ್ಮಾನ್ ಖಾನ್ ಅವರ ತಮ್ಮ ಆಪ್ತ ಸ್ನೇಹಿತ ಆಗಿರುವ ಸುನೀಲ್ ಅವರ ಆರೋಗ್ಯದ ಕಾಳಜಿ ವಹಿಸಲು ತಮ್ಮ ವೈದ್ಯರ ತಂಡಕ್ಕೆ ಸೂಚಿಸಿದ್ದಾರೆ. ಶಸ್ತ್ರಚಿಕಿತ್ಸೆ ನಂತರವೂ ಸಹಾ ಸಲ್ಮಾನ್ ಖಾನ್ ಅವರ ಪರ್ಸನಲ್ ವೈದ್ಯರ ತಂಡವು ಸುನೀಲ್ ಅವರ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಕಾಳಜಿ ವಹಿಸಿದೆ.

2019 ರಲ್ಲಿ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿ‌ನಿಮಾದಲ್ಲಿ ಸುನೀಲ್ ಗ್ರೋವರ್ ಅವರು ನಟಿಸಿದ್ದರು. ನಟ ಸಲ್ಮಾನ್ ಖಾನ್ ತಮ್ಮ ಆಪ್ತರ ವಿಚಾರದಲ್ಲಿ ಸದಾ ಕಾಳಜಿಯನ್ನು ಮೆರೆಯುತ್ತಾರೆ.‌ ಅವರಿಗೇನಾದರೂ ಸಮಸ್ಯೆ ಆಗಿದೆ ಎಂದರೆ ಕೂಡಲೇ ನೆರವನ್ನು ನೀಡಲು ಧಾವಿಸುತ್ತಾರೆ. ಕಳೆದ ವರ್ಷ ನಟಿ ರಾಖಿ ಸಾವಂತ್ ಅವರ ತಾಯಿಯ ಶಸ್ತ್ರಚಿಕಿತ್ಸೆ ವೇಳೆ ಸಲ್ಮಾನ್ ಅವರು ಧನ ಸಹಾಯವನ್ನು ನೀಡುವ ಮೂಲಕ ನೆರವಿಗೆ ಧಾವಿಸಿದ್ದಾರೆ.

Leave A Reply

Your email address will not be published.