ಹಾಸ್ಯದ ಹೆಸರಲ್ಲಿ ನ್ಯಾಯಾಲಯಕ್ಕೆ ಅವಮಾನ: ದಿ ಕಪಿಲ್ ಶರ್ಮಾ ವಿರುದ್ಧ FIR
ಹಿಂದಿ ಕಿರುತೆರೆ ಲೋಕದಲ್ಲಿ ಹಾಸ್ಯ ಶೋಗಳು ಬಹಳಷ್ಟು ಪ್ರಸಾರವಾಗುತ್ತದೆ. ಆದರೆ ಇಂತಹ ಶೋಗಳಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡು, ಕಳೆದ ಕೆಲವು ವರ್ಷಗಳಿಂದಲೂ ಜನರನ್ನು ನಗೆಗಡಲಿನಲ್ಲಿ ತೇಲಿಸುತ್ತಾ ಬರುತ್ತಿರುವ ಒಂದು ಶೀ ಎಂದರೆ ಅದು ದಿ ಕಪಿಲ್ ಶರ್ಮ ಶೋ. ಆಗಸ್ಟ್ 21 ರಿಂದ ದಿ ಕಪಿಲ್ ಶರ್ಮ ಶೋ ಹೊಸ ಸೀಸನ್ ಆರಂಭ ಮಾಡಿದೆ. ಕಪಿಲ್ ಶರ್ಮಾ ರಿಯಾಲಿಟಿ ಹಾಸ್ಯ ಶೋ ಮೂಲಕ ಸ್ಪರ್ಧಿಯಾಗಿ ಕಿರುತೆರೆಗೆ ಪ್ರವೇಶ ನೀಡಿ ಅದರಲ್ಲಿ ಗೆದ್ದು ಸುದ್ದಿಯಾದರು. ಕಪಿಲ್ ಶರ್ಮಾ ಕಾಮಿಡಿ ಪಂಚ್ ಗಳು ಜನರಿಗೆ ಇಷ್ಟವಾಗತೊಡಗಿದವು.
ಅನಂತರ ತನ್ನ ಪ್ರತಿಭೆ ಹಾಗೂ ಹಾಸ್ಯ ಕೌಶಲ್ಯದಿಂದ ಒಬ್ಬ ಜನಪ್ರಿಯ ಸ್ಟ್ಯಾಂಡ್ ಅಪ್ ಕಮಿಡಿಯನ್ ಆಗಿ ದೊಡ್ಡ ಹೆಸರನ್ನು ಮಾಡಿದ್ದು ಮಾತ್ರವೇ ಅಲ್ಲದೆ ಬಾಲಿವುಡ್ ಸಿನಿಮಾ ಒಂದರಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು ಕಪಿಲ್ ಶರ್ಮಾ. ಅನಂತರ ಸ್ವಲ್ಪಕಾಲ ಕೆಲವು ಸಮಸ್ಯೆಗಳಿಂದಾಗಿ ಕಿರುತೆರೆಯಿಂದ ಬ್ರೇಕ್ ಪಡೆದಿದ್ದ ಅವರು ಮತ್ತೊಮ್ಮೆ ತಮ್ಮ ಕಪಿಲ್ ಶರ್ಮ ಶೋ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.
ದಿ ಕಪಿಲ್ ಶರ್ಮಾ ಶೋ ಕಿರುತೆರೆಯಲ್ಲಿ ಬಹಳಷ್ಟು ದೊಡ್ಡ ಹೆಸರನ್ನು ಮಾಡಿರುವಂತಹ ಹಾಸ್ಯ ಟಾಕ್ ಶೋ ಆಗಿದೆ. ಬಾಲಿವುಡ್ ಸಿನಿಮಾ ರಂಗದ ಎಲ್ಲಾ ದಿಗ್ಗಜರೂ ಈ ಶೋಗೆ ಈಗಾಗಲೇ ಅತಿಥಿಗಳಾಗಿ ಹಲವು ಸಲ ಆಗಮಿಸಿರುವುದೇ ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅಲ್ಲದೇ ಹೊಸ ಸಿನಿಮಾ ಪ್ರಮೋಷನ್ ಎಂದು ಇಲ್ಲಿಗೆ ಬರೆದೇ ಇರುವ ನಟ-ನಟಿಯರಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟೊಂದು ಜನಪ್ರಿಯವಾದ ಕಪಿಲ್ ಶರ್ಮ ಶೋ ಗೆ ಇದೀಗ ಸಂಕಷ್ಟವೊಂದು ಎದುರಾಗಿದೆ.
ಕಪಿಲ್ ಶರ್ಮಾ ವಿ ರು ದ್ಧ ಎಫ್ಐಆರ್ ದಾಖಲಾಗಿದೆ. ಈ ಶೋ ನಲ್ಲಿ ಒಂದು ಕೋರ್ಟ್ ಸೀನ್ ಚಿತ್ರೀಕರಣವನ್ನು ಮಾಡುವಾಗ ಮದ್ಯ ಸೇವನೆ ಮಾಡಿದ್ದಾರೆ ಎನ್ನುವ ಆ ರೋ ಪದ ಮೇಲೆ ಮಧ್ಯಪ್ರದೇಶದಲ್ಲಿ ದೂರನ್ನು ನೀಡಲಾಗಿದೆ. ಕಪಿಲ್ ಶರ್ಮಾ ವಿ ರು ದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ವಕೀಲರೊಬ್ಬರು ಕಪಿಲ್ ಶರ್ಮಾ ಶೋ ನ್ಯಾಯಾಲಯಕ್ಕೆ ಮಾಡಿರುವ ಅವಮಾನ ಇದು ಎಂದು ದೂರನ್ನು ಸಲ್ಲಿಸಿದ್ದಾರೆ.
ಕೋರ್ಟ್ ಸನ್ನಿವೇಶದಲ್ಲಿ ಮಧ್ಯ ಸೇವನೆ ಮಾಡಿರುವ ದೃಶ್ಯದ ಎಪಿಸೋಡ್ ಜನವರಿ 19, 2020 ರಂದು ಪ್ರಸಾರವಾಗಿತ್ತು. ಇದೇ ಎಪಿಸೋಡ್ ಮತ್ತೊಮ್ಮೆ 24 ಏಪ್ರಿಲ್ 2021 ರಂದು ಮರು ಪ್ರಸಾರವನ್ನು ಕಂಡಿತ್ತು. ಈ ಎಪಿಸೋಡ್ ನಲ್ಲಿ ಶೋ ಕಲಾವಿದರು ಮಧ್ಯ ಸೇವನೆ ಮಾಡಿ ಕೋರ್ಟ್ ರೂಮಿನ ಸೆಟ್ ನಲ್ಲಿ ನಟಿಸಿದ್ದಾರೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.
ಅಲ್ಲದೇ ಈ ಶೋನಲ್ಲಿ ಮಹಿಳೆಯರ ಬಗ್ಗೆ ಅವಹೇಳನ ಮಾಡುವಂತಹ ಹಾಸ್ಯವನ್ನು ಮಾಡಲಾಗುತ್ತದೆ ಮತ್ತು ಮಹಿಳೆಯರ ಭದ್ರತೆಯ ಕುರಿತಾಗಿ ಸಹಾ ವ್ಯಂಗ್ಯ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಸಹ ಹೊರಿಸಲಾಗಿದೆ. ಆದ್ದರಿಂದಲೇ ಇವೆಲ್ಲವಕ್ಕೂ ಕಡಿವಾಣ ಹಾಕುವ ಉದ್ದೇಶದಿಂದ ದಿ ಕಪಿಲ್ ಶರ್ಮಾ ಶೋ ವಿರುದ್ಧ ದೂರು ಸಲ್ಲಿಸಿರುವುದಾಗಿ ವಕೀಲರು ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.