‘ಹಾಸಿಗೆ ಇದ್ದಷ್ಟು ಕಾಸು ಚಾಚು’- ಟಾಸ್ಕ್ ವೇಳೆ ಸೋನು ಮಾತು ಕೇಳಿ ಮನೆಯ ಸದಸ್ಯರ ಪಾಡು ಏನಾಗಿರಬೇಡ??

0 1

ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲನೇ ಸೀಸನ್ ನಲ್ಲಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸ್ಪರ್ಧಿಗಳ ನಡುವೆ ಸಹಾ ಪೈಪೋಟಿ ಜೋರಾಗಿಯೇ ನಡೆದಿದೆ. ಬಿಗ್ ಬಾಸ್ ಒಂದಲ್ಲಾ ಒಂದು ವಿಚಾರದಲ್ಲಿ ಪ್ರತಿದಿನ ಸಖತ್ ಸುದ್ದಿಯಾಗಿ ಪ್ರೇಕ್ಷಕರ ಕುತೂಹಲಕ್ಕೆ ಇನ್ನಷ್ಟು ರೋಚಕತೆಯನ್ನು ಸೇರಿಸುತ್ತಲಿದೆ. ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಈಗ ಬಿಗ್ ಬಾಸ್ ಮನೆಯಲ್ಲೂ ಸಹಾ ಸೌಂಡ್ ಮಾಡುತ್ತಿದ್ದಾರೆ. ಅವರು ಆಡುವ ಮಾತುಗಳು, ಟಾಸ್ಕ್ ಗಳಲ್ಲಿ ನೀಡುವ ಪ್ರದರ್ಶನ ಹಾಗೂ ತಮ್ಮ ಚಟುವಟಿಕೆಗಳ ಕಾರಣದಿಂದ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗುತ್ತಲೇ ಇದ್ದಾರೆ.

ಬಿಗ್ ಬಾಸ್ ಮನೆಯ ಸದಸ್ಯರ ಎರಡನೇ ವಾರದ ಜರ್ನಿಯು ಭರ್ಜರಿಯಾಗಿ ಆರಂಭವಾಗಿದೆ. ಬಿಗ್ ಬಾಸ್ ನೀಡುವ ಟಾಸ್ಕ್ ಗಳಲ್ಲಿ ಸೋನು ಗೌಡ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ತಾನು ಮನೆಯಲ್ಲಿ ಕೇವಲ ಮಾತಿನಾಡಲು ಬಂದಿಲ್ಲ, ಬದಲಿಗೆ ಟಾಸ್ಕ್ ನಲ್ಲಿ ಸಹಾ ನಾನು ಜೋರಿದ್ದೇನೆ ಎಂದು ಅವರು ಸಾಬೀತು ಮಾಡಿದ್ದಾರೆ. ಗಾಯಗೊಂಡ ಕೈನಲ್ಲೇ, ನೋವನ್ನು ಮರೆತು ಕಬಡ್ಡಿ ಆಡಿ ತಮ್ಮ ಟೀಂ ಗೆ ಗೆಲುವನ್ನು ತಂದು ಕೊಟ್ಟು ಮನೆಯ ಸದಸ್ಯರ ಮೆಚ್ಚುಗೆಯನ್ನು ಪಡೆದು, ಸುದ್ದಿಯಾದ ಸೋನು ಈಗ ಇನ್ನೊಂದು ಟಾಸ್ಕ್ ವಿಚಾರದಲ್ಲಿ ನಗೆಪಾಟಲಿಗೆ ಗುರಿಯಾಗಿದ್ದಾರೆ.

ಹೌದು, ಲಿಪ್ ರೀಡಿಂಗ್ ಟಾಸ್ಕ್ ನಲ್ಲಿ ಸೋನು ಗೌಡ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಮಾತನ್ನು ಗುರುತಿಸಿ ಹೇಳಬೇಕಾಗಿತ್ತು. ಈ ಟಾಸ್ಕ್ ನಲ್ಲಿ ಸೋನು ಹಾಗೂ ಸಾನ್ಯ ಭಾಗವಹಿಸಿದ್ದರು. ಈ ವೇಳೆ ಗಾದೆ ಮಾತನ್ನು ಹೇಳುವಾಗ ಸೋನು ಮಾಡಿದ ಎಡವಟ್ಟು ಮನೆಯವರನ್ನೆಲ್ಲಾ ನಗೆಗಡಲಲ್ಲಿ ತೇಲಿಸಿದೆ. ಹೌದು, ಸೋನು ಗೌಡ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಬದಲಿಗೆ ಹಾಸಿಗೆ ಇದ್ದಷ್ಟು ಕಾಸು ಚಾಚು ಎಂದಿದ್ದು, ಈ ಮಾತು ಕೇಳಿ ಮನೆಯ ಸದಸ್ಯರೆಲ್ಲಾ ನಗುವಂತಾಗಿದೆ. ಸೋನು ಗೌಡ ಹೇಳಿದ ಈ ಮಾತು ಈಗ ಸುದ್ದಿಯಾಗಿದೆ.

Leave A Reply

Your email address will not be published.