ಹಾಲಿವುಡ್ ನಲ್ಲಿ ಪ್ರಭಾಸ್, ರಾಮ್ ಚರಣ್ ಕ್ರೇಜ್: ನಟ ಧನುಷ್ ಹಂಚಿಕೊಂಡ ರೋಚಕ ಸುದ್ದಿ

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗ ಹಿಂದಿನ ಹಾಗಿಲ್ಲ. ಪ್ಯಾನ್ ಇಂಡಿಯಾ ಸಿನಿಮಾಗಳ ಹಿನ್ನೆಲೆಯಲ್ಲಿ ದಕ್ಷಿಣ ಸಿನಿಮಾ ರಂಗದ ಸಿನಿಮಾಗಳು ಮಾಡುತ್ತಿರುವ ಸದ್ದು ಅಷ್ಟಿಷ್ಟಲ್ಲ. ಬಾಹುಬಲಿ, ಕೆಜಿಎಫ್, ತ್ರಿಬಲ್ ಆರ್, ಪುಷ್ಪ, ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿದೆ. ಇಂದು ದಕ್ಷಿಣ ಸಿನಿಮಾಗಳ‌ ಮುಂದೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗುತ್ತಿವೆ. ದಕ್ಷಿಣ ಸಿನಿಮಾಗಳು ಬಾಲಿವುಡ್ ಸಿನಿಮಾಗಳು ಸದ್ದು ಮಾಡುವ ಪ್ರದೇಶಗಳಲ್ಲಿ ಕೂಡಾ ದಕ್ಷಿಣ ಸಿನಿಮಾಗಳು ಅಬ್ಬರಿಸಿವೆ. ಇಂತಹ ಬೆಳವಣಿಗೆಯಿಂದಾಗಿ ಭಾರತೀಯ ಸಿನಿಮಾ ರಂಗ ಮಾತ್ರವೇ ಅಲ್ಲದೇ ಹಾಲಿವುಡ್ ಕೂಡಾ ದಕ್ಷಿಣ ಸಿನಿಮಾ ರಂಗದ ಕಡೆಗೆ ನೋಡುತ್ತಿವೆ.

ಬಾಹುಬಲಿ ನಂತರ ನಟ ಪ್ರಭಾಸ್, ತ್ರಿಬಲ್ ಆರ್ ನಂತರ ನಟ ರಾಮ್ ಚರಣ್ ತೇಜಾ ವರ್ಚಸ್ಸು ಹೆಚ್ಚಿದೆ. ಬಾಹುಬಲಿ ನಂತರವಂತೂ ನಟ‌ ಪ್ರಭಾಸ್ ಅವರು ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬೇರೆ ಎಲ್ಲಾ ನಟರಿಗಿಂತ ಬ್ಯುಸಿಯಾಗಿದ್ದಾರೆ. ಬಾಹುಬಲಿ ನಂತರ ಪ್ರಭಾಸ್ ನಟನೆಯ ಸಿನಿಮಾಗಳು ಯಶಸ್ಸು ಪಡೆಯದೇ ಇದ್ದರೂ ಸಹಾ ಅವರ ಬೇಡಿಕೆ ಮಾತ್ರ‌ ಕುಗ್ಗಿಲ್ಲ. ಇದೇ ವೇಳೆ ತ್ರಿಬಲ್ ಆರ್ ನಂತರ ಸಿನಿಮಾ ಇಂಡಸ್ಟ್ರಿ ಗಮನ ನಟ ರಾಮ್ ಚರಣ್ ತೇಜಾ ಕಡೆ ಹೊರಳಿದೆ.

ಈಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ತಮಿಳು ನಟ ಧನುಷ್ ಅವರು ಒಂದು ಹೊಸ ಹೇಳಿಕೆಯನ್ನು ನೀಡಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ಹೌದು, ನಟ ಧನುಷ್ ತಮ್ಮ ಮೊದಲ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಬಹುಕೋಟಿ ಮೌಲ್ಯದಲ್ಲಿ ನಿರ್ಮಾಣ ಆಗಿರುವ ದಿ ಗ್ರೇ ಮ್ಯಾನ್ ಇದೇ‌ ಜುಲೈ 22 ಕ್ಕೆ ತೆರೆ ಕಾಣಲಿದ್ದು, ಅಭಿಮಾನಿಗಳು ತಮ್ಮ ಅಭಿಮಾನ ನಟನ ಮೊದಲ ಹಾಲಿವುಡ್ ಸಿನಿಮಾ‌ ನೋಡುವುದಕ್ಕಾಗಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ.

ಇಂತಹ ನಿರೀಕ್ಷೆ ಗಳ ನಡುವೆಯೇ ನಟ ಧನುಷ್ ಅವರು ಹೇಳಿರುವ ಒಂದು ಮಾತು ಈಗ ದೊಡ್ಡ ಸಂಚಲನ‌ ಸೃಷ್ಟಿಸಿದೆ. ಹೌದು, ನಟ ಧನುಷ್ ಅವರ ಪ್ರಕಾರ ಹಾಲಿವುಡ್ ನ ಸಿನಿಮಾ ನಿರ್ಮಾಪಕರು ನಟ ಪ್ರಭಾಸ್ ಹಾಗೂ ನಟ ರಾಮ್ ಚರಣ್ ತೇಜಾ ಜೊತೆ ಸಿನಿಮಾಗಳನ್ನು ನಿರ್ಮಾಣ ಮಾಡುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲೇ ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಿದ್ಧತೆಗಳು ಸಹಾ ಜೋರಾಗಿ ನಡೆದಿವೆ ಎನ್ನಲಾಗಿದೆ. ಧನುಷ್ ಅವರ ಈ ಮಾತು ಪ್ರಭಾಸ್ ಮತ್ತು ರಾಮ್ ಚರಣ್ ಅಭಿಮಾನಿಗಳಿಗೆ ಖುಷಿ ನೀಡಿದೆ.

Leave a Comment