ಹಾಡು ಹಾಡಲಿಲ್ಲ ಅಂತ ಕಾಫಿ ನಾಡಲ್ಲೇ ಚಂದುಗೆ ಧಮ್ಕಿ: ಚಂದು ಜನಪ್ರಿಯತೆ ಅವರಿಗೆ ಮುಳುವಾಗ್ತಾ ಇದೆಯಾ?

0 4

ಕಾಫಿ ನಾಡು ಚಂದು ಸದ್ಯಕ್ಕೆ ನಮ್ಮ ಕರ್ನಾಟಕದಲ್ಲಿ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನ್ಮದಿನಕ್ಕೆ ತನ್ನದೇ ಆದ ವಿಶೇಷ ಶೈಲಿಯಲ್ಲಿ ಹಾಡುಗಳನ್ನು ಹಾಡುವ ಚಂದು ಅವರ ಹಾಡುಗಳ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡಿದೆ. ಚಂದು ಅವರು ಹಲವು ಸೆಲೆಬ್ರಿಟಿಗಳ ಜನ್ಮದಿನಕ್ಕೆ ಸಹಾ ತಮ್ಮದೇ ಶೈಲಿಯಲ್ಲಿ ವಿಶ್ ಮಾಡಿರುವುದು ವಿಶೇಷವಾಗಿದೆ.‌‌ ಸಾಮಾಜಿಕ ಜಾಲತಾಣಗಳಲ್ಲಿ ಆದರೆ ಕಾಫಿ ನಾಡು ಚಂದು ಅವರನ್ನು ಹಿಂಬಾಲಿಸುವವರ ಸಂಖ್ಯೆ ಸಹಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೆಲೆಬ್ರಿಟಿಗಳನ್ನು ಸಹಾ ಮೀರಿದ ಸಂಖ್ಯೆಯಲ್ಲಿ ಅವರು ಫಾಲೋಯರ್ಸ್ ಗಳನ್ನು ಪಡೆದುಕೊಂಡಿರುವುದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸುತ್ತಿದೆ.

ಇನ್ನು ಇತ್ತೀಚಿಗಷ್ಟೇ ಕಾಫಿ ನಾಡು ಚಂದು ಅವರ ಆಸೆಯನ್ನು ಪೂರೈಸಿದ ಜೀ ಕನ್ನಡ ವಾಹಿನಿಯು ಚಂದು ಅವರನ್ನು ಡ್ಯಾನ್ಸ್ ರಿಯಾಲಿಟಿ ಶೋ ನ ವೇದಿಕೆಗೆ ಕರೆಸಿ, ಸ್ಟಾರ್ ನಟ, ಚಂದು ಅವರ ಅಭಿಮಾನ ನಟ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಆದರೆ ಕಾಫಿ ನಾಡು ಚಂದು ಬಿಗ್ ಬಾಸ್ ಓಟಿಟಿ ಆರಂಭವಾದಾಗ ತನಗೂ ಸಹಾ ಬಿಗ್ ಬಾಸ್ ಮನೆಯೊಳಗೆ ಹೋಗುವ ಇಚ್ಚೆಯಿದೆ ಎನ್ನುವ ಮಾತನ್ನು ಹೇಳಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಚಂದು ಅವರಿಗೆ ಬೆಂಬಲ ವ್ಯಕ್ತವಾಗಿತ್ತು. ಆದರೆ ಅವರ ಈ ಆಸೆ ಮಾತ್ರ ನೇರವೇರಲೇ ಇಲ್ಲ. ನೆಟ್ಟಿಗರು ಬಹುಶಃ ಚಂದು ವೈಲ್ಡ್ ಕಾರ್ಡ್ ಎಂಟ್ರಿ ನೀಡಬಹುದು ಎಂದುಕೊಂಡರು.

ಈಗ ಇವೆಲ್ಲವುಗಳ ನಡುವೆ ಒಂದು ಹೊಸ ಸುದ್ದಿ ಹರಡಿದೆ. ಚಂದು ಅವರು ಆಟೋ ಓಡಿಸುವ ವೃತ್ತಿಯನ್ನು ಮಾಡುತ್ತಾರೆ. ಅದರ ನಡುವೆ ಅವರು ಬರ್ತಡೇ ವಿಶ್ ಹಾಡುಗಳನ್ನು ಹಾಡುತ್ತಾರೆ. ಚಂದು ಕಾಣಿಸಿದ ಕಡೆ ಜನರು ಸೆಲ್ಫಿ ಗಾಗಿ ಮುಗಿ ಬೀಳುತ್ತಿದ್ದಾರೆ. ಚಂದು ಅವರಿಗೆ ಆಟೋ ಸಹಾ ಓಡಿಸಲು ಬಿಡದೇ ಅವರಿಗೆ ಹಾಡುಗಳನ್ನು ಹೇಳುವಂತೆ ಬೇಡಿಕೆ ಇಡುತ್ತಿದ್ದಾರೆ. ಇತ್ತೀಚಿಗೆ ಕಾಫಿ ನಾಡಲ್ಲೇ ಚಂದು ಅವರಿಗೆ ಧಮಕಿ ಹಾಕಿದ್ದಾರೆ ಕೆಲವರು ಎನ್ನಲಾಗಿದೆ. ಹೌದು, ಕಾಫಿ ನಾಡು ಚಂದು ಅವರ ಬಳಿ ಬಂದ ಕೆಲವರು ಹಾಡಲು ಕೇಳಿದ್ದಾರೆ. ಆದರೆ ಚಂದು ಅವರು ಅದಕ್ಕೆ ಒಪ್ಪಿಕೊಂಡಿಲ್ಲ.

https://www.instagram.com/reel/ChmHkTYlbmM/?igshid=YmMyMTA2M2Y=

ತಾನು ಆಟೋದಲ್ಲಿ ಬಾಡಿಗೆ ಬಂದಿದ್ದು, ಈಗ ಹಾಡೋದಿಕ್ಕೆ ಆಗಲ್ಲ ಎಂದಿದ್ದಾರೆ. ಇದರಿಂದ ಆ ವ್ಯಕ್ತಿಗಳು ಕೋಪಗೊಂಡಿದ್ದಾರೆ. ಚಂದು ಪೋಲಿಸರನ್ನು ಕರೆಸುವುದಾಗಿ ಹೇಳಿದ್ದಾರೆ. ಈಗ ಹಾಡ್ತಿಯೋ ಇಲ್ವೋ ಎಂದಾಗ ಚಂದು , ಈಗ ಆಗಲ್ಲ, ನಾಲ್ಕು ಗಂಟೆ ಮೇಲೆ ಎಂದಾಗ ಕೋಪಗೊಂಡ ವ್ಯಕ್ತಿಗಳು, ಏನು ನಿನ್ನ ಹತ್ರ ಅಪಾಯೆಟ್ಮೆಂಟ್ ತಗೊಂಡು ಬರ್ಬೇಕಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅನಂತರ ನಮ್ಮಿಂದ ನೀನು ಎಂದು ಬೈದಿರುವ ಘಟನೆಯು ನಡೆದಿದ್ದು, ಈ ವೀಡಿಯೋ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Leave A Reply

Your email address will not be published.