ಹಾಟ್ನೆಸ್ ನಲ್ಲಿ ಅಕ್ಕನಿಗೇ ಸ್ಪರ್ಧೆ ನೀಡುವತ್ತ ತಂಗಿ: ಉರ್ಫಿ ಜಾವೇದ್ ಸಹೋದರಿಯ ಬೋಲ್ಡ್ ಫೋಟೋಗೆ ಪಡ್ಡೆಗಳು ಫಿದಾ

0 2

ಬಿಗ್ ಬಾಸ್ ಓಟಿಟಿ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡ ಉರ್ಫಿ ಜಾವೇದ್ ಸದ್ಯಕ್ಕಂತೂ ಸೋಷಿಯಲ್ ಮೀಡಿಯಾಗಳ ಸಂಚಲನ ಆಗಿದ್ದಾರೆ ಎಂದರೆ ಅದು ಸುಳ್ಳಲ್ಲ. ಉರ್ಫಿ ತಾನು ಯಾವುದೇ ಸಿನಿಮಾ, ಸೀರಿಯಲ್, ವೆಬ್ ಸಿರೀಸ್ ಅಥವಾ ಇನ್ನಾವುದೇ ಜಾಹಿರಾತುಗಳಿಂದ ಸದ್ದು ಸುದ್ದಿಯಾಗಿಲ್ಲ. ಬದಲಾಗಿ ತಾನು ಧರಿಸುವ ಹೊಸ ರೀತಿಯ, ವಿಭಿನ್ನವಾದ ಹಾಗೂ ಬೋಲ್ಡ್ ಡ್ರೆಸ್ ಗಳಿಂದಾಗಿಯೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಉರ್ಫಿ ಹೊಸ ಡ್ರೆಸ್ ತೊಟ್ಟು ಬಂದರೆ ಮುಗಿಯಿತು, ಅವು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಬೇಗ ವೈರಲ್ ಆಗುವುದು ಮಾತ್ರವೇ ಅಲ್ಲದೇ ಟ್ರೋಲಿಗರಿಗೆ ಭರ್ಜರಿ ಕಂಟೆಂಟ್ ಕೂಡಾ‌ ಆಗುವುದು.

https://www.instagram.com/p/CSSNeUrpwuR/?utm_medium=copy_link

ಉರ್ಫಿ ಜಾವೇದ್ ಸಹೋದರಿ ಡಾಲಿ ಜಾವೇದ್ ತಾನು ತನ್ನ ಅಕ್ಕನಿಗಿಂತಲೂ ಕಡಿಮೆ ಏನಿಲ್ಲವೆನ್ನುವಂತೆ ಬಹಳ ಸ್ಟೈಲಿಶ್ ಫೋಟೋಗಳನ್ನು ಹಾಗೂ ವೀಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪಡ್ಡೆಗಳ ಹೃದಯಕ್ಕೆ ಲಗ್ಗೆ ಇಡುತ್ತಿದ್ದಾರೆ. ಅಂದದ ವಿಚಾರಕ್ಕೆ ಬಂದರೆ ಡಾಲಿ ಜಾವೇದ್ ಯಾವುದೇ ಸಿನಿಮಾ ನಟಿಗಿಂತ ಕಡಿಮೆ ಏನಿಲ್ಲ. ಡಾಲಿ ತನ್ನ ಫೋಟೋಗಳನ್ನು ವಿಡಿಯೋಗಳನ್ನು ಇಷ್ಟಪಡುವ ದೊಡ್ಡ ಅಭಿಮಾನಿಗಳ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಡಾಲಿ ಇತ್ತೀಚೆಗೆ ಸಿಮ್ಮಿಂಗ್ ಪೂಲ್ ನಲ್ಲಿ ನಡೆಸಿದ ಮೋಜಿನ ಆಟದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಇದಕ್ಕೆ ಭರ್ಜರಿ ಮೆಚ್ಚುಗೆಗಳು ಹರಿದು ಬರುತ್ತಿದ್ದು, ಸಾಕಷ್ಟು ಜನರು ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನೀಲಿ ಬಣ್ಣದ ಬಿ ಕಿ ನಿ ಹಾಗೂ ಶಾರ್ಟ್ಸ್ ಧರಿಸಿರುವ ಡಾಲಿ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಡಾಲಿಯ ಅಂದವಾದ ಪೋಸ್ ಗಳನ್ನು ನೋಡಿ ಆಕೆಯ ಹಿಂಬಾಲಕರು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆಗಳನ್ನು ಸೂಚಿಸುತ್ತಿದ್ದಾರೆ.

https://www.instagram.com/p/Cbu4yNtpwe4/?utm_medium=copy_link

ಡಾಲಿ ಜಾವೇದ್ ಇನ್ಸ್ಟಾಗ್ರಾಂ ನಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಅಲ್ಲಿ ತಮ್ಮ ಅಂದವಾದ ಫೋಟೋಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಇತ್ತೀಚಿಗಷ್ಟೇ ಡಾಲಿ ತಮ್ಮ ಸಹೋದರಿ ಉರ್ಫಿ ಜೊತೆಗೆ ಕಾಣಿಸಿಕೊಂಡಿದ್ದರು. ಇನ್ನು ಯಾವುದೇ ಸಿನಿಮಾ ಅಥವಾ ಸೀರಿಯಲ್ ನಟಿಯಾಗಿರದ ಉರ್ಫಿಗೆ ಸಹಾ ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಕರ ಸಂಖ್ಯೆ ಅಧಿಕವಾಗುತ್ತಿದೆ. ಈಗಾಗಲೇ 55 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಡಾಲಿ ಹೊಂದಿದ್ದು, ಈ ಸಂಖ್ಯೆ ಏರುತ್ತಾ ಸಾಗಿದೆ.

Leave A Reply

Your email address will not be published.