ಹಾಗಂದ್ರೆ ಏನಂತ ಗೊತ್ತಿಲ್ಲದ್ದಿದ್ರೂ ಕಾಲೇಜು ದಿನಗಳಲ್ಲೇ ಅಪ್ಪನ ಬಳಿ ಆ ವಿಚಾರ ಕೇಳಿದ್ದೆ: ನಟ ಅರ್ಜುನ್ ರಮೇಶ್ ಹೇಳಿದ ಸತ್ಯ

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ ಒಟಿಟಿ ದಿನದಿಂದ ದಿನಕ್ಕೆ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕುತ್ತಿದೆ. ಮನೆಯನ್ನು 16 ಮಂದಿ ಸ್ಪರ್ಧಿಗಳು ಪ್ರವೇಶ ಮಾಡಿದ್ದರೂ ಸಹಾ ಕೆಲವು ಸ್ಪರ್ಧಿಗಳು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅವರ ಮಾತು ಹಾಗೂ ಚಟುವಟಿಕೆಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗೆ ಒಳಪಡುತ್ತಿವೆ.. ಅಲ್ಲದೇ ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಹಂಚಿಕೊಂಡಿರುವ ಹಲವು ವಿಚಾರಗಳು ಸಹಾ ಹೊರಗೆ ಪ್ರೇಕ್ಷಕರು ಮತ್ತು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ಅನೇಕರು ತಮ್ಮ ಖಾಸಗಿ ಜೀವನದ ಖಾಸಗೀ ವಿಚಾರಗಳನ್ನು ಸಹಾ ಬಹಿರಂಗ ಪಡಿಸುತ್ತಿರುವುದು ನಿಜವಾಗಿದೆ.

ಈ ಬಾರಿ ಮನೆಯನ್ನು ಪ್ರವೇಶಿಸಿರುವ ಬಿಗ್ ಬಾಸ್ ಸ್ಪರ್ಧೆಗಳಲ್ಲಿ ಕನ್ನಡ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಕೂಡ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ಮತ್ತು ರಾಜಕಾರಣಿಯೂ ಆಗಿರುವ ಅರ್ಜುನ ರಮೇಶ್ ಅವರು ಸಹಾ ಒಬ್ಬರಾಗಿದ್ದಾರೆ. ಅರ್ಜುನ್ ರಮೇಶ್ ಅವರು ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಈಗಾಗಲೇ ಸಾಕಷ್ಟು ವಿಷಯಗಳನ್ನು ಮಾತನಾಡಿದ್ದಾರೆ. ಎರಡು ಮದುವೆ ಆಗಿರುವ ವಿಚಾರವನ್ನು ಬಹಿರಂಗಪಡಿಸಿರುವ ಅವರು ಎರಡನೇ ಪತ್ನಿಯ ಪರವಾಗಿ ಮೊದಲನೇ ಪತ್ನಿಯ ಬಳಿ ಬಿಗ್ ಬಾಸ್ ಮನೆಯಿಂದಲೇ ಕ್ಷಮಾಪಣೆಯನ್ನು ಸಹ ಕೇಳಿದ್ದಾರೆ. ತಾನು ಸಾಕಷ್ಟು ಜನರ ಜೊತೆ ಫ್ಲರ್ಟ್ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಹೀಗೆ ಅರ್ಜುನ್ ರಮೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡ ವಿಚಾರಗಳ ಕುರಿತಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಚರ್ಚೆಯಾಗುತ್ತಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ನಟ ಅರ್ಜುನ್ ರಮೇಶ್ ಅವರು ತಾವು ಕಾಲೇಜು ಹೋಗುವ ದಿನಗಳಲ್ಲಿ ತಮ್ಮ ತಂದೆಯ ಬಳಿ ಆಸ್ತಿಯಲ್ಲಿ ಪಾಲನ್ನು ಕೇಳುತ್ತಿದ್ದೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ. ನಟ ಮತ್ತು ರಾಜಕಾರಣಿಯೂ ಆಗಿರುವ ಅರ್ಜುನ್ ರಮೇಶ್ ಅವರು ಆ ದಿನಗಳಲ್ಲಿ ತಾನೇಕೆ ಓದಿನ ಕಡೆಗೆ ಆಸಕ್ತಿ ತೋರಿಸಲಿಲ್ಲ ಎನ್ನುವ ವಿಚಾರವನ್ನು ಮಾತನಾಡಿದ್ದಾರೆ.

ಅವರು ಮಾತಾನಾಡುತ್ತಾ, ನಾನು ಓದುವುದರಲ್ಲಿ ತುಂಬಾ ಮುಂದೇನೆ ಇದ್ದೆ. ಆದರೂ ಯಾಕೆ ಓದಿಲ್ಲ ಅನ್ನೋದು ಗೊತ್ತಾಗುತ್ತಿಲ್ಲ. ನಿಜ ಹೇಳಬೇಕೆಂದರೆ ಓದುವ ಸಮಯದಲ್ಲಿ ಶೋಕಿ ಮಾಡುತ್ತಾ ನಾನು ಹಾಳಾದೆ. ಅಮ್ಮನ ಹತ್ತಿರ ಸದಾ ದುಡ್ಡನ್ನು ತೆಗೆದುಕೊಳ್ಳುತ್ತಿದೆ. ದುಡ್ಡು ಇಲ್ಲ ಎಂದಾಗ ಅಪ್ಪನ ಬಳಿ ಹೋಗಿ ಆಸ್ತಿಯಲ್ಲಿ ಪಾಲನ್ನು ಕೇಳುತ್ತಿದ್ದೆ. ನಿಜಕ್ಕೂ ಹಾಗಂದ್ರೆ ಏನು ಅಂತ ಗೊತ್ತಿರಲಿಲ್ಲ ಆದರೂ ಸಹ ಆಸ್ತಿಯಲ್ಲಿ ಪಾಲನ್ನು ಕೇಳುತ್ತಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡು ವಿದ್ಯಾಭ್ಯಾಸವನ್ನು ಕಡೆಗಣಿಸಿದ ಬಗ್ಗೆ ಮಾತನಾಡಿದ್ದಾರೆ.‌

Leave a Comment