ಹಸುಗಳಿಂದ ಹೆಚ್ಚು ಹಾಲು ಪಡೆಯಲು ರೈತನ ಅತ್ಯದ್ಭುತ ತಂತ್ರ: ಅಚ್ಚರಿ ಎನಿಸಿದರೂ ನಿಜ ಇದು!!

Written by Soma Shekar

Published on:

---Join Our Channel---

ಪಶುಸಂಗೋಪನೆ ಎನ್ನುವುದು ಒಂದು ಪ್ರಮುಖವಾದ ವೃತ್ತಿಯಾಗಿದೆ. ಈ ವೃತ್ತಿಯಲ್ಲಿ ಜನರು ಹೆಚ್ಚಾಗಿ ಹಸುಗಳನ್ನು ಸಾಕುವುದಕ್ಕೆ ಆದ್ಯತೆಯನ್ನು ನೀಡುತ್ತಾರೆ. ಹಸುಗಳ ಹಾಲಿನಿಂದ ಉತ್ತಮ ಹಣವನ್ನು ಗಳಿಸುವ ಸಲುವಾಗಿ ಅವುಗಳಿಗೆ ಅಗತ್ಯವಿರುವ ಅತ್ಯುತ್ತಮವಾದ ಆಹಾರವನ್ನು ಪೂರೈಕೆ ಮಾಡುತ್ತಾರೆ. ಒಳ್ಳೆಯ ಹಾರೈಕೆ ಹಾಗೂ ಉತ್ತಮ ಆಹಾರದಿಂದ ಹಸುಗಳು ಉತ್ತಮ ಪ್ರಮಾಣದಲ್ಲಿ ಹಾಲನ್ನು ನೀಡುತ್ತವೆ. ಆದರೆ ನಾವಿಂದು ಹೇಳಲು ಹೊರಟಿರುವ ವಿಚಾರ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆ.

ಇಲ್ಲೊಂದು ಕಡೆ ಹಸುಗಳಿಂದ ಉತ್ತಮ ಪ್ರಮಾಣದ ಹಾಲನ್ನು ಪಡೆಯುವುದಕ್ಕಾಗಿ ಹಸುಗಳಿಗೆ ಒಂದು ವಿಶೇಷವಾದ ಕನ್ನಡಕವನ್ನು ತೋರಿಸಲಾಗುತ್ತದೆ. ಹೌದು, ನಂಬುವುದಕ್ಕೆ ಸ್ವಲ್ಪ ಕಷ್ಟ ಎನಿಸಿದರೂ ಕೂಡಾ ಇಂತಹದೊಂದು ಪ್ರಯತ್ನವನ್ನು ಟರ್ಕಿ ದೇಶದಲ್ಲಿ ಮಾಡಲಾಗುತ್ತಿದೆ. ಇಲ್ಲಿ ರೈತರು ಹಸುಗಳಿಂದ ಹೆಚ್ಚಿನ ಹಾಲನ್ನು ಪಡೆಯುವುದಕ್ಕಾಗಿ ಇಂತಹುದೊಂದು ಹೊಸದಾದ ತಂತ್ರವನ್ನು ಬಳಸುತ್ತಿದ್ದಾರೆ. ಹಾಗಾದರೆ ಏನು ಈ ತಂತ್ರ??

ಈ ವಿಶೇಷ ಕನ್ನಡಕವನ್ನು ಹಾಕಿದರೆ ಹಸುಗಳು ಹೆಚ್ಚಿಗೆ ಹಾಲನ್ನು ನೀಡುವುದರ ಹಿಂದಿನ ಸತ್ಯವೇನು?? ಎನ್ನುವುದನ್ನು ತಿಳಿಯೋಣ. ಟರ್ಕಿಯ ಅಕ್ಸಾರೆ ಎನ್ನುವ ನಗರದಲ್ಲಿರುವ ರೈತ ಇಜ್ಜತ್ ಕೋಕಾಕ್ ತಮ್ಮ ಹಸುಗಳ ಕಣ್ಣಿಗೆ ವರ್ಚುವಲ್ ರಿಯಾಲಟಿ ಕನ್ನಡಕಗಳನ್ನು ಹಾಕಿದ್ದಾರೆ. ಈ ಕನ್ನಡಕಗಳನ್ನು ಹಾಕಿದಾಗ ಹಸುವಿನ ಕಣ್ಣಿನ ಎದುರಲ್ಲಿ ವಿಶಾಲವಾದ ಹಸಿರು ಹುಲ್ಲು ಇರುವ ಹುಲ್ಲುಗಾವಲು ಕಾಣುತ್ತದೆ. ವಾಸ್ತವದಲ್ಲಿ ಹಸುಗಳು ಆತನ ಮನೆಯ ಮುಂದಿನ ಕೊಟ್ಟಿಗೆಯಲ್ಲೇ ಇರುತ್ತವೆ.

ಈ ಪ್ರಯತ್ನದಿಂದ ಆತನ ಹಸುಗಳು ಹಾಲು ನೀಡುವ ಪ್ರಮಾಣ‌ ಹೆಚ್ಚಾಯಿತು ಎನ್ನಲಾಗಿದೆ. ಇಜ್ಜತ್ ನ ಈ ತಂತ್ರವನ್ನು ಗಮನಿಸಿದ ಅನ್ಯ ರೈತರು ಸಹಾ ಈಗ ಈ ತಂತ್ರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ವೈಜ್ಞಾನಿಕ ಅಧ್ಯಯನವೊಂದರ ಪ್ರಕಾರ ಈ ತಂತ್ರ ಬಳಸಿದಾಗ ಹಸುಗಳು ಕೊಡುವ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ ಎನ್ನಲಾಗಿದೆ. ಇಲ್ಲಿನ ರೈತರು ಸಹಾ ತಮ್ಮ‌ ಹಸುಗಳಿಗೆ ಈ ವಿ ಆರ್ ಕನ್ನಡಕಗಳನ್ನು ಹಾಕಿದ ಮೇಲೆ 22 ಲೀಟರ್ ಹಾಲು ಕೊಡುತ್ತಿದ್ದ ಹಸುಗಳು ಈಗ 27 ಲೀಟರ್ ಹಾಲನ್ನು ಕೊಡಲು ಆರಂಭಿಸಿದೆ ಎಂದಿದ್ದಾರೆ.

ವಿಆರ್ ಕನ್ನಡಕದಿಂದ ಕಾಣುವ ಹಸಿರು ಹುಲ್ಲಿನ ಮೈದಾನದ ಚಿತ್ರಣವು ಹಸುವಿನ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಈಗ ಬೇರೆ ರೈತರು ಸಹಾ ತಮ್ಮ ಹಸು, ಎಮ್ಮೆಗಳ ಮೇಲೆ ಈ ಪ್ರಯೋಗವನ್ನು ಮಾಡಿದ್ದು, ಅವರಿಗೂ ಸಹಾ ಇದರಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹಾ ವೈರಲ್ ಆಗಿ ಗಮನ ಸೆಳೆದಿವೆ.

Leave a Comment