ಹರ್ಷ ಭುವಿ ಮದುವೆ ಮಾಡ್ಸಕ್ಕೆ ರಾಮಾಚಾರಿ ಎಂಟ್ರಿ: ಇದು ಕನ್ನಡತಿ ಅಲ್ಲ ಅಧೋಗತಿ ಅಂತಿದಾರೆ ಪ್ರೇಕ್ಷಕರು

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ಕನ್ನಡತಿ ಧಾರಾವಾಹಿ ಎಂದರೆ ಅದಕ್ಕೆ ವಿಶೇಷವಾದ ಆದರವಿದೆ‌, ಈ ಸೀರಿಯಲ್ ಅನ್ನು ಬಹಳ ಇಷ್ಟಪಟ್ಟು ನೋಡುವ ದೊಡ್ಡ ಅಭಿಮಾನಿಗಳ ಬಳಗವಿದೆ‌. ಬೇರೆ ಸೀರಿಯಲ್ ಗಳ ಹಾಗೆ ಟಿ ಆರ್ ಪಿ ಕಂಟೆಂಟ್ ಅಲ್ಲದೇ ಒಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದ ಈ ಸೀರಿಯಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಹಾ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಆಗಾಗ ವ್ಯಕ್ತವಾಗುತ್ತಲೇ ಇತ್ತು. ಆದರೆ ಇತ್ತೀಚಿಗೆ ಅದೇಕೋ ಸೀರಿಯಲ್ ನೋಡುತ್ತಿರುವ ಪ್ರೇಕ್ಷಕರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಸೀರಿಯಲ್ ನ ಹೊಸ ಟ್ವಿಸ್ಟ್ ಅವರಿಗೆ ಬೇಸರ ಉಂಟು ಮಾಡಿದೆ.

ಹೌದು ಪ್ರೇಕ್ಷಕರು ನಾಯಕ ಹರ್ಷ ಹಾಗೂ ನಾಯಕಿ ಭುವಿಯ ಮದುವೆಯನ್ನು ನೋಡಲು ಬಹಳ ಕಾತರತೆಯಿಂದ ನಿರೀಕ್ಷೆ ಮಾಡುತ್ತಿದ್ದರು. ಮದುವೆಯ ಎಪಿಸೋಡ್ ಗಳು ಸಹಾ ಆರಂಭವಾದವು. ಆದರೆ ಅವರ ಮದುವೆಗೆ ನೂರೊಂದು ವಿಘ್ನಗಳು ಎನ್ನುವಂತೆ ಮದುವೆಯ ಎಪಿಸೋಡ್ ಗಳು ಮುಂದುವರೆಯುತ್ತಲೇ ಇದ್ದು, ಪ್ರೇಕ್ಷಕರು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಸಿಟ್ಟು, ಅಸಮಾಧಾನವನ್ನು ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಮೊನ್ನೆಯಷ್ಟೇ ಮದುವೆ ನಿಲ್ಲಿಸಲು ವರೂಧಿನಿ ತನ್ನ ಕೈ ಗಾಯ ಮಾಡಿಕೊಂಡು ಆಸ್ಪತ್ರೆಯನ್ನು ಸೇರಿದ್ದಾಳೆ. ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ಭುವಿ ಮುಂದಾಗಿದ್ದು ಪ್ರೇಕ್ಷಕರಿಗೆ ಬೇಸರ ಮೂಡಿಸಿತ್ತು. ವರೂಧಿನಿ ತಾನು ಹರ್ಷನನ್ನೇ ಮದುವೆಯಾಗಬೇಕೆಂಬ ಹಠವನ್ನು ಹಿಡಿದಿದ್ದಾಳೆ. ಇನ್ನೊಂದು ಕಡೆ ಹರ್ಷ ಮತ್ತು ಭುವಿ ಮದುವೆಯನ್ನು ಆಸ್ಪತ್ರೆಯಲ್ಲಿ ಮಾಡಲು ಹೊರಟಿರುವುದು ನೋಡಿ ಪ್ರೇಕ್ಷಕರು ಇದೇನಿದು ನಿರ್ದೇಶಕ ಆಲೋಚನೆಗೆ ಏನಾಗಿದೆ ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಈಗ ಹೊಸ ಟ್ವಿಸ್ಟ್ ಎನ್ನುವಂತೆ ಇನ್ನೊಂದು ಜನಪ್ರಿಯ ಸೀರಿಯಲ್ ರಾಮಾಚಾರಿಯ ನಾಯಕ ರಾಮಾಚಾರಿ ಇದೀಗ ಕನ್ನಡತಿಗೆ ಎಂಟ್ರಿ ನೀಡಿದ್ದಾರೆ‌.‌ ಮದುವೆ ಮಾಡಿಸಲು ಪೌರೋಹಿತ್ಯ ವಹಿಸಲು ರಾಮಾಚಾರಿಯ ಆಗಮನವಾಗಿದೆ. ಈ ಪ್ರೋಮೋ ನೋಡಿದ ನೆಟ್ಟಿಗರು ರಾಮಾಚಾರಿಯ ಆಗಮನದ ಅವಶ್ಯಕತೆಯೇ ಇರಲಿಲ್ಲ. ಇನ್ನೆಷ್ಟು ದಿನ ಸೀರಿಯಲ್ ನ ಹೀಗೆ ಎಳಿತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಇನ್ನೂ ಕೆಲವರು ಇದು ಕನ್ನಡತಿ ಅಲ್ಲ ಅಧೋಗತಿ ಎಂದಿದ್ದಾರೆ.

ಒಬ್ಬರು ತಮ್ಮ ಕಾಮೆಂಟ್ ನಲ್ಲಿ ಕನ್ನಡತಿ ಸೀರಿಯಲ್ ಅನ್ನು ಮನೆಯಲ್ಲಿ ಹಿರಿಯರು ಬಹಳ ಇಷ್ಟಪಟ್ಟು ನೋಡುತ್ತಿದ್ದರು, ಆದರೆ ಇತ್ತೀಚಿನ ಕಥೆಯನ್ನು ಅವರು ಇಷ್ಟ ಪಡುತ್ತಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಪ್ರೇಕ್ಷಕರು ಸಾಕಷ್ಟು ಅಸಮಾಧಾನ ಹೊರ ಹಾಕುವಾಗಲೇ ಇದೀಗ ರಾಮಾಚಾರಿಯ ಎಂಟ್ರಿ ಆಗಿದ್ದು, ಇಲ್ಲಾದ್ರೂ ಪ್ರೇಕ್ಷಕರಿಗೆ ಮನರಂಜನೆ ನೀಡುವ ಅಂಶಗಳು ಕಾಣ ಸಿಗುವುದಾ? ಎನ್ನುವುದು ಪ್ರೇಕ್ಷಕರ ನಿರೀಕ್ಷೆಯಾಗಿದೆ.

Leave a Reply

Your email address will not be published.