ಹರ್ಷ ಭುವಿ ಜೋಡಿ ತೆರೆಗೆ ಮಾತ್ರ ಸೀಮಿತ: ಸುಳ್ಳು ಸುದ್ದಿಗಳಿಂದ ಬೇಸರಗೊಂಡ ನಟ ಕಿರಣ್ ರಾಜ್ ಹೇಳಿದ್ದೇನು?
ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿರುವ ನಟ ಕಿರಣ್ ರಾಜ್ ಸ್ಯಾಂಡಲ್ವುಡ್ ನಲ್ಲಿ ಸಹಾ ಸಕ್ರಿಯವಾಗಿದ್ದಾರೆ. ಸಿನಿಮಾ, ಸೀರಿಯಲ್ ಮಾತ್ರವೇ ಅಲ್ಲದೇ ತಮ್ಮ ಸಮಾಜಮುಖಿ ಕೆಲಸಗಳಿಂದ ಸಹಾ ಕಿರಣ್ ರಾಜ್ ಅವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಈ ನಟನನ್ನು ಹಿಂಬಾಲಿಸುವ ದೊಡ್ಡ ಅಭಿಮಾನಿಗಳ ಬಳಗವೇ ಇದ್ದು, ಸೋಶಿಯಲ್ ಮೀಡಿಯಾದಲ್ಲಿ ನಟ ಕಿರಣ್ ರಾಜ್ ಅವರು ತಮ್ಮ ಫೋಟೋಗಳು, ವಿಶೇಷ ವಿಷಯಗಳ ಕುರಿತಾಗಿ ಮಾಹಿತಿಯನ್ನು ಹಂಚಿಕೊಳ್ಳುವುದುಂಟು.
ನಟ ಕಿರಣ್ ರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಹೊಸ ಪೋಸ್ಟ್ ನ ಮೂಲಕ ಇದೀಗ ಒಂದು ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿರುವುದು ಎಲ್ಲರ ಗಮನವನ್ನು ಸೆಳೆದಿದೆ. ನಟ ಕಿರಣ್ ರಾಜ್ ಅವರು ಕನ್ನಡದ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ನಾಯಕ ಹರ್ಷನ ಪಾತ್ರದಲ್ಲಿ ಜನರನ್ನು ರಂಜಿಸುತ್ತಿದ್ದಾರೆ. ಇದೇ ಸೀರಿಯಲ್ ನ ನಾಯಕಿ ಭುವಿ ಪಾತ್ರದಲ್ಲಿ ನಟಿ ರಂಜನಿ ರಾಘವನ್ ಅವರು ಸಾಕಷ್ಟು ಜನಪ್ರಿಯತೆ ಸಹಾ ಪಡೆದುಕೊಂಡಿದ್ದಾರೆ.
ಕಿರುತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಜೋಡಿಗಳಲ್ಲಿ ಹರ್ಷ ಭುವಿ ಜೋಡಿಯು ಪ್ರೇಕ್ಷಕರ ಮೇಲೊಂದು ಮೋಡಿಯನ್ನು ಮಾಡಿದ್ದು, ಆನ್ ಸ್ಕ್ರೀನ್ ನ ಈ ಜೋಡಿಗೆ ಅಪಾರವಾದ ಜನ ಮನ್ನಣೆ ಸಿಕ್ಕಿದೆ. ಕಿರಿಯರಿಂದ ಹಿಡಿದು ಯುವ ಜನರು ಹಾಗೂ ಹಿರಿಯರಿಗೆ ಕೂಡಾ ಹರ್ಷ ಭುವಿ ಜೋಡಿ ಪ್ರೀತಿ ಪಾತ್ರವಾಗಿದೆ. ಆನ್ ಸ್ಕ್ರೀನ್ ಜೋಡಿಯ ಈ ಜಾದೂ ಯಾವ ಮಟ್ಟಕ್ಕೆ ಇದೆ ಎಂದರೆ ತೆರೆಯ ಹಿಂದೆಯೂ ಸಹಾ ಇವರನ್ನು ಜೋಡಿಯಾಗೇ ನೋಡುವವರು ಸಹಾ ಇದ್ದಾರೆ. ಇದು ಆ ಜೋಡಿಯು ಬೀರಿರುವ ಪ್ರಭಾವವಾಗಿದೆ.
ಸಾರ್ವಜನಿಕವಾಗಿ ಜನರಿಗೆ ಈ ಜೋಡಿ ತಮ್ಮದು ಕೇವಲ ಆನ್ ಸ್ಕ್ರೀನ್ ಜೋಡಿ ಎಂದು ಜನರಲ್ಲಿ ನಂಬಿಕೆ ಮೂಡಿಸುವುದಕ್ಕೆ ಬಹಳ ಕಷ್ಟ ಪಡಬೇಕಾಗಿದೆ ಎನ್ನುವ ಮಾತನ್ನು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದುಂಟು. ಇದೇ ವಿಷಯವನ್ನು ತಮಗೆ ಬೇಕಾದಂತೆ ತೆಗೆದುಕೊಂಡ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಕಿರಣ್ ರಾಜ್ ಮತ್ತು ರಂಜನಿ ರಾಘವನ್ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವುದನ್ನು ನೋಡಿ ಕಿರಣ್ ರಾಜ್ ಅವರು ಅಸಮಾಧಾನಗೊಂಡಿದ್ದು ಈ ಬಗ್ಗೆ ಅವರು ಪೋಸ್ಟ್ ಶೇರ್ ಮಾಡಿದ್ದಾರೆ.
ನಟ ಕಿರಣ್ ರಾಜ್ ಅವರು ತಮ್ಮ ಪೋಸ್ಟ್ ನಲ್ಲಿ, ದಯವಿಟ್ಟು ಹರ್ಷ ಮತ್ತು ಭುವಿ ಪಾತ್ರಗಳನ್ನು ಸೀರಿಯಲ್ ಪಾತ್ರಗಳಾಗಿ ಇರಲು ಬಿಡಿ. ಈ ಪಾತ್ರಗಳನ್ನು ರಿಯಲ್ ಲೈಫ್ ನಲ್ಲಿ ಜೋಡಿ ಮಾಡುವ, ಸಂಬಂಧ ಕಲ್ಪಿಸುವ ಕೆಲಸವನ್ನು ಮಾಡಬೇಡಿ. ಕೆಲವು ವೀವ್ಸ್ ಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿಸುವವರು ಸ್ವಲ್ಪವಾದರೂ ಜೀವಂತವಾಗಿರುವವರ ಹಾಗೆ ವರ್ತಿಸಿ ಎಂದು ಬರೆದುಕೊಂಡು ಪರೋಕ್ಷವಾಗಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಸಂದೇಶ ರವಾನೆ ಮಾಡಿದ್ದಾರೆ.