ನಟ ಪುನೀತ್ ರಾಜ್‍ಕುಮಾರ್ ಅವರು ಅಗಲಿದ ದಿನದಿಂದಲೂ ಸಹಾ ನಾಡಿನಾದ್ಯಂತ ಅವರ ಬಗ್ಗೆಯೇ ಅನೇಕ ಚರ್ಚೆಗಳು, ಅನೇಕ ಉತ್ತಮವಾದ ಮಾತುಗಳು ಕೇಳಿ ಬರುತ್ತಿದೆ. ಪುನೀತ್ ರಾಜ್‍ಕುಮಾರ್ ಅವರು ಮಾಡಿರುವ ಸಮಾಜ ಮುಖಿ ಕೆಲಸಗಳ ಕುರಿತಾಗಿ ಬಹಳಷ್ಟು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪುನೀತ್ ಅವರು ಮಾಡಿರುವ ಈ ಮಾನವೀಯ ಕಾರ್ಯಗಳ ಕುರಿತಾಗಿ ತಿಳಿದ ಜನರು ಎಂತಹ ಮೇರು ವ್ಯಕ್ತಿತ್ವ ಪುನೀತ್ ಅವರದ್ದು ಎಂದು ಹಾಡಿ ಹೊಗಳುತ್ತಿದ್ದಾರೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನಕಲಿ ಪೋಸ್ಟ್ ಗಳು ಸಹಾ ಹರಿದಾಡಿವೆ ಎನ್ನಲಾಗಿದೆ. ಅಂತಹವುಗಳಲ್ಲಿ ಒಂದು ಹೀಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಬುಲೆಟ್ ಪ್ರಕಾಶ್ ಅವರು ನಿಧನರಾದಾಗ ಪುನೀತ್ ರಾಜ್‍ಕುಮಾರ್ ಅವರು ಬುಲೆಟ್ ಪ್ರಕಾಶ್ ಅವರ ಮನೆಗೆ ತೆರಳಿ, ಅವರ ಕುಟುಂಬದವರಿಗೆ ದೈರ್ಯ ತುಂಬಿ 5 ಲಕ್ಷ ರೂ.ಗಳ ಧನ ಸಹಾಯವನ್ನು ಮಾಡಿದ್ದರೆನ್ನುವ ವಿಚಾರವನ್ನು ಖುದ್ದು ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಹೇಳಿದ್ದಾರೆ ಎನ್ನುವ ಒಂದು ಎಡಿಟೆಡ್ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ.
ಆದರೆ ಈ ವೈರಲ್ ಫೋಟೋದ ಅಸಲಿಯತ್ತಿನ ಬಗ್ಗೆ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಮಾದ್ಯಮವೊಂದಕ್ಕೆ ನಿಜ ವಿಚಾರ ಏನು ಎನ್ನುವುದನ್ನು ತಿಳಿಸಿದ್ದಾರೆ ಎನ್ನುವ ವಿಷಯ ಸುದ್ದಿಯಾಗಿದ್ದು, ಮಾದ್ಯಮ ಅದನ್ನು ವರದಿ ಮಾಡಿದೆ. ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ವೈರಲ್ ಆಗಿರುವ ಪೋಸ್ಟ್ ನಲ್ಲಿರುವ ವಿಚಾರ ಸುಳ್ಳು ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಎನ್ನುವ ವಿಷಯ ಈಗ ಸುದ್ದಿಯಾಗಿದೆ.
ರಕ್ಷಕ್ ಮಾದ್ಯಮಕ್ಕೆ ಸ್ಪಷ್ಟನೆ ನೀಡಿ, ಅಣ್ಣಾವ್ರ ಕುಟುಂಬದ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಆದರೆ ಪುನೀತ್ ಅವರು ನಮ್ಮ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳನ್ನು ನೀಡಿಲ್ಲ. ಆದರೆ ಅವರು ಹಣ ನೀಡಿದ್ದಾರೆಂದು ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎನ್ನುವ ಅಸಮಾಧಾನವನ್ನು ರಕ್ಷಕ್ ಅವರು ವ್ಯಕ್ತಪಡಿಸಿದ್ದಾರೆ ಎಂದು ಮಾದ್ಯಮವು ವರದಿಯನ್ನು ಮಾಡಿದೆ.