ಹನಿಮೂನ್ ಮೂಡ್ ನಲ್ಲಿ ನವಜೋಡಿ: ಜೀವನದ ಬಗ್ಗೆ ಮಹಾಲಕ್ಷ್ಮಿ ಹೇಳಿದ ಮಾತಿಗೆ ಖುಷಿಪಟ್ಟ ಅಭಿಮಾನಿಗಳು

Entertainment Featured-Articles Movies News

ಮಹಾಲಕ್ಷ್ಮಿ ಮತ್ತು ರವೀಂದ್ರನ್ ಸಖತ್ ಸುದ್ದಿಯಾಗುತ್ತಿರುವ ಜೋಡಿಯಾಗಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರ ಮದುವೆಯ ನಂತರ ಈ ಜೋಡಿಯ ಬಗ್ಗೆ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ ಮತ್ತು ಇವರ ಬಗ್ಗೆ ಸಾಕಷ್ಟು ಜೋಕ್ ಗಳು ಹರಿದಾಡುತ್ತಿವೆ ಮತ್ತು ಇವರ ಬಗ್ಗೆ ವ್ಯಂಗ್ಯ ಸಹಾ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಬಗ್ಗೆ ಎಷ್ಟೆಲ್ಲಾ ನೆಗೆಟಿವ್ ಕಾಮೆಂಟ್ ಗಳು ಹರಿದಾಡಿದರೂ ಸಹಾ ರವೀಂದ್ರನ್ ಮತ್ತು ಮಹಾಲಕ್ಷ್ಮಿ ಜೋಡಿ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮದುವೆಯ ನಂತರ ತಮ್ಮ ಹನಿಮೂನ್ ಎಂಜಾಯ್ ಮಾಡುವ ಮೂಡ್ ನಲ್ಲಿ ಇದ್ದಾರೆ.

ಪ್ರಸ್ತುತ ಈ ಜೋಡಿ ಮಹಾಬಲಿಪುರಂ ನ ಇಂಟರ್ ಕಾಂಟಿನೆಂಟಲ್ ರೆಸಾರ್ಟ್ ನಲ್ಲಿ ತಂಗಿದ್ದಾರೆ. ಅಲ್ಲಿಂದಲೇ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ರವಾನೆ‌ ಮಾಡಿದ್ದಾರೆ.‌ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಚಂದ್ರಶೇಖರ್ ಮದುವೆಯ ಫೋಟೋಗಳು ಹೊರ ಬಂದ ಮೇಲೆ ಅದು ವೈರಲ್ ಆಗುವ ಜೊತೆಗೆ, ದಿನಕ್ಕೊಂದು ಹೊಸ ಸುದ್ದಿ ಹೊರಗೆ ಬರುತ್ತಿದೆ. ಮಹಾಲಕ್ಷ್ಮಿ ಅವರ ಮೊದಲ ಮದುವೆ ಮಕ್ಕಳ ವಿಚಾರ ಈಗಾಗಲೇ ಸುದ್ದಿಯಾಗಿದೆ. ಅದಲ್ಲದೇ ಮೊದಲ ಮದುವೆಯ ವಿಚ್ಚೇದನದ ನಂತರ ಸಹನಟನ ಜೊತೆ ನಡೆಸಿದ್ದರೆನ್ನಲಾದ ಅಫೇರ್ ಬಗ್ಗೆ ಸಹಾ ಸುದ್ದಿಗಳು ಹರಿದಾಡಿವೆ.

ಆದರೆ ಇವೆಲ್ಲವುಗಳ ನಡುವೆಯೇ ರವೀಂದ್ರನ್ ಅವರ ಆಸ್ತಿ ವಿಚಾರವು ಸಹಾ ಸಖತ್ ಸುದ್ದಿಯಾಗಿ, ರವೀಂದ್ರನ್ ಮದುವೆಗಿಂತ ಮೊದಲೇ ಕೆಲವೊಂದು ಷರತ್ತುಗಳನ್ನು ಸಹಾ ಹಾಕಿದ್ದಾರೆ ಎಂದು ಹೇಳಲಾಗಿತ್ತು. ವಿಷಯ ಏನೇ ಆದರೂ ಈ ಜೋಡಿ ಮಾತ್ರ ಖುಷಿಯಿಂದ ಹನಿಮೂನ್ ಮೂಡ್ ನಲ್ಲಿ ಎಂಜಾಯ್ ಮಾಡುತ್ತಿದ್ದು, ನಟಿ ಮಹಾಲಕ್ಷ್ಮಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲೈಫ್ ಈಸ್ ಬ್ಯೂಟಿಫುಲ್ ಎನ್ನುವ ಪೋಸ್ಟ್ ಶೇರ್ ಮಾಡಿಕೊಂಡು ಅಭಿಮಾನಿಗಳ ಜೊತೆಗೆ ತಮ್ಮ‌ ಖುಷಿಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ‌ಅಭಿಮಾನಿಗಳು ಸಹಾ ಪ್ರತಿಕ್ರಿಯೆ ನೀಡಿ ಶುಭ ಹಾರೈಸಿದ್ದಾರೆ.

Leave a Reply

Your email address will not be published.