ಹತ್ತಿರ ಬಂದು ಕುಳಿತವನ ಜೊತೆ ಹುಡುಗಿ ಇಂತಾ ಕೆಲಸ ಮಾಡೋದಾ: ಬೆಚ್ಚಿ ಬಿದ್ದು ಓಡಿದ ವ್ಯಕ್ತಿ!! ವೈರಲ್ ವೀಡಿಯೋ

Entertainment Featured-Articles News

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳ ಅಬ್ಬರದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ದಿನ ಅನೇಕ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವು ವೀಡಿಯೋಗಳು ನಮಗೆ ನಗುವನ್ನು ತರಿಸಿದರೆ, ಇನ್ನೂ ಕೆಲವು ವೀಡಿಯೋಗಳು ಅಚ್ಚರಿಯನ್ನು ಉಂಟು ಮಾಡುತ್ತವೆ. ಇನ್ನೂ ಕೆಲವು ವೀಡಿಯೋಗಳು ಭ ಯ ವನ್ನು ಮೂಡಿಸುತ್ತವೆ. ಇವೆಲ್ಲವುಗಳ ನಡುವೆ ಇತ್ತೀಚಿನ ದಿನಗಳಲ್ಲಿ ಪ್ರಾಂಕ್ ವೀಡಿಯೋಗಳು ಬಹಳ ಹೆಚ್ಚಾಗಿವೆ. ಇವುಗಳಲ್ಲಿ ಕೆಲವು ಕೇವಲ ತಮಾಷೆಗಾಗಿ ಮಾಡಿದರೆ,‌ ಇನ್ನೂ ಕೆಲವು ಬೇಕಂತಲೇ ಮಾಡಿರುವುದಾಗಿ ಕಾಣುತ್ತದೆ.

ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಪ್ರಾಂಕ್ ವೀಡಿಯೋ ಈಗ ವೈರಲ್ ಆಗುತ್ತಾ ಸಾಗಿದೆ. ಇದರಲ್ಲಿ ಯುವತಿಯೊಬ್ಬಳು ಮಾಡಿದ ಕೆಲಸಕ್ಕೆ ವ್ಯಕ್ತಿಯೊಬ್ಬರು ಭ ಯ ಪಡುವಂತಾಗಿದೆ. ಯುವತಿಯು ಮಾಡಿದ ತುಂಟಾಟವನ್ನು ಕಂಡು ಆ ವ್ಯಕ್ತಿ ಒಂದು ಕ್ಷಣ ಬೆ ಚ್ಚಿ ಬೀಳುವಂತಾಗಿದೆ. ಈ ವೀಡಿಯೋ ನೋಡಿದರೆ ನೀವು ಸಹಾ ಖಂಡಿತ ನಗುವಿರಿ ಹಾಗೂ ತಪ್ಪದೇ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿದರೂ ಆಶ್ಚರ್ಯ ಏನಿಲ್ಲ ಎಂದು ಹೇಳಬಹುದು.

ವೀಡಿಯೋದಲ್ಲಿ ನೋಡಿದಾಗ ಯುವತಿಯೊಬ್ಬಳು ಬೆಂಚಿನ ಮೇಲೆ ಕುಳಿತಿರುವುದು ಕಾಣುತ್ತದೆ. ಆಗಲೇ ಅಲ್ಲಿಗೆ ವ್ಯಕ್ತಿಯೊಬ್ಬರು ಬರುತ್ತಾರೆ. ಅವರು ಅಲ್ಲಿ ಕುಳಿತಿರುವ ಯುವತಿಗೆ ಹಾಯ್ ಎಂದು ಹೇಳಿ ಮುಗುಳ್ನಗೆಯ ಹಾರೈಕೆ ಮಾಡಿ, ಆಕೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಹಾಗೆ ಕುಳಿತ ವ್ಯಕ್ತಿ ಕೈಯಲ್ಲಿದ್ದ ನೀರಿನ ಬಾಟಲ್ ನಿಂದ ನೀರು ಕುಡಿಯುವ ಕಡೆಗೆ ತನ್ನ ಗಮನವನ್ನು ಹರಿಸುತ್ತಾನೆ. ಇದ್ರಲ್ಲಿ ಏನಿದೆ ವಿಶೇಷ ಎಂದು ಕೊಳ್ಳುವಿರಾ? ಖಂಡಿತ ವಿಶೇಷ ಇದೆ. ಅದಾದ ಕೆಲವೇ ಸೆಕೆಂಡುಗಳಲ್ಲಿ ಅಲ್ಲಿದ್ದ ಯುವತಿ ಕಥೆಗೆ ಟ್ವಿಸ್ಟ್ ನೀಡುತ್ತಾಳೆ…

ಬೆಂಚಿನ ಮೇಲೆ ಕುಳಿತಿದ್ದ ಯುವತಿಯು ಅಲ್ಲಿಂದ ಮೇಲೆ ಏಳುತ್ತಾಳೆ. ಆಕೆಯ ಸೊಂಟದ ಭಾಗ ಆಕೆಯ ದೇಹದಿಂದ ಕತ್ತರಿಸಿಕೊಂಡು ಬೇರೆಯಾಗಿ ಹೋಯಿತೇನೋ ಎನ್ನುವಂತಹ ಭ ಯಾ ನ ಕ ದೃಶ್ಯವು ಅಲ್ಲಿ ನಡೆಯುತ್ತದೆ. ಅಷ್ಟೇ!! ಇನ್ನೇನಿದೆ , ಅಲ್ಲಿದ್ದ ಆ ವ್ಯಕ್ತಿ ಆ ದೃಶ್ಯವನ್ನು ನೋಡಿ ಭ ಯದಿಂದ ಅಲ್ಲಿದ್ದ ಎದ್ದು ಬಿದ್ದು ಓಡಿ ಹೋಗುತ್ತಾನೆ. ಆದರೆ ಆ ಯುವತಿ ಬೆಂಚಿನ ಮಧ್ಯದಲ್ಲಿದ್ದ ರಂಧ್ರದ ಒಳಗೆ ಕುಳಿತು, ಮೇಲೆ ಸೊಂಟದ ಭಾಗದ ಬೊಂಬೆಯನ್ನು ಇಟ್ಟಿರುತ್ತಾಳೆ.

ಇನ್ನು ಮೊದಲು ಭ ಯ ಪಟ್ಟ ವ್ಯಕ್ತಿಗೆ ಅನಂತರ ಅದು ಪ್ರಾಂಕ್ ಎಂದು ತಿಳಿಯುತ್ತದೆ. ಯುವತಿಯು ಮಾಡಿರುವ ಟ್ರಿಕ್ ಅರ್ಥವಾಗುತ್ತದೆ. ಈ ಫನ್ನಿ ವೀಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ heggul5 ಎನ್ನುವ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋವನ್ನು ಈಗಾಗಲೇ ಮೂವತ್ತು ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಅನೇಕರು ಮೆಚ್ಚುಗೆಗಳನ್ನು ನೀಡಿದ್ದಾರೆ. ಕೆಲವರು ವ್ಯಂಗ್ಯ ಭರಿತವಾದ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *