ಹಣಕ್ಕಾಗಿ ಸಂಬಂಧಗಳನ್ನು ಮಾರಿ ಕೊಂಡ ಅಣ್ಣ, ಸೌಲಭ್ಯಗಳ ಆಸೆಗೆ ತಂಗಿ ಕೊರಳಿಗೆ ತಾಳಿ ಕಟ್ಟಿದ

0
201

ಹಣ ಎನ್ನುವುದು ಮಾನವನ ಜೀವನದಲ್ಲಿ ಒಂದು ಮೂಲಭೂತ ಅಗತ್ಯವಾಗಿದೆ. ಹಣ ಅನಿವಾರ್ಯ ಎನಿಸಿದೆ. ಹಣವಿಲ್ಲದೇ ಜೀವನ ದುರ್ಬರವಾಗುತ್ತದೆ, ಹಣವಿಲ್ಲದೇ ಹೋದರೆ ಜೀವನ ನಡೆಸುವುದು ಅಸಾಧ್ಯವೆನ್ನುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಆದ್ದರಿಂದಲೇ ಹಣಕ್ಕಾಗಿ ದೇಶದಲ್ಲಿ ನಡೆಯುತ್ತಿರುವ ಅ ನ್ಯಾ ಯ, ಅ ಕ್ರ ಮಗಳ ಸುದ್ದಿಗಳು ಪ್ರಕಟವಾಗುತ್ತಿರುತ್ತವೆ. ಇನ್ನು ದೇಶದ ರಾಜಕೀಯ ನಾಯಕರು ಸಹಾ ಕೋಟಿ ಕೋಟಿ ಗಳಿಸಲು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಈಗ ಇದೇ ಹಣ ಹಾಗೂ ಸೌಲಭ್ಯ ಗಳಿಗಾಗಿ ಸಂಬಂಧಗಳನ್ನು ಕೂಡಾ ಮರೆತ ವಿಚಿತ್ರ ಘಟನೆಯೊಂದು ವರದಿಯಾಗಿದೆ.‌

ಹೌದು, ಈ ವಿಚಿತ್ರ ಎನಿಸುವ ಘಟನೆಯಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯ ಅಡಿಯಲ್ಲಿ ಸಿಗುವ ಹಣ ಹಾಗೂ ಇತರೆ ಸವಲತ್ತುಗಳನ್ನು ಪಡೆಯುವ ಸಲುವಾಗಿ ವ್ಯಕ್ತಿಯೊಬ್ಬನು ತನ್ನ ತಂಗಿಯನ್ನೇ ಮದುವೆಯಾಗಿರುವ ಘಟನೆ ನಡೆದಿದೆ. ವಾಸ್ತವವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ನೂತನ ದಂಪತಿಗೆ ಮನೆಗೆ ಅಗತ್ಯ ಇರುವ ಉಡುಗೊರೆಗಳ ಜೊತೆಗೆ ಹಣವನ್ನು ಸಹಾ ನೀಡಲಾಗುತ್ತದೆ.

ಮದುವೆಯ ನಂತರ ವರನ ಖಾತೆಗೆ 20,000 ರೂ.ಗಳನ್ನು ಠೇವಣಿ ಮಾಡಲಾಗುವುದು. ಅಲ್ಲದೇ 10, 000 ರೂ.ಗಳ ಉಡುಗೊರೆಯನ್ನು ನೀಡಲಾಗುವುದು. ಡಿಸೆಂಬರ್ 11 ರಂದು ಫಿರೋಜಾಬಾದ್ ನ ತುಂಡ್ಲಾದಲ್ಲಿ ವಿವಾಹದ ಆಯೋಜನೆ ಮಾಡಲಾಗಿತ್ತು. ಈ ವೇಳೆ ಗ್ರಾಮಸ್ಥರು ವಿವಾಹಿತ ದಂಪತಿ ಯನ್ನು ಅಣ್ಣ ತಂಗಿ ಎಂದು ಗುರುತಿಸಿದಾಗಲೇ ವಿಷಯ ಬೆಳಕಿಗೆ ಬಂದಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ತುಂಡಲಾ ಬ್ಲಾಕ್ ಡೆವಲಪ್ಮೆಂಟ್ ಕಛೇರಿ ಆವರಣದಲ್ಲಿ ಆಯೋಜನೆ ಮಾಡಲಾಗಿತ್ತು.

ಈ ವೇಳೆ ಒಟ್ಟು 51 ಜನ ಜೋಡಿಗಳು ವಿವಾಹವಾಗಿದ್ದಾರೆ. ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ ನರೇಶ್ ಕುಮಾರ್ ಅವರು ಗ್ರಾಮಸ್ಥರ ದೂರಿನ ಮೇರೆಗೆ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದಾಗ ವಿಷಯ ಹೊರ ಬಂದಿದ್ದು, ತಪ್ಪು ಮಾಡಿದವರ ಮೇಲೆ ಕಾನೂನಿನ ರೀತಿ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಯುವಕನ ವಿ ರು ದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಗ್ರಾಮ ಪಂಚಾಯಿತಿ ಗಮನಕ್ಕೆ ಬರದೆ ಹೀಗೆ ಆಗಲು ಹೇಗೆ ಸಾಧ್ಯ ಎಂದು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ವಿವರ ನೀಡುವಂತೆ ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here