ಹಣಕ್ಕಾಗಿ ಜನರ ದಾರಿ ತಪ್ಪಿಸುತ್ತಿರುವ ಆಲಿಯಾ? ಸಾಕ್ಷಿ ಸಮೇತ ಸಾಬೀತು ಮಾಡಿದ ನೆಟ್ಟಿಗರು

Entertainment Featured-Articles Health Movies News

ಬಾಲಿವುಡ್‌ ನ ಸ್ಟಾರ್ ನಟಿ ಆಲಿಯಾ ಭಟ್ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಟ್ರೋಲ್ ಎನ್ನುವುದು ಕೆಲವು ನಟಿಯರಿ ಪಾಲಿಗೆ ತೀರಾ ಸಾಮಾನ್ಯ ಎನ್ನುವ ಹಾಗೆ ಆಗಿದೆ. ಆದರೆ ಈಗ ಮತ್ತೊಮ್ಮೆ ಆಲಿಯಾ ಭಟ್ ಟ್ರೋಲ್ ಆಗಿದ್ದು, ಈ ಬಾರಿ ನೆಟ್ಟಿಗರು ವಿಡಿಯೋವೊಂದನ್ನು ನೋಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆಲಿಯಾ ಈ ಹಿಂದೆ ಶೋವೊಂದರಲ್ಲಿ ಹೇಳಿರುವ ಮಾತುಗಳ ವಿಡಿಯೋವನ್ನು , ಆಕೆ ಇತ್ತೀಚಿನ ದಿನಗಳಲ್ಲಿ ರಾಯಭಾರಿಯಾಗಿ ಮಿಂಚುತ್ತಿರುವ ಜಾಹೀರಾತು ಉತ್ಪನ್ನಗಳೊಂದಿಗೆ ಹೋಲಿಕೆ ಮಾಡುತ್ತಾ ನಟಿಯನ್ನು ಡಬಲ್ ಸ್ಟ್ಯಾಂಡರ್ಡ್ ಎಂದು ಕರೆಯುತ್ತಿದ್ದಾರೆ ನೆಟ್ಟಿಗರು.

ಟ್ವಿಟರ್ ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿದಾಗ, ಬಾಲಿವುಡ್ ಮಂದಿ ತಮ್ಮ ಆರೋಗ್ಯಕ್ಕೆ ಯಾವುದು ಹಿತಕರವಲ್ಲವೋ, ಹಣಕ್ಕಾಗಿ ಅದನ್ನೇ ಜನರಿಗೆ ಸೇವಿಸಲು ಪ್ರೇರಣೆಯನ್ನು ನೀಡುವುದು ಎಷ್ಟು ಸರಿ? ಎಂದು ಈಗ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದಾದರೂ ಏನು?? ಎನ್ನುವುದಾದರೆ, ಹಿಂದೊಮ್ಮೆ ಆಲಿಯಾ ಭಟ್ ನಟ ವರುಣ್ ಧವನ್ ಹಾಗೂ ಇತರೆ ಕಲಾವಿದರೊಂದಿಗೆ ಕಪಿಲ್ ಶರ್ಮಾ ಶೋ ನಲ್ಲಿ ಭಾಗವಹಿಸಿದ್ದರು.

ಈ ವೇಳೆ ನಟಿಗೆ ಚಹಾ ನೀಡಿದಾಗ ಅದರಲ್ಲಿ ಸಕ್ಕರೆ ಇದೆ ಎನ್ನುವ ಕಾರಣಕ್ಕೆ ಆಲಿಯಾ ಭಟ್ ಅದನ್ನು ಸ್ವೀಕರಿಸಲಿಲ್ಲ, ಅವರು ಚಹಾ ವಾಪಸ್ ನೀಡಿದರು. ಈ ವೇಳೆ ಅವರು ನಟ ವರುಣ್ ಧವನ್ ಜೊತೆ ಮಾತನಾಡುತ್ತಾ, ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಮಾತನ್ನು ಹೇಳಿದರು. ನಟ ವರುಣ್ ಧವನ್ ಎಷ್ಟು ಗಳಿಸಿದರೂ ಸಕ್ಕರೆ ಕೂಡಾ ತಿನ್ನಲು ಸಾಧ್ಯವಾಗುವುದಿಲ್ಲ ಇವರಿಗೆ ಎಂದು ಹಾಸ್ಯ ಚಟಾಕಿ ಯನ್ನು ಹಾರಿಸಿದ್ದರು. ಆದರೆ ಈಗ ವಿಷಯ ಅದಲ್ಲ.

ಯಾವ ನಟಿಯು ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದರೋ, ಈಗ ಅದೇ ನಟಿ ಸಕ್ಕರೆ ಅಂಶ ತುಂಬಿರುವಂತಹ ಅನೇಕ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದು, ಜನರಿಗೆ ಅವುಗಳನ್ನು ಸೇವನೆ ಮಾಡುವಂತೆ ಪ್ರೇರಣೆ ನೀಡುವುದಾದರೂ ಎಷ್ಟು ಸರಿ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಆಲಿಯಾ ಭಟ್ ತಂಪು ಪಾನೀಯಗಳ, ಐಸ್ ಕ್ರೀಮ್, ಚಾಕೊಲೇಟ್ ಜಾಹಿರಾತುಗಳಲ್ಲಿ ಕಾಣಿಸಿಕೊಂಡು, ಅವುಗಳನ್ನು ಸೇವಿಸುವಂತೆ ಜನರಿಗೆ ಪ್ರೇರಣೆ ನೀಡುತ್ತಿದ್ದಾರೆ.

ಆಲಿಯಾ ಈ ಹಿಂದೆ ಕಪಿಲ್ ಶರ್ಮಾ ಶೋ ನಲ್ಲಿ ಹೇಳಿದ ಮಾತುಗಳ ವಿಡಿಯೋವನ್ನು ಸದ್ಯ ಅವರು ನಟಿಸಿರುವ ಜಾಹೀರಾತುಗಳ ವಿಡಿಯೋಗಳಿಗೆ ಹೋಲಿಕೆ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದಾದರೆ ಆಲಿಯಾ ಭಟ್ ಸಕ್ಕರೆ ಅಂಶ ಇರುವಂತಹ ಉತ್ಪನ್ನಗಳಿಗೆ ಜಾಹೀರಾತು ನೀಡುವುದು ಏಕೆ ? ಎಂದು ವಿಡಿಯೋದ ಶೀರ್ಷಿಕೆಯಲ್ಲೇ ಪ್ರಶ್ನೆ ಮಾಡಲಾಗಿದೆ.

Leave a Reply

Your email address will not be published. Required fields are marked *