ಹಣಕ್ಕಾಗಿ ಇಂತಾ ಕೆಲಸ ಮಾಡೋಕೆ ನಾಚಿಕೆ ಆಗೋದಿಲ್ವಾ?? ಏನು ಸಂದೇಶ ಕೊಡ್ತಾ ಇದ್ದೀರಿ ಎಂದು ನಟಿಯ ಬಗ್ಗೆ ನೆಟ್ಟಿಗರ ಸಿಟ್ಟು
ಸಿನಿಮಾ ಸೆಲೆಬ್ರಿಟಿಗಳು ಎಂದರೆ ಅವರ ಅಭಿಮಾನಿಗಳಿಗೆ ಒಂದು ಕ್ರೇಜ್, ತಮ್ಮ ಅಭಿಮಾನ ನಟ ಹಾಗೂ ನಟಿ ಏನು ಮಾಡಿದರೂ ಅದನ್ನು ಗಮನಿಸುತ್ತಾರೆ ಅಭಿಮಾನಿಗಳು. ಅಭಿಮಾನಿಗಳು ಮಾತ್ರವೇ ಅಲ್ಲದೇ ಸೆಲೆಬ್ರಿಟಿಗಳನ್ನು ಹಾಗೂ ಅವರ ಜೀವನ ವಿಧಾನವನ್ನು ಅನೇಕರು ಸದಾ ಗಮನಿಸುವುದು ಸಾಮಾನ್ಯವಾಗಿದೆ. ಏಕೆಂದರೆ ಸೆಲೆಬ್ರಿಟಿಗಳು ಎಂದಾಗ ಅಲ್ಲೊಂದು ಕುತೂಹಲ ಖಂಡಿತ ಇದ್ದೇ ಇರುತ್ತದೆ. ಆದ್ದರಿಂದಲೇ ಅವರು ಆಡುವ ಮಾತಿನಿಂದ, ತೊಡುವ ಬಟ್ಟೆಯವರೆಗೂ ಎಲ್ಲಾ ಸುದ್ದಿಯಾಗಿ ಬಿಡುತ್ತದೆ. ಅಭಿಮಾನಿಗಳಿಗೆ ಅದು ಖುಷಿಯನ್ನು ನೀಡುತ್ತದೆ.
ಸೆಲೆಬ್ರಿಟಿಗಳು ಕೆಲವೊಮ್ಮೆ ಆಡುವ ಮಾತು ಹಾಗೂ ಮಾಡುವ ಕಾರ್ಯಗಳು ಕಾಂಟ್ರವರ್ಸಿಗೆ ಕಾರಣವಾಗುತ್ತದೆ. ಉತ್ತಮವಾದ ಕೆಲಸಗಳನ್ನು ಮಾಡಿದಾಗ ಯಾವ ಜನರು ಅವರನ್ನು ಹಾಡಿ ಹೊಗಳಿದ್ದರೋ, ಅದೇ ಜನ ಸೆಲೆಬ್ರಿಟಿಗಳ ಅವರಿಗೆ ಇಷ್ಟವಾಗದ ಕೆಲಸವನ್ನು ಮಾಡಿದ್ದರೆ ಟೀಕೆಗಳನ್ನು ಮಾಡಲು ಸಹಾ ಮುಂದೆ ಇರುತ್ತಾರೆ. ಈಗ ಅಂತಹ ಒಂದು ಟೀಕೆ ಟಿಪ್ಪಣಿಗಳಿಗೆ ಆಹಾರವಾಗಿದ್ದಾರೆ ತೆಲುಗು ಹಾಗೂ ತಮಿಳಿನ ಖ್ಯಾತ ನಟಿ ರೆಜಿನಾ ಕಸಾಂಡ್ರ..
ರೆಜಿನಾ ತೆಲುಗು ಸಿನಿಮಾ ರಂಗದಲ್ಲಿ ಗುರ್ತಿಸಿಕೊಂಡಿರುವ ನಟಿ, ಆದರೆ ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವಕಾಶಗಳು ಕಡಿಮೆ ಆಗಿದೆ ಎನ್ನುವ ಟಾಕ್ ಕೂಡಾ ಇದೆ. ಆದರೆ ಇದೇ ವೇಳೆ ದಕ್ಷಿಣದ ಸಿನಿಮಾಗಳು ದೇಶದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿಗೆ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಬ್ರಾಂಡ್ ಗಳಿಗೆ ದಕ್ಷಿಣದ ನಟ ನಟಿಯರನ್ನು ರಾಯಭಾರಿಗಳನ್ನಾಗಿ ಮಾಡುತ್ತಿರುವುದು ನಾವು ಗಮನಿಸಬಹುದಾಗಿದೆ.
ಮೊದಲೆಲ್ಲಾ ಬಾಲಿವುಡ್ ಮಂದಿಗೆ ಮಣೆ ಹಾಕುತ್ತಿದ್ದ ಸುಪ್ರಸಿದ್ಧ ಕಂಪನಿಗಳು ಈಗ ದಕ್ಷಿಣದ ಕಡೆ ಮುಖ ಮಾಡಿವೆ. ಪ್ರಸ್ತುತ ರೆಜಿನಾ ಕೂಡಾ ಒಂದು ವಿಸ್ಕಿ ಬ್ರಾಂಡ್ ನ ಅಂಬಾಸಿಡರ್ ಆಗಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು ಇದು ಈಗ ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ. ಹೌದು ರೆಜಿನಾ ಸಿಗ್ನೆಚರ್ ವಿಸ್ಕಿ ಎನ್ನುವ ಮದ್ಯದ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದು, ಮದ್ಯ ಸೇವನೆಗೆ ಇದು ಉತ್ತೇಜನ ಎಂದು ನೆಟ್ಟಿಗರು ನಟಿಯ ವಿ ರು ದ್ಧ ಟೀಕೆ ಮಾಡಲು ಆರಂಭಿಸಿದ್ದಾರೆ.
ನೆಟ್ಟಿಗರು, ನಿಮ್ಮ ಈ ಆಲ್ಕೋಹಾಲ್ ಪ್ರಮೋಷನ್ ನೋಡಿ ನಿಮ್ಮ ಅಭಿಮಾನಿಗಳಿಗೆ ನಾಚಿಕೆ ಬೇಕು ಎಂದು ಹೀಗಳೆದಿದ್ದಾರೆ. ಅಲ್ಲದೇ ಸೆಲೆಬ್ರಿಟಿ ಆಗಿ ನಿಮಗೆ ಸ್ವಲ್ಪವೂ ಸಾಮಾಜಿಕ ಕಳಕಳಿ ಹಾಗೂ ಜವಾಬ್ದಾರಿ ಇಲ್ಲವೇ ಎಂದೂ, ಹಣಕ್ಕಾಗಿ ಇಂತಹ ಜಾಹೀರಾತು ನೀಡುವುದು ಎಷ್ಟು ಸರಿ ಎಂದೂ ಹಾಗೂ ಆಲ್ಕೋಹಾಲ್ ಕಂಪನಿಗೆ ಜಾಹೀರಾತು ನೀಡುವಷ್ಟು ದುಸ್ಥಿತಿ ನಿಮಗೆ ಬಂದಿರುವುದು ನೋಡಿ ನಮಗೆ ಕನಿಕರವಾಗುತ್ತಿದೆ ಎಂದೆಲ್ಲಾ ನಟಿಯ ಬಗ್ಗೆ ಜನರು ಅಸಮಾಧಾನವನ್ನು ಹೊರ ಹಾಕಿದ್ದಾರೆ.