ಹಕ್ಕಿ ಚಿಕ್ಕದು ಆದರೆ ಸವಾಲು ದೊಡ್ಡದು: ಈ ಚಿತ್ರದಲ್ಲಿ ಹಕ್ಕಿ ಎಲ್ಲಿದೆ ಕಂಡುಹಿಡಿಯಬಲ್ಲಿರಾ? ನಿಮ್ಮ ದೃಷ್ಟಿಗಿದು ಸವಾಲ್

Entertainment Featured-Articles News Wonder

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪಜಲ್ ಗಳು ಇತ್ತೀಚಿನ ದಿನಗಳಲ್ಲಿ ಬಹಳ ಕ್ರೇಜ್ ಮತ್ತು ಟ್ರೆಂಡ್ ಸೃಷ್ಟಿ ಮಾಡಿರುವಂತಹ ವಿಷಯಗಳಾಗಿವೆ. ಒಂದು ಹೊಸ ಫೋಟೋ ಪಜಲ್ ಸಾಮಾಜಿಕ ಜಾಲತಾಣದ ಯಾವುದಾದರೂ ಒಂದು ವೇದಿಕೆಯಲ್ಲಿ ಶೇರ್ ಆದರೆ ಅನಂತರ ಅದು ವೈರಲ್ ಆಗಿ ಎಲ್ಲಾ ಕಡೆಗಳಲ್ಲೂ ಸಿಕ್ಕಾಪಟ್ಟೆ ಸದ್ದನ್ನು ಮಾಡುತ್ತದೆ. ಈಗ ಅಂತಹುದೇ ಒಂದು ಹೊಸ ಪಜಲ್ ನೊಂದಿಗೆ ನಾವು ಇಂದು ನಿಮ್ಮ ಮುಂದೆ ಬಂದಿದ್ದೇವೆ‌.‌ ಈ ಪಜಲ್ ನಿಮ್ಮನ್ನು ಖಂಡಿತ ಸುಮ್ಮನೆ ಕೂರಲು ಬಿಡುವುದಿಲ್ಲ. ನಿಮ್ಮ ಜೊತೆಗೆ ಇದು ರಿವರ್ಸ್ ಗೇಮ್ ಆಡಬಹುದು ಆದ್ದರಿಂದ ಸ್ವಲ್ಪ ಎಚ್ಚರವಾಗಿರಿ.

ಹಾಗಾದರೆ ಈ ಹೊಸ ಪಜಲ್ ಯಾವುದರ ಬಗ್ಗೆ ಎನ್ನುವುದಾದರೆ, ಇಲ್ಲಿ ನೀಡಿರುವ ಫೋಟೋದಲ್ಲಿ ಅಡಗಿರುವ ಹಕ್ಕಿ ಅಥವಾ ಪಕ್ಷಿಯನ್ನು ನೀವು ಹುಡುಕಿ ನೋಡಬೇಕಾಗಿದೆ. ಈ ಫೋಟೋದಲ್ಲಿ ಹಕ್ಕಿ ಎಲ್ಲಿದೆಯೆಂದು ಅಮಾಯಕತನದಿಂದ ಪ್ರಶ್ನೆ ಮಾಡಬೇಡಿ. ಏಕೆಂದರೆ ಕೊನೆಗೆ ನಿಮಗೆ ಉತ್ತರ ಖಂಡಿತ ದೊರೆಯುತ್ತದೆ. ಆದರೆ ಅದಕ್ಕಿಂತ ಮೊದಲು ನಿಮ್ಮ ದೃಷ್ಟಿಗೆ ಒಂದು ಸವಾಲನ್ನು ನೀಡಿ, ಈ ಫೋಟೋದಲ್ಲಿ ಅಡಗಿ ಕುಳಿತಿರುವ ಹಕ್ಕಿ ಎಲ್ಲಿದೆ ಎಂಬುದನ್ನು ಹುಡುಕುವ ಪ್ರಯತ್ನವನ್ನು ಮಾಡಿ.

ಸಾಕಷ್ಟು ಕಿಕ್ ನೀಡುತ್ತಿರುವ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿನ ದೃಶ್ಯವನ್ನು ನೋಡಿದಾಗ ನಿಮಗೆ ಕೇವಲ ಎಲೆಗಳನ್ನು ಬಿಟ್ಟರೆ ಬೇರೇನೋ ಇದೆ ಎನ್ನುವುದು ಕಾಣುವುದಿಲ್ಲ. ಅದನ್ನೆ ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆ ಎನ್ನುವುದು. ಇಲ್ಲದೇ ಇರುವುದು ಇದ್ದಂತೆ ಕಾಣುತ್ತದೆ. ಅದೇ ಇದರ ಚಮತ್ಕಾರ. ಇನ್ನು ಫೋಟೋದಲ್ಲಿ ಹಕ್ಕಿ ಎಲ್ಲಿದೆ ಎಂದು ನಾವು ನಿಮಗೆ ಹೇಳಿದರೆ ಅರೆರೆ ಎಷ್ಟು ಸುಲಭವಾದ ಉತ್ತರ ನಮಗೆ ಸಿಗಲಿಲ್ಲವೆಂದು ಖಂಡಿತಾ ಚಡಪಡಿಸುವಿರಿ.

ಈ ಫೋಟೋ ಈಗ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಫೋಟೋ ಪಜಲ್ ಗಳಿಗೆ ಇರುವ ಕ್ರೇಜ್ ಕಾರಣದಿಂದ ಸಾಮಾಜಿಕ ಜಾಲತಾಣದ ಹಲವು ಪೇಜ್ ಗಳು ಇಂತಹ ಹೊಸ ಹೊಸ ಫೋಟೋಗಳನ್ನು ನೆಟ್ಟಿಗರ ಮುಂದೆ ಇಡುವ ಮೂಲಕ ದಿನಕ್ಕೊಂದು ಹೊಸ ಸವಾಲನ್ನು ಹಾಕುತ್ತಿವೆ. ಜನರು ಕೂಡ ಅಷ್ಟೇ ಆಸಕ್ತಿಯಿಂದ ಸವಾಲನ್ನು ಸ್ವೀಕರಿಸಿ, ಫೋಟೋ ಪದಗಳಲ್ಲಿ ಅಡಗಿರುವ ರಹಸ್ಯಗಳನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿರುವುದು ಕೂಡಾ ವಾಸ್ತವದ ವಿಷಯವಾಗಿದೆ.

Leave a Reply

Your email address will not be published.