ಹಂಸಲೇಖ ವಿಚಾರದಲ್ಲಿ ಕನ್ನಡ ಚಿತ್ರರಂಗ ಏಕೆ ಮೌನವಾಗಿದೆ?? ನಟ ಚೇತನ್ ಅಸಮಾಧಾನ

0 1

ಕನ್ನಡ ಚಿತ್ರರಂಗದ ಸುಪ್ರಸಿದ್ಧ ಸಂಗೀತ ನಿರ್ದೇಶಕ ನಾದ ಬ್ರಹ್ಮ ಖ್ಯಾತಿಯ ಹಂಸಲೇಖ ಅವರು ಕೆಲವು ದಿನಗಳ ಹಿಂದೆ ದಿವಂಗತ ಪೇಜಾವರ ಶ್ರೀಗಳ ಕುರಿತಾಗಿ ನೀಡಿದಂತಹ ಒಂದು ಹೇಳಿಕೆ ದೊಡ್ಡ ಸಂಚಲನವನ್ನು ಹುಟ್ಟು ಹಾಕಿದೆ. ಹಂಸಲೇಖ ಅವರು ಈ ಹೇಳಿಕೆಯ ಕುರಿತಾಗಿ ಕ್ಷಮಾಪಣೆಯನ್ನು ಕೇಳಿದ್ದಾರೆ. ಇದರ ಹೊರತಾಗಿಯೂ ದಿನದಿಂದ ದಿನಕ್ಕೆ ಈ ವಿಚಾರವು ದಿನದಿಂದ ದಿನಕ್ಕೆ ತೀ ವ್ರ ವಾದ ಸ್ವರೂಪವನ್ನು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಒಂದು ಕಡೆ ಹಂಸಲೇಖ ಅವರನ್ನು ಬೆಂಬಲಿಸುವ ವರ್ಗ, ಇನ್ನೊಂದು ಕಡೆ ಅವರನ್ನು ವಿ ರೋ ಧಿಸುವ ವರ್ಗ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಾಗ್ದಾಳಿ ನಡೆಸಿವೆ‌.

ಹಂಸಲೇಖ ಅವರ ಈ ವಿಚಾರ ಇನ್ನೂ ಕೂಡಾ ಚರ್ಚೆಯ ವಿಷಯವಾಗಿಯೇ ಉಳಿದಿದೆ. ನವೆಂಬರ್ 26 ರಂದು ಹಂಸಲೇಖ ಅವರನ್ನು ಬೆಂಬಲಿಸಿ ಕರ್ನಾಟಕದ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ಬೃಹತ್ ಜಾಥಾ ಒಂದಕ್ಕೆ ಕರೆಯನ್ನು ನೀಡಿತ್ತು. ಈ ಜಾಥಾ ಬೆಳಗ್ಗೆ 11 ಗಂಟೆಗೆ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ನಡೆಸಲಾಗಿ, ಇದರಲ್ಲಿ ಹಂಸಲೇಖ ಅವರಿಗೆ ಬೆಂಬಲವನ್ನು ನೀಡುತ್ತಾ ಕನ್ನಡದ ನಟ ಚೇತನ್ ಅವರು ಸಹಾ ಜಾಥಾದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಹಂಸಲೇಖ ಬೆಂಬಲಕ್ಕೆ ಬಾರದ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ.

ಚೇತನ್ ಅವರು, ಹಂಸಲೇಖ ಅವರ ಸಾಹಿತ್ಯ ವಲಯಕ್ಕೆ ಆಗಿರಬಹುದು, ಸಂಗೀತ ವಲಯಕ್ಕೆ ಆಗಿರಬಹುದು, ಅವರು ಮಾಡಿರುವ ಕೆಲಸ ಬಹಳ ದೊಡ್ಡದಾಗಿದೆ. ಆದರೆ ನೋವಿನ ವಿಚಾರ ಏನೆಂದರೆ ಎಲ್ಲೋ ಒಂದು ಕಡೆ ಈ ಸಂವಿಧಾನದ ಹಕ್ಕನ್ನು ಉಳಿಸಬೇಕು ಎಂದು ಚಿತ್ರರಂಗದ ಯಾರೂ ಕೂಡಾ ಏಕೆ ಧ್ವನಿಗೂಡಿಸಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಂಸಲೇಖ ಅವರ ಪರವಾಗಿ ಚಿತ್ರರಂಗ ಏಕೆ ಮಾತನಾಡುತ್ತಿಲ್ಲ?? ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ ಕಾಳಜಿ ಕಡಿಮೆ ಇದೆಯಾ?? ಅಥವಾ ಚಿತ್ರಂಗದ ಧೈರ್ಯ ಕಡಿಮೆ ಇದೆಯಾ?? ಸಿನಿಮಾಗಳಲ್ಲಿ ದೊಡ್ಡದಾಗಿ ಎಲ್ಲರೂ ಹೀರೋಗಳು ಹೊಡೆಯುವುದು, ಬಡಿಯುವುದನ್ನು ತೋರಿಸುತ್ತೇವೆ. ಆದರೆ ಹಂಸಲೇಖ ಅವರಿಗೆ ಈ ರೀತಿ ಅನ್ಯಾಯ ಆಗಿದ್ದು, ಅವರು ಕ್ಷಮಾಪಣೆಯನ್ನು ಕೇಳಿದ ಮೇಲೆ ಅವರನ್ನು ಬಿಟ್ಟು ಬಿಡಬೇಕು. ಅವರನ್ನು ಯಾವುದೇ ಕಾರಣಕ್ಕೂ ಈ ರೀತಿ ಅಪರಾಧಿ ಎಂಬುದಾಗಿ ಜೈಲಿಗೆ ಹಾಕುವುದನ್ನು ಯಾರೂ ಒಪ್ಪುವುದಿಲ್ಲ. ಅಂತಹುದರಲ್ಲಿ ಚಿತ್ರರಂಗ ಏಕೆ ನಿಶ್ಯಬ್ದವಾಗಿದೆ ಎನ್ನುವುದು ನನಗೆ ಬಹಳ ದುಃಖ ಆಗುತ್ತಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.