ಹಂದಿಯ ಮೇಲೆ ಮಹಿಳೆಗೆ ಇಷ್ಟೊಂದು ಪ್ರೀತೀನಾ?? ಹಂದಿಯ ಸಂತೋಷಕ್ಕಾಗಿ ಈಕೆ ಏನೇನೆಲ್ಲಾ ಮಾಡಿದ್ದಾರೆ ನೋಡಿ..

Written by Soma Shekar

Published on:

---Join Our Channel---

ಕೆಲವರಿಗೆ ಪ್ರಾಣಿಗಳನ್ನು ಸಾಕುವುದು ಎಂದರೆ ಬಹಳ ಇಷ್ಟ. ಸಾಮಾನ್ಯವಾಗಿ ಜನರು ಹೆಚ್ಚಾಗಿ ತಮ್ಮ ಮನೆಗಳಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಸಾಕುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಅಲ್ಲದೇ ಮನೆಯು ವಿಶಾಲವಾಗಿದ್ದರೆ, ಸಾಕಷ್ಟು ಜಾಗ ಇದ್ದರೆ ಅಂತಹವರು ಇನ್ನಿತರೆ ಸಾಕು‌ ಪ್ರಾಣಿಗಳನ್ನು ಸಾಕುವ ಆಲೋಚನೆಯನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆಯು ನಾಯಿ ಅಥವಾ ಬೆಕ್ಕಿನ ಬದಲಾಗಿ ತಮ್ಮ ಮನೆಯಲ್ಲಿ ಹಂದಿಯನ್ನು ಸಾಕಿಕೊಂಡಿದ್ದಾರೆ ಮತ್ತು ತಾನು ಸಾಕಿರುವ ಮುದ್ದಿನ ಹಂದಿಯನ್ನು ಬಹಳ ಪ್ರೀತಿಯಿಂದ ಬೆಳೆಸುತ್ತಿದ್ದಾರೆ.

51 ವರ್ಷ ವಯಸ್ಸಿನ ರೊಸೆಂಜೆಲಾ ಡಾಸ್ ಸ್ಯಾಂಟೋಸ್ ಲಾರಾ ವೃತ್ತಿಯಲ್ಲಿ ಒಬ್ಬ ಶಿಕ್ಷಕಿಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಅವರು ಮಾರುಕಟ್ಟೆಗೆ ಹೋದಂತಹ ಸಂದರ್ಭದಲ್ಲಿ ಅಲ್ಲಿ ಅವರ ಕಣ್ಣಿಗೆ ಒಂದು ಸಣ್ಣ ಹಂದಿ ಮರಿಯು ಕಂಡಿದೆ. ಅದನ್ನು ನೋಡಿ ಅದರ ಕಡೆಗೆ ಆಕರ್ಷಿತರಾದ ಲಾರಾ ಆ ಹಂದಿ ಮರಿಯನ್ನು ತಮ್ಮ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಅದನ್ನು ಮುದ್ದಿನಿಂದ ಸಾಕಲು ಪ್ರಾರಂಭಿಸಿದ ಲಾರಾ ಅವರಿಗೆ ಹಂದಿಮರಿ ಅಂದರೆ ಪಂಚಪ್ರಾಣ ಎನ್ನುವಂತಾಗಿದೆ.

ತಾವು ಸಾಕಿರುವ ಹಂದಿ ಮರಿಯನ್ನು ಬಹಳ ಪ್ರೀತಿಸುವ ಆಕೆ ಅದಕ್ಕೆ ಹೊಟ್ಟೆ ತುಂಬಾ ಊಟವನ್ನು ಹಾಕುತ್ತಾ ಪ್ರೀತಿಯನ್ನು ತೋರಿಸುತ್ತಾರೆ. ಆಕೆಯ ಈ ಪ್ರೀತಿ ಹಾಗೂ ಆರೈಕೆಯ ಫಲವಾಗಿ ಮೂರು ವರ್ಷದ ಅವಧಿಯಲ್ಲಿ ಹಂದಿಯ ತೂಕ 250 ಕಿಲೋ ಗ್ರಾಂ ಆಗಿದೆ. ಲಾರಾ ಹಂದಿಯನ್ನು ಬಹಳ ಮುದ್ದಿನಿಂದ ಸಾಕಿಕೊಂಡಿದ್ದಾರೆ. ಸಣ್ಣ ಹಂದಿಮರಿ ಮೂರು ವರ್ಷದ ನಂತರ ಭಾರಿ ಗಾತ್ರದ ಹಂದಿಯಾಗಿ ಪರಿವರ್ತನೆ ಹೊಂದಿದ್ದು, ಲಾರಾ ಅದನ್ನು ಪ್ರೀತಿಯಿಂದ ಲಿಲಿಕಾ ಎಂದು ಕರೆಯುತ್ತಾರೆ.

ದಿನವೊಂದಕ್ಕೆ ಐದರಿಂದ ಆರು ಕಿಲೋ ಗ್ರಾಂ ಗಳಷ್ಟು ಹಣ್ಣು-ತರಕಾರಿಗಳನ್ನು ಆಹಾರವಾಗಿ ನೀಡಿತ್ತಿದ್ದು, ದಿನಕಳೆದಂತೆ ಅದರ ಆಹಾರವು ಲಾರಾಗೆ ಹೊರೆಯಾಗಿ ಪರಿಣಮಿಸುತ್ತಿದೆ. ಆದರೂ ಹಂದಿಯ ಮೇಲಿರುವ ಅತೀವವಾದ ಪ್ರೀತಿಯಿಂದ ಅದರ ಅವಶ್ಯಕತೆಗಳನ್ನು ಅವರು ಪೂರೈಸುತ್ತಿದ್ದಾರೆ ಲಾರಾ. ಹಂದಿಗಾಗಿ ಮನೆಯಲ್ಲಿ ಪ್ರತ್ಯೇಕವಾದ ಕೋಣೆಯನ್ನು ವ್ಯವಸ್ಥೆ ಮಾಡಿಸಿದ್ದಾ,ರೆ ಹಂದಿಗೆ ಮಲಗಲು ಬೆಡ್ ಕೂಡಾ ಇದ್ದು ಅದರ ಕೋಣೆಯಲ್ಲಿ ಫ್ಯಾನ್ ಕೂಡ ಅಳವಡಿಸಲಾಗಿದೆ. ಲಾರಾ ಹಾಗೂ ಅವರ ಲಿಲಿಕಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Comment