ಸ್ವರ್ಗದಲ್ಲೂ ನೆಟ್ವರ್ಕ್ ಇದ್ಯಾ:ಸುಶಾಂತ್ ಫೇಸ್ ಬುಕ್ ಡಿಪಿ ಬದಲಾಗಿದ್ದು ನೋಡಿ, ಅಭಿಮಾನಿಗಳು ಶಾಕ್

0 2

ಬಾಲಿವುಡ್ ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದು ರಂ ತ ಸಾವು ನಿಜಕ್ಕೂ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಬಾಲಿವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದ್ದ ಯುವ ನಟ ಇದ್ದಕ್ಕಿದ್ದಂತೆ ಜೀವನವೇ ಬೇಡವೆಂದು ಎಲ್ಲವನ್ನೂ, ಎಲ್ಲರನ್ನೂ ಅಗಲಿ ಹೋಗುವ ನಿರ್ಧಾರವನ್ನು ಮಾಡವರೆನ್ನುವುದು ಸಹಾ ಊಹೆಗೆ ನಿಲುಕದ ವಿಷಯವಾಗಿತ್ತು. ಆದ್ದರಿಂದಲೇ ಸುಶಾಂತ್ ಅವರ ಸಾವಿನ ನಂತರ ಆ ಘಟನೆಯ ಸುತ್ತಾ ನೂರು ಅನುಮಾನ ಗಳ ಹುತ್ತವು ಬೆಳೆದುಕೊಂಡಿತ್ತು. ಬಹಳಷ್ಟು ಜನರ ಮೇಲೆ ಅನುಮಾನಗಳ ಮೋಡ ಕವಿಯಿತು, ಬಾಲಿವುಡ್ ನಲ್ಲಿ ಇರುವ ನೆಪೋಟೀಸಂ ಇದಕ್ಕೆ ಕಾರಣ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಪೋಸ್ಟ್ ಗಳನ್ನು ಹಾಕಿ ಅಸಮಾಧಾನ ಹೊರ ಹಾಕಿದ್ದರು.

ಇದೆಲ್ಲಾ ದಿನ ಕಳೆದಂತೆ ಕಡಿಮೆಯಾದರೂ, ಅಗಲಿದ ನಟನ ಸ್ಮರಣೆಗಳು ಮಾತ್ರ ಅಭಿಮಾನಿಗಳನ್ನು ಬಿಟ್ಟು ಹೋಗುವುದು ಸಾಧ್ಯವಾಗಿಲ್ಲ. ಈಗ ಇವೆಲ್ಲವುಗಳ ನಡುವೆ ದಿ.ಸುಶಾಂತ್ ಅವರ ಫೇಸ್ ಬುಕ್ ಖಾತೆಯಲ್ಲಿ ಅವರ ಡಿಪಿ ಬದಲಾವಣೆ ಆಗಿದ್ದನ್ನು ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ನೆಟ್ಟಿಗರು ಶಾಕ್ ಆಗಿದ್ದಾರೆ. ಡಿಪಿ ಬದಲಾಗಿದ್ದನ್ನು ನೋಡಿ ಕೆಲವರು ಏನು ಸ್ವರ್ಗದಲ್ಲೂ ನೆಟ್ವರ್ಕ್ ಸಿಗ್ತಾ ಇದ್ಯಾ?? ಎಂದು ಅವರು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವರು ಡಿಪಿ ಬದಲಾಗಿದ್ದು ನೋಡಿ ಶಾ ಕ್ ಆಗಿದೆ. ಸುಶಾಂತ್ ಅವರ ಖಾತೆಯನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.

ಸುಶಾಂತ್ ಅವರು ತಮ್ಮ ಖಾತೆಯನ್ನು ಹೇಗೆ ಬಳಸಲು ಸಾಧ್ಯ?? ಈಗ ಅವರು ಇಲ್ಲದೇ ಇರುವಾಗ ಅವರ ಖಾತೆಯನ್ನು ಯಾರು ನಿರ್ವಹಣೆ ಮಾಡುತ್ತಿರುವರು ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ. ವರದಿಗಳ ಪ್ರಕಾರ ಸುಶಾಂತ್ ಅವರ ನಿಧನಾನಂತರ ಅವರ ಎಲ್ಲಾ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅವರ ಆಪ್ತವಲಯವು ನಿರ್ವಹಿಸುತ್ತಿದೆ ಎನ್ನಲಾಗಿದೆ. ಸುಶಾಂತ್ ಅವರ ಖಾತೆಯ ಬಯೋ ವನ್ನು ಕೂಡಾ ಬದಲಾವಣೆ ಮಾಡಲಾಗಿದ್ದು, ಅವರ ಜನ್ಮ ದಿನಾಂಕ ಹಾಗೂ ನಿಧನ ಹೊಂದಿದ ದಿನಾಂಕವನ್ನು ಹಾಗೂ ಅವರ ವೃತ್ತಿಗನ್ನು ಅಲ್ಲಿ ತಿಳಿಸಲಾಗಿದೆ. ಸುಶಾಂತ್ ಅವರ ನೆನಪುಗಳನ್ನು ಹಸಿರು ಮಾಡುತ್ತಿರುವ ಅವರ ಆಪ್ತರ ತಂಡಕ್ಕೆ ಅನೇಕರು ಧನ್ಯವಾದಗಳನ್ನು ತಿಳಿಸಿದ್ದಾರೆ.

Leave A Reply

Your email address will not be published.