ಸ್ಯಾಂಡಲ್ವುಡ್ ಪದ್ಮಾವತಿ ರಮ್ಯಾರನ್ನು ಕಾಡಿದೆ ಮದುವೆ ಚಿಂತೆ: ಮದುವೆ ಯಾಕಾಗಿಲ್ಲ ಎಂದು ಹೇಳಿದ ನಟಿ
ಕನ್ನಡ ಸಿನಿಮಾ ರಂಗದಲ್ಲಿ ನಂಬರ್ ಒನ್ ನಟಿಯಾಗಿ ಮೆರೆದ ನಟಿ ರಮ್ಯ ಅವರು ಸಿನಿಮಾಗಳಿಂದ ದೂರ ಉಳಿದಿದ್ದರೂ ಸಹಾ ಅವರ ಚಾರ್ಮ್ ಕಡಿಮೆಯಾಗಿಲ್ಲ. ಸೋಶಿಯಲ್ ಮೀಡಿಯಾ ದಲ್ಲಿ ಸಕ್ರಿಯವಾಗಿರೋ ನಟಿಯನ್ನು ಹಿಂಬಾಲಿಸುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇನ್ನು ನಟಿ ರಮ್ಯಾ ಅವರು ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಆಗಾಗ ಸುದ್ದಿಗಳಂತೂ ಹರಿದಾಡುತ್ತಲೇ ಇರುತ್ತವೆ. ನಟಿಯು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ಫೋಟೋಗಳ ಮತ್ತು ವೀಡಿಯೋಗಳನ್ನು ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾ ಇರುತ್ತಾರೆ. ಜೊತೆಗೆ ಅನೇಕ ವಿಚಾರಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇತ್ತೀಚಿಗೆ ನಟಿ ರಮ್ಯಾ ಅವರು ತಮ್ಮ ಮದುವೆ ವಿಚಾರವಾಗಿ ಮಾತನಾಡುತ್ತಿರುವುದು ಅನೇಕರಿಗೆ ವಿಶೇಷವಾಗಿ ಅವರ ಅಭಿಮಾನಿಗಳಿಗೆ ಅಚ್ಚರಿ ಯನ್ನು ಮೂಡಿಸುತ್ತಿದೆ. ಹೌದು ಇತ್ತೀಚಿಗೆ ನಟಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮದುವೆ ಕುರಿತಾದ ಪೋಸ್ಟ್ ಗಳು ಹರಿದಾಡುತ್ತಿದೆ. ಹೋದ ತಿಂಗಳಲ್ಲಿ ನಟಿ ಒಂದು ಪೋಸ್ಟ್ ನಲ್ಲಿ ತನ್ನ ಹುಡುಗ ಹೇಗಿರಬೇಕು? ಅವರ ಗುಣಗಳು ಏನು ? ಎನ್ನುವ ಅರ್ಥದಲ್ಲಿ ವೀಡಿಯೋ ಶೇರ್ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದರು. ಅಲ್ಲದೇ ಆ ವೀಡಿಯೋ ವೈರಲ್ ಸಹಾ ಆಗಿತ್ತು. ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಗಳನ್ನು ಹರಿಸಿದ್ದರು.
ಇನ್ನು ಈ ಬಾರಿ ನಟಿ ರಮ್ಯಾ ಅವರು ತಾನೇಕೆ ಮದುವೆಯಾಗಿಲ್ಲ ಎನ್ನುವ ವಿಚಾರಕ್ಕೆ ಒಂದು ಹಾಡಿನ ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ರಮ್ಯಾ ಅವರು ಶೇರ್ ಮಾಡಿರುವ ಹಾಡಿನ ಅರ್ಥವನ್ನು ಗಮನಿಸಿದರೆ, ನನ್ನ ಸೋಲ್ ಮೇಟ್ ಸತ್ತಿರಬಹುದು. ಬಹುಶಃ ನನಗಾಗಿ ಅಂತಹ ಒಂದು ಆತ್ಮ ಇಲ್ಲದೇ ಇರಬಹುದು ಎನಿಸುತ್ತಿದೆ ಎನ್ನುವ ಅರ್ಥವನ್ನು ನೀಡುತ್ತಿದೆ. May be my soul died ಎನ್ನುವ ಹಾಡಿಗೆ ರಮ್ಯಾ ಅವರು ಲಿಪ್ ಸಿಂಕಿಂಗ್ ಮಾಡಿದ್ದು, ಈ ವೀಡಿಯೋ ನೋಡಿ ಅವರ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಅನೇಕರು ಕಾಮೆಂಟ್ ಗಳನ್ನು ಸಹಾ ಮಾಡಿದ್ದಾರೆ.