ಸ್ಯಾಂಡಲ್ವುಡ್ ನಲ್ಲಿ ಒಗ್ಗಟ್ಟಿಲ್ಲ ಎನ್ನುತ್ತಲೇ ನಟರ ಅಭಿಮಾನಿಗಳ ಬಗ್ಗೆ ಅಸಾಮಾಧಾನ ಪಟ್ಟ ಜೋಗಿ ಪ್ರೇಮ್

0 1

ಸ್ಯಾಂಡಲ್ವುಡ್ ನ ಜನಪ್ರಿಯ ನಿರ್ದೇಶಕ, ಜೋಗಿ ಪ್ರೇಮ್ ಅವರ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಏಕ್ ಲವ್ ಯಾ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಆದರೆ ಇದೇ ವೇಳೆ ಸಿನಿಮಾ ಕುರಿತಾಗಿ ಎದುರಾಗಿರುವ ಒಂದು ದೊಡ್ಡ ಸಮಸ್ಯೆ ಬಗ್ಗೆ ನಿರ್ದೇಶಕ ಪ್ರೇಮ್ ಅವರು ಮಾತನಾಡಿದ್ದಾರೆ. ಹೌದು ಜನವರಿ 24 ರಂದು ಏಕ್ ಲವ್ ಯಾ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ಈಗ ಚಿತ್ರ ತಂಡವು ಪೈರಸಿ ಬಗ್ಗೆ ಹಾಗೂ ಕನ್ನಡ ಸಿನಿಮಾ ರಂಗದ ಒಗ್ಗಟ್ಟಿನ ಬಗ್ಗೆ ಮಾತನಾಡುವ ಮೂಲಕ ಗಮನ ಸೆಳೆದಿದೆ.

ಪೈರಸಿ ಎನ್ನುವ ಪಿ ಡು ಗು ಸಿನಿಮಾ ರಂಗದಲ್ಲಿ ಕಳೆದ ಹಲವು ವರ್ಷಗಳಿಂದ ಕಾಡುತ್ತಲಿದೆ. ಇದೀಗ ಅದೇ ಪಿ ಡು ಗು ಏಕ್ ಲವ್ ಯಾ ಸಿನಿಮಾವನ್ನು ಸಹಾ ಕಾಡುತ್ತಿದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಅವರು ತಮ್ಮ ಬೇಸರ ಮತ್ತು ಅಸಮಾಧಾನವನ್ನು ಹೊರ ಹಾಕಿದ್ದಾರೆ.‌ ಅವರು ಮಾತನಾಡುತ್ತಾ, ನಮ್ಮ ಸಿನಿಮಾ ಬಿಡುಗಡೆಯಾದ ದಿನವೇ ಪೈರಸಿ ಆಗಿದೆ. ಇದನ್ನು ಫಿಲ್ಮ್ ಚೇಂಬರ್ ಆಗಲೀ, ರಾಜ್ಯ ಸರ್ಕಾರವೇ ಆಗಲಿ ಬಗೆಹರಿಸುವುದಕ್ಕೆ ಆಗುತ್ತಿಲ್ಲ. ಇದೇ ವೇಳೆ ಚಂದನವನದಲ್ಲಿ ಒಗ್ಗಟ್ಟು ಇದೆ ಎನ್ನೋದು ಸುಳ್ಳು ಎಂದಿದ್ದಾರೆ.

ಈ ಮೂಲಕ ಅವರು ಕನ್ನಡ ಸಿನಿಮಾ ರಂಗದಲ್ಲಿ ಮನಸ್ತಾಪಗಳಿವೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಪೈರಸಿ ವಿಚಾರವಾಗಿ ಯಾರೂ ಒಗ್ಗಟ್ಟನ್ನು ಪ್ರದರ್ಶಿಸುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಕೆಲಸಗಳು ಇರುತ್ತವೆ. ಅಭಿಮಾನಿಗಳು ಸ್ಟಾರ್ ನಟರ ಹೆಸರಿನಲ್ಲಿ, ನಟರ ಮಧ್ಯೆ ಮನಸ್ತಾಪಗಳು ಬರುವ ಹಾಗೆ ಮಾಡ್ತಾ ಇದ್ದು, ಮೊದಲು ಇದನ್ನು ನಿಲ್ಲಿಸಬೇಕು ಎನ್ನುವ ಮಾತನ್ನು ಅವರು ಹೇಳಿದ್ದಾರೆ. ನಟಿ ರಕ್ಷಿತಾ ಅವರು ಸಹಾ ಈ ವೇಳೆ ಮಾತನಾಡಿ ಪೈರಸಿ ಬಗ್ಗೆ ಮಾತನಾಡಿದ್ದಾರೆ.

ನಟಿ, ನಿರ್ಮಾಪಕಿ ರಕ್ಷಿತ ಅವರು ಮಾತನಾಡುತ್ತಾ, ಪೈರೆಸಿ ಎನ್ನುವುದು ಒಂದು ದೊಡ್ಡ ಮಾ ಫಿ ಯಾ ಆಗಿದೆ. ಅದನ್ನು ತಡೆಯುವುದು ಒಂದು ದೊಡ್ಡ ತಲೆ ನೋವಾಗಿದೆ. ಅಲ್ಲದೇ ಪೈ ರ ಸಿ ಮಾಡುವವರು ನೇರವಾಗಿ ನಟರಿಗೇ ಮೆಸೆಜ್ ಮಾಡುವಷ್ಟು ಬೆಳೆದಿದ್ದಾರೆ. ಇದನ್ನು ತಡೆಯುವಲ್ಲಿ ಸರ್ಕಾರವು ಮುಂದಾಗಬೇಕು ಎನ್ನುವ ಮಾತನ್ನು ರಕ್ಷಿತಾ ಅವರು ಹೇಳಿದ್ದಾರೆ.

Leave A Reply

Your email address will not be published.