ಸ್ಯಾಂಡಲ್ವುಡ್ ನಟ ಚೇತನ್ ನಾಪತ್ತೆ: ಪೋಲಿಸರಿಂದ ಕಿಡ್ನಾಪ್ ಎಂದು ಪತ್ನಿಯಿಂದ ಆರೋಪ

Entertainment Featured-Articles News

ಸ್ಯಾಂಡಲ್ವುಡ್ ನಟ ಆ ದಿನಗಳು ಖ್ಯಾತಿಯ ಚೇತನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ನಟನಾಗಿದ್ದಾರೆ. ಅವರು ಸಿನಿಮಾ ಮಾತ್ರವಲ್ಲದೇ ಹಲವು ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗುವುದರ ಮೂಲಕವೂ ಜನರ ಗಮನವನ್ನು ಸೆಳೆದಿದ್ದಾರೆ. ಚೇತನ್ ಅವರು ಹಲವು ಸೂಕ್ಷ್ಮ ವಿಚಾರಗಳ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಹಂಚಿಕೊಳ್ಳುತ್ತಾರೆ. ಅನೇಕ ಸಂದರ್ಭಗಳಲ್ಲಿ ನಟ ಚೇತನ್ ಅವರು ನೀಡುವಂತಹ ಹೇಳಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪೋಸ್ಟ್ಗಳು ದೊಡ್ಡ ಚರ್ಚೆಯನ್ನು ಸಹಾ ಹುಟ್ಟುಹಾಕುತ್ತದೆ.

ಇದೀಗ ನಟ ಚೇತನ್ ಅವರು ನಾಪತ್ತೆಯಾಗಿದ್ದಾರೆ ಎಂದು ಅದರ ಪತ್ನಿ ಠಾಣೆಯ ಮೆಟ್ಟಿಲನ್ನು ಏರಿದ್ದಾರೆ. ಚೇತನ್ ಅವರ ಪತ್ನಿ ಮೇಘಾ ಚೇತನ್ ಅವರು ತಮ್ಮ ಪತಿಯ ಸಾಮಾಜಿಕ ಜಾಲತಾಣದ ಪೇಜ್ ನ ಮೂಲಕ ಲೈವ್ ಬಂದಿದ್ದು, ಚೇತನ್ ಅವರು ಕಾಣೆಯಾಗಿದ್ದಾರೆ ಎನ್ನುವ ವಿಷಯವನ್ನು ಹಂಚಿಕೊಂಡಿದ್ದಾರೆ. ಮೇಘ ಅವರು ಮಾತನಾಡುತ್ತಾ ಚೇತನ್ ಅವರು ಮನೆಯಲ್ಲಿಲ್ಲ ಅವರನ್ನು, ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಮನೆ ಕೆಲಸದವರು ಹೇಳಿದರು ಎಂದಿದ್ದಾರೆ.

ಚೇತನ್ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅವರ ಗನ್ ಮ್ಯಾನ್ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ. ಅವರು ಎಲ್ಲಿದ್ದಾರೆ? ಎನ್ನುವುದು ನನಗೆ ತಿಳಿದಿಲ್ಲ. ಆದ್ದರಿಂದಲೇ ನಾನು ನಾನು ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಗೆ ಬಂದಿದ್ದೇನೆ. ಆದರೆ ಇಲ್ಲಿ ಪೊಲೀಸರು ಅವರು ನಮ್ಮ ಕಸ್ಟಡಿಯಲ್ಲಿಲ್ಲ ಎಂದು ಹೇಳುತ್ತಿದ್ದಾರೆ. ಯಾವುದೋ ವಿಚಾರಣೆಗಾಗಿ ಅವರನ್ನು ಬೇರೆಲ್ಲಿಗೋ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಪೋಲೀಸಿನವರು ಯಾವುದೇ ನೋಟಿಸ್ ನೀಡಿಲ್ಲ, ಏನು ಹೇಳಿಲ್ಲ, ಸುಮ್ಮನೆ ಬಂದು ಅವರನ್ನು ಕರೆದುಕೊಂಡು ಹೋಗಿದ್ದಾರೆ.

ಈಗ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಅವರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಇದು ಒಂದು ರೀತಿಯಲ್ಲಿ ಕಿ ಡ್ನಾ ಪ್ ಆಗಿದೆ. ಅವರು ನನ್ನ ಗಂಡನನ್ನು ಕಿಡ್ನಾಪ್ ಮಾಡಿದ್ದಾರೆ. ಒಬ್ಬ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಳ್ಳಬೇಕಾದರೆ, ಕಾನೂನಿನ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವರ ವಕೀಲರೊಡನೆ ಮಾತನಾಡಲು ಅವಕಾಶ ನೀಡಬೇಕು, ಕುಟುಂಬದ ಸದಸ್ಯರಿಗೆ ತಿಳಿಸಬೇಕು ಆದರೆ ಅದು ಯಾವುದನ್ನು ಮಾಡದೇ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಯಾರೂ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಮೇಘ ತಮ್ಮ ಅಳಲನ್ನು ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *