ಸ್ಯಾಂಡಲ್ವುಡ್ ನಟ(Sandalwood Actor) ಹಾಗೂ ಸಾಮಾಜಿಕ ಹೋರಾಟಗಾರ(Social Activist) ಎಂದೂ ಕೂಡಾ ಗುರ್ತಿಸಿಕೊಂಡಿರುವ ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್(Chethan) ಅವರು ತಮ್ಮ ಸಿನಿಮಾ ವಿಷಯಗಳಿಗಿಂತ ಹೆಚ್ಚಾಗಿ ತಾವು ನೀಡುವ ಹೇಳಿಕೆಗಳು ಹಾಗೂ ಅದರಿಂದ ಉದ್ಭವಿಸುವ ವಿ ವಾ ದ ಗಳು, ಹುಟ್ಟು ಹಾಕುವ ಚರ್ಚೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಸದಾ ಒಂದಲ್ಲಾ ಒಂದು ಹೇಳಿಕೆ ನೀಡುವ ನಟ ಈಗ ಹೊಸದೊಂದು ಹೇಳಿಕೆಯನ್ನು ನೀಡಿದ್ದು, ಮತ್ತೊಮ್ಮೆ ಇದು ಸೋಶಿಯಲ್ ಮೀಡಿಯಾಗಳಲ್ಲಿ ಈಗ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ.
ಕನ್ನಡ ಸಿನಿಮಾ ರಂಗದ ದಿಗ್ಗಜ ನಟ, ಸಾಹಸಸಿಂಹ ಎಂದೇ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುವ, ಅಸಂಖ್ಯಾತ ಅಭಿಮಾನಿಗಳ ಅಭಿಮಾನ ನಟನಾಗಿರುವ ದಿವಂಗತ ಡಾ. ವಿಷ್ಣುವರ್ಧನ್ (VishnuVardhan) ಅವರ ಸ್ಮಾರಕವನ್ನು ನಿನ್ನೆಯಷ್ಟೇ ರಾಜ್ಯದ ಮುಖ್ಯಮಂತ್ರಿ ಅವರಾದ ಮಾನ್ಯ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದ್ದು, ಇದು ಅಭಿಮಾನಿಗಳಿಗೆ ಬಹಳ ಸಂತೋಷವನ್ನು ನೀಡಿದೆ. ಈ ಸ್ಮಾರಕ ಉದ್ಘಾಟನೆಯ ಬೆನ್ನಲ್ಲೇ ಇದೀಗ ನಟ ಚೇತನ್ ಅವರು ಸ್ಮಾರಕಗಳ ವಿಚಾರವಾಗಿ ನೀಡಿದ ಹೇಳಿಕೆ ಈಗ ವೈರಲ್ ಆಗಿ, ಚರ್ಚೆಗಳನ್ನು ಹುಟ್ಟು ಹಾಕಿದೆ.
ಹೌದು, ನಟ ಚೇತನ್ ಅವರು ಚಲನಚಿತ್ರ ತಾರೆಯರ ಸ್ಮಾರಕಗಳಿಗೆ ಸಾರ್ವಜನಿಕರ ಭೂಮಿ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಬಾರದು ಎಂದು ಟ್ವೀಟ್ ಒಂದನ್ನು ಮಾಡಿದ್ದಾರೆ. ಅಲ್ಲದೇ ಅವರು ಚಲನಚಿತ್ರ ತಾರೆಯರು-ಅನೇಕ ಕನ್ನಡಿಗರಂತೆ ದುಡಿಯುವವರು/ಸಂಪಾದಿಸುವವರು. ಈಗಾಗಲೇ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ಚಲನಚಿತ್ರಗಳ ಯಶಸ್ಸಿಗೆ ಅನಗತ್ಯ ಶ್ರೇಯಸ್ಸನ್ನು ಪಡೆದಿದ್ದಾರೆ.ಕರ್ನಾಟಕ ಕಲೆ/ಸಾಹಿತ್ಯ/ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಯನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ.