ಸ್ಪೀಡ್ ಹೆಚ್ಚಿಸಿದ ಸಮಂತಾ: ದಕ್ಷಿಣದ ಮತ್ತೊಂದು ಭಾಷೆಯ ಸಿನಿಮಾ ಇಂಡಸ್ಟ್ರಿಗೆ ಸ್ಯಾಮ್ ಎಂಟ್ರಿ!!!

0 4

ಟಾಲಿವುಡ್ ನ ಸ್ಟಾರ್ ನಟಿ ಸಮಂತ ತಮ್ಮ ವೃತ್ತಿಜೀವನದ ವೇಗವನ್ನು ಮತ್ತೊಮ್ಮೆ ಹೆಚ್ಚಿಸಿದ್ದಾರೆ. ವಿಚ್ಛೇದನ ನಿರ್ಧಾರದ ನಂತರ ನಟಿ ಸಮಂತಾ ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ತನಗೆ ಸಿಗುತ್ತಿರುವ ಹೊಸ ಅವಕಾಶಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿರುವ ಸಮಂತಾ ಹೆಚ್ಚು ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಶಾಕುಂತಲಂ ಸಿನಿಮಾ ಮುಗಿಸಿರುವ ಸಮಂತಾ ಖುಷಿ ಹಾಗೂ ಯಶೋದಾ ಸಿನಿಮಾಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ತೆಲುಗಿನಲ್ಲಿ ಮಾತ್ರವೇ ಅಲ್ಲದೇ ಅತ್ತ ತಮಿಳಿನಲ್ಲಿ ಹಾಗೂ ಮತ್ತೊಂದು ಕಡೆ ಬಾಲಿವುಡ್ ನಲ್ಲಿ ಅವಕಾಶಗಳನ್ನು ಪಡೆದುಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ ನಟಿ ಸಮಂತಾ.

ದಕ್ಷಿಣ ಸಿನಿಮಾರಂಗದಲ್ಲಿ ತನಗಾಗಿ ಒಂದು ಸ್ಥಾನ ಮತ್ತು ವರ್ಚಸ್ಸನ್ನು ಪಡೆದುಕೊಂಡಿರುವ ನಟಿ ಸಮಂತಾ ತೆಲುಗು, ತಮಿಳು ಭಾಷೆಗಳಲ್ಲಿ ಮಾತ್ರವೇ ನಟಿಸಿದ್ದು, ಇನ್ನೂ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಯಾವ ಸಿನಿಮಾದಲ್ಲೂ ಕೂಡಾ ಕಾಣಿಸಿಕೊಂಡಿಲ್ಲ. ಆದರೆ ಈಗ ಹೊರಬಂದಿರುವ ಹೊಸ ಸುದ್ದಿಗಳ ಪ್ರಕಾರ ನಟಿ ಸಮಂತಾ ಮಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ ಎನ್ನಲಾಗಿದೆ. ತಮ್ಮ ಮೊದಲ ಮಲಯಾಳಂ ಸಿನಿಮಾಕ್ಕಾಗಿ ಸಿದ್ದತೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಹೊರಬಂದಿರುವ ತಾಜಾ ಸುದ್ದಿಗಳ ಪ್ರಕಾರ ಮಲಯಾಳಂ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಶಾಜಿ ಕೈಲಸ್ ನಿರ್ದೇಶನ ಮಾಡಲು ಹೊರಟಿರುವ ಹೊಸ ಸಿನಿಮಾ ಪಿಂಕ್ ಪೊಲೀಸ್ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಮಹಿಳಾ ಪ್ರಧಾನ ಕಥೆಯನ್ನು ಒಳಗೊಂಡಿದ್ದು ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ‌. ಸಿನಿಮಾದ ವಿಷಯವಾಗಿ ಚಿತ್ರತಂಡ ಈಗಾಗಲೇ ನಟಿಯನ್ನು ಸಂಪರ್ಕಿಸಿ ಮಾತುಕತೆಯನ್ನು ಸಹಾ ನಡೆಸಿದೆ ಎಂದು ತಿಳಿದುಬಂದಿದೆ‌‌.

ಸಿನಿಮಾದ ಕಥೆಯ ಜೊತೆಗೆ ತನ್ನ ಪಾತ್ರದ ವೈವಿಧ್ಯತೆಯನ್ನು ಕಂಡು ಬಹಳ ಮೆಚ್ಚುಗೆ ನೀಡಿರುವ ಸಮಂತಾ ಈ ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಿನಿಮಾ ನಿರ್ಮಾಪಕರು ಈ ಸಿನಿಮಾವನ್ನು ಮಲಯಾಳಂ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಕೂಡಾ ಬಿಡುಗಡೆ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಸಮಂತಾ ಅವರು ನಟಿಸುತ್ತಿರುವ ಸಿನಿಮಾಗಳ ಚಿತ್ರೀಕರಣ ಮುಗಿದ ನಂತರ ಈ ವರ್ಷದ ಕೊನೆಯಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗಿದೆ.

Leave A Reply

Your email address will not be published.