ಸ್ಪಷ್ಟನೆ, ವಿವರಣೆ ನೀಡಲು ಸಮಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ: ಸಂಜನಾ ಗಲ್ರಾನಿ
ಸ್ಯಾಂಡಲ್ವುಡ್ ನ ಡ್ರ” ಗ್ಸ್ ಪ್ರಕರಣದ ವಿಚಾರವು ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಎಫ್ಎಸ್ಎಲ್ ವರದಿಯು ಈ ಇಬ್ಬರೂ ನಟಿಯರೂ ಡ್ರ ಗ್ಸ್ ಸೇವನೆ ಮಾಡಿರುವುದು ನಿಜವೆಂದು ದೃಢಪಟ್ಟಿದೆ. ಈ ವಿಷಯ ಎಲ್ಲೆಡೆ ಸುದ್ದಿಯಾಗುತ್ತಿರುವಾಗಲೇ ನಟಿ ಸಂಜನಾ ಗಲ್ರಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹೌದು ನಟಿ ಸಂಜನಾ ಗಲ್ರಾನಿ ಅವರು ತಮ್ಮ ಪೋಸ್ಟ್ ನಲ್ಲಿ, ನನಗೀಗ ಸ್ಪಷ್ಪನೆ ಹಾಗೂ ವಿವರಣೆ ನೀಡಲು ಸಮಯವೂ ಇಲ್ಲ, ಅದರ ಅನಿವಾರ್ಯತೆಯೂ ಇಲ್ಲ, ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ವರದಿಯು ದೃಢ ಪಟ್ಟ ಹಿನ್ನೆಲೆಯಲ್ಲಿ ಸುದ್ದಿ ಮಾದ್ಯಮಗಳಲ್ಲಿ ನಿನ್ನೆಯಿಂದಲೇ ಈ ವಿಷಯ ಸಾಕಷ್ಟು ಚರ್ಚೆಗಳಿಗೆ ಕಾರಣವಾದ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದು, ಸ್ನೇಹಿತರೇ ನನ್ನ ಮೇಲಿನ ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ಒಂದು ಕಥೆಗೆ ಯಾವಾಗಲೂ ಎರಡು ಭಾಗಗಳಿರುತ್ತವೆ. ಒಂದು ಭಾಗಕ್ಕೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ. ಇನ್ನೊಂದು ಭಾಗ ಸಮಯ ಬಂದಾಗ ಬಹಿರಂಗವಾಗುತ್ತದೆ. ನೀವೆಲ್ಲರೂ ಗಮನಿಸಿರುವಂತೆ ನಾನು ತುಂಬಾ ಬ್ಯುಸಿ ಜೀವನವನ್ನು ನಿಭಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ನನ್ನ ಕೆಲಸ, ನನ್ನ ಫೌಂಡೇಶನ್ ಕೆಲಸಗಳು, ಹೊಸ ಸಿನಿಮಾ ಕೆಲಸದ ಜೊತೆ ಜೊತೆಗೆ ನಾನು ಕುಟುಂಬದ ಜೊತೆಗೂ ಸಮಯವನ್ನು ಕಳೆಯುತ್ತಿದ್ದೇನೆ. ಆದ್ದರಿಂದಲೇ ಈಗ ನನಗೆ ಈ ವಿಚಾರದಲ್ಲಿ ವಿವರಣೆ ಹಾಗೂ ಸ್ಪಷ್ಟನೆ ಕೊಡಲು ಸಮಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ ಎಲ್ಲದಕ್ಕೂ ಸಹಾ ಸಮಯವೇ ಉತ್ತರ ನೀಡುತ್ತದೆ ಎಂದು ಬರೆದುಕೊಂಡು ಸೋಶಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ತಮ್ಮ ಈ ಪೋಸ್ಟ್ ಮೂಲಕ ಕಥೆಗೆ ಇನ್ನೊಂದು ಭಾಗವೂ ಇದೆ ಎನ್ನುವ ಸುಳಿವನ್ನು ಸಂಜನಾ ಗಲ್ರಾನಿ ನೀಡಿರುವುದನ್ನು ಸಹಾ ನಾವು ಗಮನಿಸಬಹುದಾಗಿದೆ.