ಸ್ತ್ರೀಯರ ಅಪಮಾನ ಮಾಡಿದವರ ಪತನ ನಿಶ್ಚಿತ: ಮತ್ತೆ ವೈರಲ್ ಆಯ್ತು ಕಂಗನಾ ವೀಡಿಯೋ!!

Entertainment Featured-Articles Movies News

ಮಹಾರಾಷ್ಟ್ರದಲ್ಲಿ ಸರ್ಕಾರದ ಪತನ ಆರಂಭವಾದ ಕೂಡಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ಹೇಳಿದ್ದ ಮಾತೊಂದು ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ವಿಚಾರವಾಗಿ ನಟಿ ಕಂಗನಾ ಮಹಾರಾಷ್ಟ್ರ ಸರ್ಕಾರದ ವಿ ರು ದ್ಧ ಕಿಡಿಕಾರಿದ್ದರು. ಆ ಸಂದರ್ಭದಲ್ಲಿ ನಟಿಯು ಯಾವಾಗ ಸರ್ಕಾರದ ವಿ ರು ದ್ಧ ಮಾತನಾಡಿ, ಆ ವಿಚಾರ ದೊಡ್ಡು ಸುದ್ದಿಯಾಯಿತೋ ಆಗ ಸರ್ಕಾರ ಕೂಡಾ ಒಂದು ದೊಡ್ಡ ಹೆಜ್ಜೆ ಇಡುವ ಮೂಲಕ ಸುದ್ದಿಯಾಗಿತ್ತು.

ಕಂಗನಾ ಹೇಳಿಕೆಗಳ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವು ನಟಿ ಕಂಗನಾ ಅವರ ಮನೆಯು ನಿಯಮಗಳ ಅನುಸಾರ ನಿರ್ಮಾಣವಾಗಿಲ್ಲ, ನಟಿಯ ಮನೆಯು ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ಹೇಳಿದ ಸರ್ಕಾರದ ವತಿಯಿಂದ ಬಿಎಂಸಿ ನಟಿಯ ಮನೆಯನ್ನು ಕೆಡವಿತ್ತು. ಈ ಘಟನೆಯ ನಂತರ ನಟಿ ಕಂಗನಾ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ತಮ್ಮ ಮನೆಯ ಮೇಲೆ ಬಿಎಂಸಿ ಮಾಡಿದ ಕೃತ್ಯಕ್ಕೆ ವೀಡಿಯೋ ಒಂದರ ಮೂಲಕ ನಟಿ ಮಾತನಾಡಿ ಅಸಮಾಧಾನವನ್ನು ತೋಡಿಕೊಂಡಿದ್ದರು.

ನಟಿ ಕಂಗನಾ ತಮ್ಮ ಅಸಮಾಧಾನವನ್ನು ಹೊರಹಾಕುತ್ತಾ, ನೆನಪಿರಲಿ ಉದ್ದವ್ ಠಾಕ್ರೇಜಿ ಇಂದು ನನ್ನ ಮನೆಯನ್ನು ಕೆಡವಿದ್ದೀರಿ, ನೋಡುತ್ತಿರಿ ಮುಂದೊಂದು ದಿನ ನಿಮ್ಮ ದುರಹಂಕಾರ ನಿಮ್ಮನ್ನು ನಾಶ ಮಾಡುತ್ತದೆ ಎಂದು ಹೇಳಿದ್ದರು. ಇದೇ ವೀಡಿಯೋ ಜೊತೆಗೆ ಇನ್ನೊಂದು ವೀಡಿಯೋ ಸಹಾ ವೈರಲ್ ಆಗಿದೆ. ಅದರಲ್ಲಿ ನಟಿ ಕಂಗನಾ ಇತಿಹಾಸವನ್ನು ಉದಾಹರಣೆ ನೀಡುತ್ತಾ ಹೇಳಿರುವ ಮಾತುಗಳ ವೀಡಿಯೋ ಸಹಾ ವೈರಲ್ ಆಗಿದ್ದು, ಅದಕ್ಕೂ ಮೆಚ್ಚುಗೆಗಳು ಹರಿದು ಬರುತ್ತಲಿವೆ.

ಹೌದು, ನಟಿ ಕಂಗನಾ ಯಾರು ಸ್ತ್ರೀಯರಿಗೆ ಅಪಮಾನ ಮಾಡುವರೋ ಅವರ ಪತನ ನಿಶ್ಚಿತ, ಸೀತೆಗೆ ಅವಮಾನ ಮಾಡಿದ ರಾವಣ, ದ್ರೌಪದಿಗೆ ಅವಮಾನ ಮಾಡಿದ ಕೌರವರು ನಾಶವಾದರು. ನಾನು ದೇವಿಯಲ್ಲ ಆದರೆ ನಾನೊಬ್ಬ ಮಹಿಳೆ, ನನ್ನ ಆಲೋಚನೆಗೆ ತಕ್ಕಂತೆ ಮಾತನಾಡುತ್ತೇನೆ. ಒಬ್ಬ ಮಹಿಳೆಯಾಗಿ ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳುತ್ತೇನೆ. ಆದರೆ ಯಾವತ್ತು ನೀವು ಮಹಿಳೆಯರಿಗೆ ಮಾರ್ಯದೆ ನೀಡುವುದಿಲ್ಲವೋ ನಿಮ್ಮ ನಾಶ ಖಂಡಿತವಾಗಿರುತ್ತದೆ ಎಂದು ಹೇಳಿದ್ದರು. 

Leave a Reply

Your email address will not be published.