ಸ್ಟಾರ್ ನಿರೂಪಕಿಗೆ ಬಿಗ್ ಬಾಸ್ ಗಾಳ: ದೊಡ್ಡ ಸಂಭಾವನೆ ಆಫರ್, ಬಿಗ್ ಬಾಸ್ ಗೆ ಬರ್ತಾರಾ ಆ ನಿರೂಪಕಿ?

Entertainment Featured-Articles Movies News

ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರವಾಗುವ ಎಲ್ಲಾ ಭಾಷೆಗಳಲ್ಲಿಯೂ ಸಹಾ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕನ್ನಡದಲ್ಲಿ ಬಿಗ್ ಬಾಸ್ ಈಗಾಗಲೇ ಯಶಸ್ವಿ ಎಂಟು ಸೀಸನ್ ಗಳನ್ನು ಮುಗಿಸಿ, ಒಂಬತ್ತನೇ ಸೀಸನ್ ಗೆ ಸಕಲ ಸಿದ್ಧತೆಗಳು ನಡೆದಿರುವುದು ಮಾತ್ರವೇ ಅಲ್ಲದೇ ಈ ಬಾರಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಸಹಾ ಓಟಿಟಿ ಯಲ್ಲಿ ಬಿಗ್ ಬಾಸ್ ಬರುತ್ತಿದ್ದು, ಈಗಾಗಲೇ ಪ್ರೋಮೋ ಮತ್ತು ಶೋ ಪ್ರಸಾರ ಆರಂಭಿಸುವ ದಿನಾಂಕವನ್ನು ಸಹಾ ಘೋಷಣೆ ಮಾಡಿದೆ ವಾಹಿನಿ. ಇನ್ನು ತೆಲುಗು ಭಾಷೆಯಲ್ಲಿ ಸಹಾ ಬಿಗ್ ಬಾಸ್ ಉತ್ತಮ ಕ್ರೇಜ್ ಪಡೆದಿರುವ ಶೋ ಆಗಿದೆ.

ಮೊದಲ ಸೀಸನ್ ತೆಲುಗಿನ ಸ್ಟಾರ್ ನಟ ಎನ್‌ಟಿಆರ್ ಅವರ ನಿರೂಪಣೆಯೊಂದಿಗೆ ಆರಂಭವಾಗಿ ಅನಂತರ ನಟ ನಾನಿ, ತದ ನಂತರ ನಟ ನಾಗಾರ್ಜುನ ಅವರ ನಿರೂಪಣೆಯಲ್ಲಿ ಇದುವರೆಗೆ 5 ಸೀಸನ್‌ಗಳನ್ನು ಪೂರ್ಣಗೊಳಿಸಿರುವ ಬಿಗ್ ಬಾಸ್ ಈಗ ಆರನೇ ಸೀಸನ್ ಗೆ ಸಿದ್ಧತೆಗಳು ನಡೆದಿವೆ. ಬಿಗ್ ಬಾಸ್ ನಾನ್ ಸ್ಟಾಪ್ ರಿಯಾಲಿಟಿ ಗೇಮ್ ಶೋ ಆಗಿದ್ದು ಅದು ತೆಲುಗಿನಲ್ಲಿ ಸಹಾ ಒಟಿಟಿಯಲ್ಲಿ ಇದು ಸಂಚಲನ ಮೂಡಿಸಿದೆ. ಈಗ ಸೀಸನ್ ಆರರಲ್ಲಿ ಭಾಗವಹಿಸುವ ಸ್ಪರ್ಧಿಗಳ ಬಗ್ಗೆಯೂ ಚರ್ಚೆ ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ವಾಹಿನಿಯು ಸ್ಟಾರ್ ನಿರೂಪಕಿ, ಹಿಂದೊಮ್ಮೆ ಸಿನಿಮಾ ನಟಿಯೂ ಆಗಿದ್ದ ಅಂದಗಾತಿ ಉದಯ ಭಾನು ಅವರನ್ನು ಕರೆತರಲು ಸಜ್ಜಾಗಿದೆ ಎನ್ನಲಾಗಿದ್ದು, ಈ ಸೀಸನ್‌ನಲ್ಲಿ ಅವರು ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ. ಒಂದು ಕಾಲದಲ್ಲಿ ಉದಯಬಾನು ಸ್ಟಾರ್ ಆಂಕರ್ ಆಗಿ ಮಿಂಚಿದ್ದವರು, ಸ್ಟಾರ್ ನಟಿಯರಷ್ಟೇ ಕ್ರೇಜ್ ಹೊಂದಿದ್ದ ನಿರೂಪಕಿ ಇವರು‌. ಮದುವೆಯ ನಂತರ, ಮಕ್ಕಳ ಆರೈಕೆಯಲ್ಲಿ ತೊಡಗಿಸಿಕೊಂಡ ಉದಯಭಾನು ನಿರೂಪಣಗೆ ಬ್ರೇಕ್ ಹಾಕಿದ್ದರು.

ಇದೀಗ ಮತ್ತೆ ಉದಯಭಾನು ನಿರೂಪಣೆಗೆ ಮರಳಿದ್ದಾರೆ. ಇತ್ತೀಚಿಗೆ ಒಂದು ಸಿನಿಮಾ ಪ್ರಿ ರಿಲೀಸ್ ನಿರೂಪಣೆ ಮಾಡಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಬಿಗ್ ಬಾಸ್ ತಂಡವು ಈಗಾಗಲೇ ಉದಯಭಾನು ಅವರನ್ನು ಸಂಪರ್ಕಿಸಿರುವುದು ಮಾತ್ರವೇ ಅಲ್ಲದೇ, ದೊಡ್ಡ ಮೊತ್ತದ ಸಂಭಾವನೆಯನ್ನು ಸಹಾ ಆಫರ್ ಮಾಡಿದ್ದಾರೆ ಎನ್ನುವುದು ಸದ್ಯಕ್ಕೆ ಟಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡಿರುವ ಸುದ್ದಿಯಾಗಿದ್ದು, ಬಿಗ್ ಬಾಸ್ ಗೆ ಉದಯಭಾನು ಬರಲಿದ್ದಾರಾ? ಎನ್ನುವುದು ಅವರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published.