ಸ್ಟಾರ್ ನಟ ವಿಕ್ರಂ ತೀವ್ರ ಅಸ್ವಸ್ಥ: ಹಾರ್ಟ್ ಅಟ್ಯಾಕ್ ನಿಂದ ನಟ ಆಸ್ಪತ್ರೆಗೆ ದಾಖಲು

Entertainment Featured-Articles Movies News

ತಮಿಳು ಚಿತ್ರರಂಗದ ಪ್ರಖ್ಯಾತ ನಟ, ಸ್ಟಾರ್ ನಟ ವಿಕ್ರಮ್ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣದಿಂದ ನಟ ವಿಕ್ರಮ್ ಅವರನ್ನು ನಿನ್ನೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ನಟನನ್ನು ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರುವ ಕಾರಣ ಇಂದು ನಟನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಘಟನೆ ಕುರಿತಾಗಿ ನಟನ ಅಭಿಮಾನಿಗಳು ತೀವ್ರ ಆ ತಂ ಕ ಕ್ಕೆ ಒಳಗಾಗಿದ್ದರು. ಅಭಿಮಾನ ನಟನ ಆರೋಗ್ಯದ ಅಪ್ಡೇಟ್ ಗಾಗಿ ಕಾಯುತ್ತಿದ್ದರು.

ಇಂದು ಸಂಜೆ ಆರು ಗಂಟೆಗೆ ನಟ ವಿಕ್ರಂ ಅವರು ಮಣಿರತ್ನಂ ಅವರ ನಿರ್ದೇಶನದ ಬಹುನಿರೀಕ್ಷಿತ, ಬಹು ತಾರಾಗಣದ ಸಿನಿಮಾ ಪೊನ್ನಿಯನ್ ಸೆಲ್ವನ್ ನ ಸಿನಿಮಾ ಟ್ರೈಲರ್ ಲಾಂಚ್ ನಲ್ಲಿ ಭಾಗವಹಿಸಬೇಕಿತ್ತು. ಆದರೆ ಈ ನಡುವೆ ನಟ ವಿಕ್ರಂ ಅವರಿಗೆ ಹೃದಯಾಘಾತವಾಗಿದ್ದು, ಇದು ಅಭಿಮಾನಿಗಳಿಗೆ ಆ ತಂ‌ ಕವನ್ನು ಉಂಟು ಮಾಡಿದೆ. ತಮ್ಮ ಅಭಿಮಾನ ನಟನ ಆರೋಗ್ಯದಲ್ಲಿ ಏರು ಪೇರಾಗಿದೆ ಎ‌ಂದು ತಿಳಿದ ನಟನ ಅಭಿಮಾನಿಗಳು ಆದಷ್ಟು ಬೇಗ ನಟ ವಿಕ್ರಂ ಅವರ ಆರೋಗ್ಯದಲ್ಲಿ ಸುಧಾರಣೆ ಆಗಲಿ ಎಂದು ಪ್ರಾರ್ಥಿಸಿದ್ದಾರೆ.

ನಟ ವಿಕ್ರಮ್ ಅವರ ಆರೋಗ್ಯದಲ್ಲಿ ಉಂಟಾದ ಸಮಸ್ಯೆಯ ವಿಚಾರ ತಿಳಿದು ಅವರ ಅಭಿಮಾನಿಗಳು ಚಿಂತಿತರಾಗಿದ್ದರು. ನಟ ವಿಕ್ರಮ್ ಅವರಿಗೆ 57 ವರ್ಷ ವಯಸ್ಸಾಗಿದೆ. ನಟ ವಿಕ್ರಮ್ ಅದ್ಭುತ ನಟ, ವೈವಿದ್ಯಮಯ ಪಾತ್ರಗಳನ್ನು ಮಾಡುವುದರಲ್ಲಿ ಅವರು ಎತ್ತಿದ ಕೈ. ಆರಂಭದಲ್ಲಿ ಸಣ್ಣ ಸಣ್ಣ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಅವರು ಅನಂತರ ನಾಯಕ ನಟನಾಗಿ ಬೆಳೆದ ರೀತಿ ಅಚ್ಚರಿಯನ್ನು ಉಂಟು ಮಾಡುತ್ತದೆ. ಒಂದಕ್ಕಿಂತ ಮತ್ತೊಂದು ವಿಭಿನ್ನ ಪಾತ್ರ ಮಾಡುವುದು ಅವರನ್ನು ಅನ್ಯ ನಟರಿಗಿಂತ ಭಿನ್ನವಾಗಿ ಇಟ್ಟಿದೆ.‌

Leave a Reply

Your email address will not be published.