ಸ್ಟಾರ್ ನಟಿಯರಿಗೆ ಶಾಕ್ : 2 ಕೋಟಿ ಅಭಿಮಾನಿಗಳಿಗೆ ಐ ಲವ್ ಯು ಹೇಳಿದ ನಟಿ ರಶ್ಮಿಕಾ ಮಂದಣ್ಣ

Written by Soma Shekar

Published on:

---Join Our Channel---

ನಟಿ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆಯ ವೇಗವು ಕೇವಲ ವೇಗವಾಗಿ ಉಳಿದಿಲ್ಲ, ಅವರ ಜನಪ್ರಿಯತೆಯ ನಾಗಾಲೋಟ ಇದೀಗ ದಕ್ಷಿಣದ ಟಾಪ್ ಹೀರೋಯಿನ್ ಗಳನ್ನು ಸಹಾ ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ದಿನ ಕಳೆದ ಹಾಗೆ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಅವರು ಸ್ಟೈಲಿಷ್ ಸ್ಟಾರ್ ಅರ್ಜುನ್ ಅವರ ಜೊತೆಗೆ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಈ ವರ್ಷ ಕ್ರಿಸ್ ಮಸ್ ಹಬ್ಬಕ್ಕೆ ತೆರೆಗೆ ಬರಲಿದೆ ಎನ್ನಲಾಗಿದೆ. ಈ ನಡುವೆ ರಶ್ಮಿಕಾ ಬರೋಬ್ಬರಿ ಎರಡು ಕೋಟಿ ಜನರ ಪ್ರೀತಿಯನ್ನು ಉಳಿಸಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹೌದು ಸೋಶಿಯಲ್ ಮೀಡಿಯಾ ದಲ್ಲಿ ನಟಿ ರಶ್ಮಿಕಾ ಅವರ ಹಿಂಬಾಲಕರ ಸಂಖ್ಯೆ ಎರಡು ಕೋಟಿ ಅಂದರೆ 20 ಮಿಲಿಯನ್ ಗೆ ತಲುಪಿದೆ.

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟು ಇದೀಗ ಬಹು ಭಾಷಾ ಹಾಗೂ ಬಹು ಬೇಡಿಕೆಯ ನಟಿಯಾಗಿರುವುದು ಮಾತ್ರವೇ ಅಲ್ಲದೇ ತೆಲುಗು ಸಿನಿಮಾಗಳಲ್ಲಿ ಈಗಾಗಲೇ ಸ್ಟಾರ್ ನಟಿಯ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ರಶ್ಮಿಕಾ ಅವರು ಅಡಿಯಿಟ್ಟು ಇನ್ನೂ ಐದು ವರ್ಷಗಳು ಸಹಾ ಆಗಿಲ್ಲ, ಆದರೆ ಅವರ ಜನಪ್ರಿಯತೆಯು ಮಾತ್ರ ದಕ್ಷಿಣದ ಸ್ಟಾರ್ ನಟಿಯರನ್ನು ಸಹಾ ಹಿಂದಿಕ್ಕಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸ್ಟಾರ್ ನಟಿಯರನ್ನು ಹಿಂದಿಕ್ಕುವ ಮೂಲಕ ಇದೀಗ ರಶ್ಮಿಕಾ ಸೋಶಿಯಲ್ ಮೀಡಿಯಾ ದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ದಕ್ಷಿಣದ ನಟಿ ಎನಿಸಿಕೊಂಡಿದ್ದಾರೆ.

ರಶ್ಮಿಕಾ ಅವರ ಈ ಸಾಧನೆಗೆ ನಟಿಯರಾದ ಕೀರ್ತಿ ಸುರೇಶ್, ಎಲಿ ಎವ್ರಾಮ್, ಅಶಿಕಾ ರಂಗನಾಥ್, ಸಂಯುಕ್ತ ಹೊರನಾಡು ಮುಂತಾದವರು ಶುಭ ಕೋರಿದ್ದಾರೆ. ಇನ್ನು ನಾವು ಸ್ಟಾರ್ ನಟಿಯರ ಫಾಲೋಯರ್ಸ್ ಬಗ್ಗೆ ನೋಡಿದರೆ ನಟಿ ಕಾಜಲ್ ಅಗರ್ವಾಲ್ ಅವರ ಫಾಲೋಯರ್ಸ್ ಸಂಖ್ಯೆ 1.93 ಮಿಲಿಯನ್, ಸಮಂತಾ ಅಕ್ಕಿನೇನಿ 1.8 ಮಿಲಿಯನ್, ಕಿಯಾರಾ ಅಡ್ವಾಣಿ 1.83 , ರಕುಲ್ ಪ್ರೀತ್ ಸಿಂಗ್ 1.73 ಮಿಲಿಯನ್ ಫಾಲೋಯರ್ಸ್ ಗಳನ್ನು ಹೊಂದಿದ್ದಾರೆ. ‌ಎರಡು ಕೋಟಿ ಫಾಲೋಯರ್ಸ್ ಹೊಂದಿದ ಖುಷಿ ಯಲ್ಲಿ ರಶ್ಮಿಕಾ ಕೂಡಾ ಫೋಟೋ ಶೂಟ್ ಮೂಲಕ ಮಿಂಚಿದ್ದಾರೆ.

20 ಮಿಲಿಯನ್ ಫಾಲೋಯರ್ಸ್ ಆಗಿರುವುದಕ್ಕೆ ನಿಮಗೆಲ್ಲರಿಗೂ ಸಹಾ ಐ ಲವ್ ಯೂ ಹೇಳಬೇಕೆನಿಸಿದೆ ಎಂದು ರಶ್ಮಿಕಾ ಬರೆದುಕೊಂಡು ತನ್ನ ಹೊಸ ಅಂದವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಹಂಚಿಕೊಂಡ ಹೊಸ ಫೋಟೋ ನೋಡಿ ಅವರ ಅನೇಕ ಅಭಿಮಾನಿಗಳು ಅವರಿಗೆ ಶುಭ ವನ್ನು ಕೋರುವುದು ಮಾತ್ರವೇ ಅಲ್ಲದೇ ಕಾಮೆಂಟ್ ಗಳ ಮೂಲಕ ಮೆಚ್ಚುಗೆಯನ್ನು ಹರಿಸುತ್ತಿದ್ದಾರೆ. ದಕ್ಷಿಣ ಸಿನಿ ರಂಗದಲ್ಲಿ ಮಾತ್ರವೇ ಅಲ್ಲದೇ ಬಾಲಿವುಡ್ ಕಡೆಗೆ ರಶ್ಮಿಕಾ ಪಯಣ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎನ್ನಬಹುದಾಗಿದೆ.

Leave a Comment