ಸ್ಟಾರ್ ನಟಿಗೇ ಹೀಗಾದ್ರೆ ಯುವಕಲಾವಿದರ ಪರಿಸ್ಥಿತಿ ಹೇಗೆ?? ಟಿವಿ ಚಾನೆಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ತಮನ್ನಾ

Written by Soma Shekar

Published on:

---Join Our Channel---

ಬಾಲಿವುಡ್ ನಲ್ಲೂ ಹೆಸರು ಮಾಡಿ, ದಕ್ಷಿಣ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿರುವ, ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ನಟಿ ತಮನ್ನಾ ಭಾಟಿಯಾ. ಈಗಾಗಲೇ ದಕ್ಷಿಣದಲ್ಲಿ ತೆಲುಗು, ತಮಿಳಿನಲ್ಲಿ ಬಹುತೇಕ ಸ್ಟಾರ್ ನಟರ ಜೊತೆಗೆಲ್ಲಾ ತೆರೆಯನ್ನು ಹಂಚಿಕೊಂಡಿರುವ ತಮನ್ನಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಹಾಗೂ ಬೇಡಿಕೆಯನ್ನು ಪಡೆದಿರುವ ನಟಿ ಕೂಡಾ ಹೌದು. ಸಿನಿಮಾ, ವೆಬ್ ಸಿರೀಸ್ ಗಳಲ್ಲಿ ಹೆಸರು ಮಾಡಿದ ನಂತರ, ಇತ್ತೀಚಿಗಷ್ಟೇ ಕಿರುತೆರೆಯ ಒಂದು ಅದ್ದೂರಿ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಪ್ರವೇಶ ನೀಡಿದ್ದರು‌.

ತೆಲುಗಿನ ಜೆಮಿನಿ ಟಿವಿಯಲ್ಲಿ ಬಹಳ ಗ್ರಾಂಡ್ ಆಗಿ, ಅದ್ದೂರಿ ಸೆಟ್ ಹಾಕಿ ಆರಂಭವಾಗಿದೆ ಮಾಸ್ಟರ್ ಶೆಫ್ ಅಡುಗೆ ಕಾರ್ಯಕ್ರಮ. ಈ ಶೋ ನ ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು ನಟಿ ತಮನ್ನಾ. ಕೋಟಿಗಳ ಮೊತ್ತದಲ್ಲಿ ನಟಿಗೆ ಸಂಭಾವನೆ ನೀಡುವ ವಿಷಯ ಕೂಡಾ ಸುದ್ದಿಯಾಗಿತ್ತು. ಶೋ ಕೂಡಾ ಬಹಳ ಜೋರಾಗಿಯೇ ಆರಂಭ ಕೂಡಾ ಆಯ್ತು. ಆದರೆ ಸುಮಾರು ಇಪ್ಪತ್ತು ಎಪಿಸೋಡ್ ಗಳ ನಂತರ ನಟಿ ತಮನ್ನಾ ಜಾಗಕ್ಕೆ ತೆಲುಗಿನ ಸ್ಟಾರ್ ನಿರೂಪಕಿ ಅನಸೂಯ ಭಾರದ್ವಾಜ್ ಎಂಟ್ರಿ ನೀಡಿದ್ದಾರೆ.

ಇದ್ದಕ್ಕಿದ್ದಂತೆ ಇಂತಹ ದೊಡ್ಡ ಬದಲಾವಣೆಗೆ ಕಾರಣವೇನು?? ಎಂದು ಪ್ರೇಕ್ಷಕರು ಆಶ್ಚರ್ಯ ಪಡುವಾಗಲೇ ಅದಕ್ಕೆ ಉತ್ತರ ಹೊರ ಬಿದ್ದಿದೆ. ನಟಿ ತಮನ್ನಾ ಕೆಲವು ಕಾರಣಗಳಿಂದ ಶೋ ನಿಂದ ಹೊರ ಬಂದಿದ್ದಾರೆ. ಅದು ಮಾತ್ರವೇ ಅಲ್ಲದೇ ನಟಿ ಈಗ ಶೋ ನಲ್ಲಿ ತನಗಾದ ತೊಂದರೆಯ ವಿ ರು ದ್ಧ ಕೋರ್ಟ್ ಮೆಟ್ಟಿಲೇರಲು ಸಿದ್ಧತೆಯನ್ನು ನಡೆಸಿದ್ದಾರೆ‌ ಎನ್ನಲಾಗಿದೆ. ಹೌದು ನಟಿ ತಮನ್ನಾಗೆ ಸಂಭಾವನೆ ಸರಿಯಾಗಿ ನೀಡಲಾಗಿಲ್ಲ ಎನ್ನುವ ಆರೋಪವೊಂದು ಕೇಳಿ ಬಂದಿದೆ. ತಮನ್ನಾ ಶೋ ದಿಂದ ಹೊರ ಬಂದಿರುವುದು ಅನೇಕರಿಗೆ ಬೇಸರವನ್ನು ಮೂಡಿಸಿದೆ.

ತಮನ್ನಾ ಮಾಸ್ಟರ್ ಶೆಫ್ ನ ಸೆಟ್ ನಲ್ಲೂ ತನ್ನ ಜೊತೆಗೆ ಸರಿಯಾಗಿ ನಡೆದುಕೊಂಡಿಲ್ಲ, ಸಂಭಾವನೆ ಸರಿಯಾಗಿ ನೀಡಿಲ್ಲ ಹಾಗೂ ವಾಹಿನಿ ತನಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ ಎನ್ನುವ ಕಾರಣವನ್ನು ನೀಡುತ್ತಾ, ಈ ವಿಚಾರವಾಗಿ ಕೋರ್ಟ್ ಮೆಟ್ಟಿಲನ್ನು ಏರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ‌. ಸುಮಾರು ಇಪ್ಪತ್ತು ಎಪಿಸೋಡ್ ಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಈಗ ಆ ಜಾಗಕ್ಕೆ ಅನುಸೂಯಾ ಬಂದಿದ್ದಾರೆ. ಇನ್ನು ನೆಟ್ಟಿಗರು ಸ್ಟಾರ್ ನಟಿಗೇ ಹೀಗಾದರೆ, ಬೇರೆಯವರ ಪರಿಸ್ಥಿತಿ ಏನು ಎನ್ನುತ್ತಿದ್ದಾರೆ.

Leave a Comment